ಚಿತ್ರಗಳು : ಗಣರಾಜ್ಯೋತ್ಸವ ಪರೇಡ್‌ಗಾಗಿ ಶ್ವಾನದಳದ ತಾಲೀಮು

Subscribe to Oneindia Kannada

ನವದೆಹಲಿ, ಜನವರಿ 19 : ಈ ಬಾರಿಯ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ರಾಜಪಥ್‌ನಲ್ಲಿ ಜನವರಿ 26ರಂದು ನಡೆಯುವ ಪರೇಡ್‌ನಲ್ಲಿ ಶ್ವಾನದಳ ಪಾಲ್ಗೊಳ್ಳಲಿದೆ. 26 ವರ್ಷಗಳ ಬಳಿಕ ಶ್ವಾನದಳ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಹೆಜ್ಜೆ ಹಾಕಲಿದೆ. [

67ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಆಗಮಿಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ವಿದೇಶಿ ಯೋಧರ ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡಲಾಗಿದೆ. [ಚಿತ್ರಗಳು : ದೆಹಲಿಯಲ್ಲಿ ಫ್ರಾನ್ಸ್ ಯೋಧರ ತಾಲೀಮು]

ಫ್ರಾನ್ಸ್‌ನ 35ನೇ ಸಶಸ್ತ್ರ ಪಡೆಯ 56 ಯೋಧರು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ನವದೆಹಲಿಗೆ ಆಗಮಿಸಿರುವ ಯೋಧರು ತಾಲೀಮಿನಲ್ಲಿ ತೊಡಗಿದ್ದಾರೆ. ಫ್ರಾನ್ಸ್‌ ಸೈನಿಕರ ಪರೇಡ್ ಜೊತೆಗೆ ಭಾರತೀಯ ಸೇನೆಯ ಶ್ವಾನ ದಳ ಪರೇಡ್‌ನ ರಂಗನ್ನು ಹೆಚ್ಚಿಸಲಿದೆ. [ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]

26 ವರ್ಷಗಳ ಬಳಿಕ ಭಾರತೀಯ ಸೇನೆಯ ಶ್ವಾನದಳಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. 36 ಶ್ವಾನಗಳು ರಾಜಪಥ್‌ನಲ್ಲಿ ಠೀವಿಯಿಂದ ಹೆಜ್ಜೆ ಹಾಕಲಿವೆ. ಶ್ವಾನದಳದ ತಾಲೀಮಿನ ಚಿತ್ರಗಳು ಇಲ್ಲಿವೆ..[ಪಿಟಿಐ ಚಿತ್ರಗಳು]

ಪರೇಡ್‌ನಲ್ಲಿ ಹೆಜ್ಜೆ ಹಾಕಲಿದೆ ಶ್ವಾನದಳ

ಈ ಬಾರಿಯ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಜನವರಿ 26ರಂದು ರಾಜಪಥ್‌ನಲ್ಲಿ ನಡೆಯುವ ಪರೇಡ್‌ನಲ್ಲಿ ಶ್ವಾನದಳ ಪಾಲ್ಗೊಳ್ಳುತ್ತಿದೆ. 26 ವರ್ಷಗಳ ಬಳಿಕ ಶ್ವಾನದಳಕ್ಕೆ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ.

ಠೀವಿಯಿಂದ ಹೆಜ್ಜೆ ಹಾಕಲಿದೆ ಶ್ವಾನದಳ

ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸೈನಿಕರ ಜೀವವನ್ನು ಉಳಿಸಿರುವ ಶ್ರೇಷ್ಠ ದರ್ಜೆಯ ಮತ್ತು ಅತ್ಯುತ್ತಮ ತರಬೇತಿ ಪಡೆದಿರುವ 36 ಶ್ವಾನಗಳು ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಠೀವಿಯಿಂದ ತಮ್ಮ ನಿರ್ವಾಹಕರ ಜತೆಗೆ ಹೆಜ್ಜೆ ಹಾಕಲಿವೆ.

36 ಶ್ವಾನಗಳ ಆಯ್ಕೆ

ಭಾರತೀಯ ಸೇನೆಯ ಶ್ವಾನದಳದಲ್ಲಿ ಸುಮಾರು 1,2000 ಲ್ಯಾಬ್ರಡೋರ್‌ಗಳು ಮತ್ತು ಜರ್ಮನ್‌ ಶೆಫ‌ರ್ಡ್‌ ನಾಯಿಗಳಿವೆ. ಇವುಗಳಲ್ಲಿ 36 ಶ್ವಾನಗಳನ್ನು ಪೆರೇಡ್‌ಗಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಪ್ರತಿದಿನ ಇವು ತಾಲೀಮು ನಡೆಸುತ್ತಿವೆ.

ಶ್ವಾನ ತರಬೇತಿ ಶಾಲೆಗಳು ಆರಂಭ

ಮೀರತ್‌ನಲ್ಲಿ 1960ರಲ್ಲಿ ಸೇನಾ ನಾಯಿಗಳ ತರಬೇತಿ ಶಾಲೆಯನ್ನು ಆರಂಭಿಸಲಾಗಿತ್ತು. ಇಲ್ಲಿ ತರಬೇತಿ ಪಡೆದ ಶ್ವಾನಗಳನ್ನು ಸ್ಫೋಟಕ ವಸ್ತುಗಳ ಪತ್ತೆ, ನೆಲಬಾಂಬುಗಳ ಪತ್ತೆ ಸೇರಿದಂತೆ ಹಲವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ.

ಒಂಟೆದಳ, ಅರೆಸೇನಾಪಡೆಗೆ ಅವಕಾಶವಿಲ್ಲ

ಈ ಬಾರಿಯ ಪಡರೇಡ್‌ನಲ್ಲಿ ಭಾಗವಹಿಸಲು ಒಂಟೆ ದಳಕ್ಕೆ ಅವಕಾಶ ನೀಡಲಾಗಿಲ್ಲ. ಅರೆಸೇನಾಪಡೆಯ ಪಥಸಂಚಲನಕ್ಕೂ ಅವಕಾಶ ನೀಡಿಲ್ಲ. ಇವುಗಳ ಬದಲು ಶ್ವಾನದಳ ಮತ್ತು ಫ್ರಾನ್ಸ್ ಸೈನಿಕರ ಪಥಸಂಚಲನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

English summary
Indian Army dogs will march down the Rajpath for Republic day parade on January 26 after a gap of 26 years. Here is a rehearsal pictures.
Please Wait while comments are loading...