ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕುಸಿದ ಪತ್ರಿಕಾ ಸ್ವಾತಂತ್ರ್ಯ, ರಾಷ್ಟ್ರೀಯತೆ ಹೆಸರಲ್ಲಿ ಬೆದರಿಕೆ: ವರದಿ

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ರಾಷ್ಟ್ರೀಯವಾದದ ಹೆಸರಿನಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮಿತಿ ಹೇರಲಾಗುತ್ತಿದೆ ಎಂದು ಅಂತರರಾಷ್ಟ್ರೀಯ ಮಟ್ಟದ ವರದಿ ತಿಳಿಸಿದ್ದು, ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತಕ್ಕೆ 136ನೇ ಸ್ಥಾನ ನೀಡಿದೆ

|
Google Oneindia Kannada News

ನವದೆಹಲಿ, ಏಪ್ರಿಲ್ 28: ಭಾರತದ ಪತ್ರಕರ್ತರು 135 ದೇಶಗಳಿಗೆ ಹೋಲಿಸಿದರೆ ಕಡಿಮೆ ಸ್ವತಂತ್ರರು. ಅದಕ್ಕೆ ಕಾರಣ 'ಹಿಂದೂ ರಾಷ್ಟ್ರೀಯತಾವಾದಿಗಳ' ಬೆದರಿಕೆ ಎಂದು ಪತ್ರಿಕಾ ಸ್ವಾತಂತ್ರ್ಯ ಸೂಚಿಯನ್ನು ಬಿಡುಗಡೆ ಮಾಡುವ ಗ್ಲೋಬಲ್ ಮೀಡಿಯಾ ವಾಚ್ ಡಾಗ್ ಹೇಳಿದೆ.

ಜಗತ್ತಿನಲ್ಲಿ ಪತ್ರಿಕಾ ಸ್ವಾತಂತ್ಯ್ರ ಹೇಗಿದೆ ಎಂದು ತಿಳಿಸುವ ವಾರ್ಷಿಕ ವರದಿ ಇದು. ಇದರಲ್ಲಿ 180 ರಾಷ್ಟ್ರಗಳ ಪೈಕಿ ಭಾರತಕ್ಕೆ 136ನೇ ಸ್ಥಾನ ಲಭಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೂರು ಸ್ಥಾನ ಕುಸಿದಿದೆ. ಭಾರತದ ಮಾಧ್ಯಮಗಳ ಮೇಲೆ ಹಿಂದೂ ರಾಷ್ಟ್ರೀಯವಾದಿಗಳ ಸಿದ್ಧಾಂತವನ್ನು ಹೇರಲಾಗುತ್ತಿದೆ. ಸ್ವಯಂ ನಿಯಂತ್ರಣ ಹೇರಿಕೆ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.

ಭಾರತದ ವಿಷಯಕ್ಕೆ ಬಂದರೆ ನೀಡಿದ ಶೀರ್ಷಿಕೆಯು "ಮೋದಿ (ಪ್ರಧಾನಮಂತ್ರಿ ನರೇಂದ್ರ ಮೋದಿ) ರಾಷ್ಟ್ರೀಯವಾದದ ಬೆದರಿಕೆ" ಎಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರ್ಗ ಎನಿಸಿಕೊಂಡಿರುವ ಅಮೆರಿಕವೇ 43ನೇ ಸ್ಥಾನಕ್ಕೆ ಕುಸಿದಿದೆ. ಕೆನಡಾ 22 ಹಾಗೂ ನ್ಯೂಜಿಲ್ಯಾಂಡ್ 13ನೇ ಸ್ಥಾನದಲ್ಲಿದೆ.[ಪತ್ರಕರ್ತ ಚಂದಿರನ್ ಕೊಲೆ ಯತ್ನ ಮತ್ತು ಒಂದು ಮನುಷ್ಯತ್ವದ ಪಾಠ]

Journalist

ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಆ ನಂತರದ ಎರಡು ಸ್ಥಾನದಲ್ಲಿ ಸ್ವೀಡನ್ ಹಾಗೂ ಫಿನ್ ಲ್ಯಾಂಡ್ ಇವೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಅಂದ ಮೇಲೆ ಉಳಿದ ಸ್ವಾತಂತ್ರ್ಯದ ಬಗ್ಗೆ ಏನು ಹೇಳುವುದಕ್ಕೆ ಸಾಧ್ಯ ಎಂದು ವಾಚ್ ಡಾಗ್ ನ ಕ್ರಿಸ್ಟೋಫ್ ಡೆಲೊರ್ ಪ್ಯಾರಿಸ್ ನಲ್ಲಿ ಬುಧವಾರ ಹೇಳಿದ್ದಾರೆ.

ಆಫ್ಘಾನಿಸ್ತಾನ, ಪ್ಯಾಲೆಸ್ತೇನ್, ಉಗಾಂಡ ಮತ್ತು ಅಲ್ಜೀರಿಯಾ ಸ್ಥಾನಕ್ಕೆ ಭಾರತಕ್ಕಿಂತಲೂ ಕೆಳಗಿದೆ. ಪಾಕಿಸ್ತಾನ 139, ಬಾಂಗ್ಲಾದೇಶ 146, ರಷ್ಯಾ 148 ಹಾಗೂ ಚೀನಾ 176ನೇ ಸ್ಥಾನದಲ್ಲಿದೆ. ವರದಿ ಉಲ್ಲೇಖಿಸಿರುವ ಪ್ರಕಾರ, ಆನ್ ಲೈನ್ ಅಭಿಯಾನದ ಮೂಲಕ ಪತ್ರಕರ್ತರ ಮೇಲೆ ದಾಳಿಗಳಾಗುತ್ತವೆ. ಕೆಲವು ಸಲ ದೈಹಿಕವಾಗಿ ದಾಳಿ ನಡೆಸುವ ಬೆದರಿಕೆ ಒಡ್ಡಲಾಗುತ್ತಿದೆ.[ಪತ್ರಕರ್ತರಿಗೆ ಬೆಂಕಿ ಹಚ್ಚುತ್ತೇನೆ ಎಂದು ಧಮ್ಕಿ ಹಾಕಿದ ಸಚಿವ]

ಇದುವರೆಗೆ ರಾಷ್ಟ್ರದ್ರೋಹದ ಪ್ರಕರಣದಲ್ಲಿ ಯಾವುದೇ ಪತ್ರಕರ್ತರಿಗೆ ಭಾರತದಲ್ಲಿ ಶಿಕ್ಷೆಯಾಗದಿದ್ದರೂ ಸರಕಾರದ ವಿರುದ್ಧ ಟೀಕೆ ಮಾಡುವವರ ವಿರುದ್ಧ ಐಪಿಸಿ ಸೆಕ್ಷನ್ 124A ಅಡಿ ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ವರದಿಗಾರಿಕೆ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಉಲ್ಲೇಖಿಸಲಾಗಿದೆ.

English summary
Journalists in India are less free than 135 other countries due to threats from "Hindu nationalists", according to an index of press freedom by a global media watchdog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X