ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಡಿ : ಕನ್ನಡಿಗರು ಹೆಮ್ಮೆ ಪಡುವ ಚಿತ್ರಗಳಿವು

By Mahesh
|
Google Oneindia Kannada News

ನವದೆಹಲಿ, ಸೆ.28: ಕನ್ನಡಿಗ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದುಳಿದ ಜನಾಂಗಕ್ಕೆ ಸೇರಿದ ಕರ್ನಾಟಕದ ಹಳ್ಳಿಯಿಂದ ದಿಲ್ಲಿಯ ಉನ್ನತ ಗೌರವಯುತ ಸ್ಥಾನಕ್ಕೇರಿದ ದತ್ತು ಅವರ ಸಾಧನೆ ಕಂಡು ಕನ್ನಡಿಗರು ಹೆಮ್ಮೆ ಪಡುವ ಸಂದರ್ಭ ಬಂದಿದೆ.

ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ದತ್ತು ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. 63 ವರ್ಷ ವಯಸ್ಸಿನ ಎಚ್ಎಲ್ ದತ್ತು ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.[ದತ್ತು ನೂತನ ಸಿಜೆಐ]

ಈ ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ರಾಜ್ಯ ಸಭಾ ಉಪ ಸಭಾಪತಿ ಪಿಜೆ ಕುರಿಯನ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಎಂ ವೆಂಕಯ್ಯ ನಾಯ್ಡು, ಅನಂತ್ ಕುಮಾರ್, ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಕಾಂಗ್ರೆಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಹಾಗೂ ರಾಜೀವ್ ಶುಕ್ಲಾ ಮಾತ್ರ ಹಾಜರಿದ್ದರು.

ಈ ಸಮಾರಂಭದಲ್ಲಿ ಕರ್ನಾಟಕದ ಪರವಾಗಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್, ರಾಜ್ಯ ಕಾನೂನು ಸಚಿವ ಟಿ.ಬಿ ಜಯಚಂದ್ರ ಹಾಗೂ ಹೈಕೋರ್ಟ್ ಸೇರಿದಂತೆ ರಾಜ್ಯದ ಹೈಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ಭಾಗಿಯಾಗಿದ್ದಾರೆ.

ಕರ್ನಾಟಕ, ಕೇರಳ, ಪಂಜಾಬ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ದತ್ತು ಅವರು 2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ನಡೆಸುತ್ತಿರುವ ಪೀಠದ ನೇತೃತ್ವ ವಹಿಸಿದ್ದಾರೆ. ಈ ಹಿಂದೆ ಅವರನ್ನು ಲೋಕಪಾಲ ಆಯ್ಕೆ ಸಮಿತಿಗೂ ಶಿಫಾರಸು ಮಾಡಲಾಗಿತ್ತು. ದತ್ತು ಅವರು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದ ಚಿತ್ರಗಳು ಇಲ್ಲಿವೆ ನೋಡಿ...

ರಾಷ್ಟ್ರಪತಿ ಹಾಗೂ ಸಿಜೆಐ ವಂದನೆ, ಪ್ರತಿವಂದನೆ

ರಾಷ್ಟ್ರಪತಿ ಹಾಗೂ ಸಿಜೆಐ ವಂದನೆ, ಪ್ರತಿವಂದನೆ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಎಚ್ ಎಲ್ ದತ್ತು ಅವರು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಚಿತ್ರ: ಪಿಟಿಐ

14 ತಿಂಗಳುಗಳ ಕಾಲ ಸಿಜೆಐ ಆಗಿ ದತ್ತು

14 ತಿಂಗಳುಗಳ ಕಾಲ ಸಿಜೆಐ ಆಗಿ ದತ್ತು

ಇಂದಿನಿಂದ 14 ತಿಂಗಳುಗಳ ಕಾಲ ಸಿಜೆಐ ಆಗಿ ದತ್ತು ಅವರ ಅಧಿಕಾರ ಅವಧಿ ಇರುತ್ತದೆ. 2015ರ ಡಿಸೆಂಬರ್‌ 3ರಂದು ಅಂತ್ಯಗೊಳ್ಳಲಿದೆ.

ಕಾಂಗ್ರೆಸ್ ನಾಯಕರ ಗೈರುಹಾಜರಿ

ಕಾಂಗ್ರೆಸ್ ನಾಯಕರ ಗೈರುಹಾಜರಿ

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಪ್ರಮುಖ ನಾಯಕರ ಗೈರುಹಾಜರಿ ಎದ್ದುಕಾಣುತ್ತಿತ್ತು.

ಕರ್ನಾಟಕದಿಂದ ನಾಲ್ಕನೇ ಸಿಜೆಐ

ಕರ್ನಾಟಕದಿಂದ ನಾಲ್ಕನೇ ಸಿಜೆಐ

ಕರ್ನಾಟಕದ ಮೂಲದ ಇ.ಎಸ್‌. ವೆಂಕಟರಾಮಯ್ಯ (1989), ಎಂ.ಎನ್‌. ವೆಂಕಟಾಚಲಯ್ಯ (1993), ಎಸ್‌. ರಾಜೇಂದ್ರ ಬಾಬು (2004) ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಮೇಲೆ ಸಿಜೆಐಯಾಗಿ ಎಚ್ ಎಲ್ ದತ್ತು ಕಾರ್ಯ ನಿರ್ವಹಿಸಲಿದ್ದಾರೆ.

ಪಿಟಿಐ ಸಂಗ್ರಹ ಚಿತ್ರ: ತಿರುಪತಿ ತಿರುಮಲದಲ್ಲಿ ಎಚ್ ಎಲ್ ದತ್ತು

English summary
In Pictures: Justice Handyala Lakshminarayanaswamy Dattu was sworn in as the Chief Justice of the Supreme Court of India in a ceremony held today (Sept 28, 2014) at Rashtrapati Bhavan, New Delhi. He made and subscribed to the oath of office before the President Pranab Mukherjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X