ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಲಿಂಗಿಗಳ ವಿವಾಹ ಕಾನೂನು ಬದ್ಧಗೊಳ್ಳುತ್ತಾ?

By Vanitha
|
Google Oneindia Kannada News

ನವದೆಹಲಿ, ಜೂ, 30 : ಸಲಿಂಗಿಗಳ ಲೈಂಗಿಕ ಸಂಬಂಧವನ್ನು ಅಪರಾಧವೆಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಅನ್ನು ತೆಗೆದು ಹಾಕಬಹುದು ಮತ್ತು ಸಲಿಂಗಿಗಳ ವಿವಾಹವನ್ನು ಕಾನೂನು ಬದ್ಧಗೊಳಿಸಬಹುದು ಎಂದು ಕೇಂದ್ರ ಕಾನೂನು ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಕಳೆದ ವಾರವಷ್ಟೇ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪಿನಲ್ಲಿ ಸಲಿಂಗಿಗಳ ವಿವಾಹವನ್ನು ಕಾನೂನು ಬದ್ಧಗೊಳಿಸಿತ್ತು. ಆ ಹಿನ್ನೆಲೆಯಲ್ಲಿ ಸಚಿವ ಸದಾನಂದ ಗೌಡ ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ತೀರ್ಪನ್ನು ಭಾರತದಲ್ಲಿಯೂ ಮಾನ್ಯ ಮಾಡುವ ಮುನ್ನ ವ್ಯಾಪಕ ಸಂವಾದ, ಚರ್ಚೆ ನಡೆಸುವ ಅಗತ್ಯವಿದೆ ಎಂದವರು ಹೇಳಿದರು. [ಸಲಿಂಗಿಗಳ ಮದುವೆಗೆ ಅಸ್ತು ಎಂದ ಸುಪ್ರೀಂಕೋರ್ಟ್]

India could abolish Sec 377, says Union law minister Sadananda Gowda

ಈಗ ಕಂಡುಬರುವ ಜನಾಭಿಪ್ರಾಯವನ್ನು ಗಮನಿಸಿದರೆ ಸಲಿಂಗಿಗಳ ಲೈಂಗಿಕ ಸಂಬಂಧ ಹಾಗೂ ವಿವಾಹ ಸಂಬಂಧಗಳನ್ನು ಕಾನೂನು ಬದ್ಧಗೊಳಿಸಬೇಕೆಂಬ ಬಗ್ಗೆ ಜನರ ಒಲವು ಇರುವುದು ಕಂಡು ಬರುತ್ತದೆ.ಲಿಂಗಾಂತರಿಗಳ ಹಕ್ಕುಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ತರಲಾಗಿರುವ ಶಾಸನವು ಭಾರತದಲ್ಲಿನ ಸಲಿಂಗಿ ಸಮುದಾಯಕ್ಕೆ ಒಂದು ಮಾದರಿಯನ್ನು ಒದಗಿಸಬಲ್ಲುದು ಎಂದು ಗೌಡ ಹೇಳಿದರು.

2013ರ ಡಿಸೆಂಬರ್‌ನಲ್ಲಿ ಭಾರತದ ಸುಪ್ರೀಂ ಕೋರ್ಟ್‌, ದಿಲ್ಲಿ ಹೈಕೋರ್ಟ್‌ನ ತೀರ್ಪನ್ನು ಅಸಿಂಧುಗೊಳಿಸಿ 1860ರಷ್ಟು ಹಿಂದೆ ರೂಪಿಸಲ್ಪಟ್ಟಿದ್ದ ಐಪಿಸಿಯ 377ನೇ ಸೆಕ್ಷನ್ (ಸಲಿಂಗ ಕಾಮದ ಅಪರಾಧೀಕರಣ) ಅನ್ನು ಎತ್ತಿ ಹಿಡಿದಿದೆ.

English summary
The US Supreme Court gave the ruling in favour of gay marriage in the country.India may scrap Section 377 that criminalises same sex marriage and gay liaisons. Union law minister Sadananda Gowda has said that India could abolish IPC Sec 377 of the and that legislation for same sex marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X