ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಗಣರಾಜ್ಯೋತ್ಸವಕ್ಕೆ ಯೋಧರ ತಾಲೀಮು

|
Google Oneindia Kannada News

ನವದೆಹಲಿ, ಜನವರಿ 22 : 67ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೇನಾಪಡೆಗಳು, ಫ್ರಾನ್ಸ್ ಸೈನಿಕರು, ರಾಜಪಥ್‌ನಲ್ಲಿ ತಾಲೀಮು ನಡೆಸುತ್ತಿದ್ದಾರೆ. ಉಗ್ರರ ದಾಳಿ ನಡೆದರೆ ಕೈಗೊಳ್ಳುವ ರಕ್ಷಣಾ ಕಾರ್ಯಾಚರಣೆ ಕುರಿತು ಅಣಕು ಪ್ರದರ್ಶನವನ್ನು ಯೋಧರು ನಡೆಸಿದ್ದಾರೆ.

ಗಣರಾಜ್ಯೋತ್ಸವದ ಪಥಸಂಚಲನ ನಡೆಯುವ ರಾಜಪಥ್‌ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳನ್ನು ದೆಹಲಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಜನವರಿ 26ರಂದು ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮುನ್ನಚ್ಚರಿಕೆ ನೀಡಿದ್ದು, ಭಾರೀ ಭದ್ರತೆ ಒದಗಿಸಲಾಗಿದೆ. [ಗಣರಾಜ್ಯೋತ್ಸವಕ್ಕೆ ವಾಯುಪಡೆ ತಾಲೀಮು]

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಫ್ರಾನ್ಸ್‌ ಸೇನಾಪಡೆಯ ತುಕಡಿಯೊಂದು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ಸೇನಾ ಪಡೆಗಳ ಜೊತೆಗೆ ಹೆಜ್ಜೆ ಹಾಕಲಿದೆ. [ಫ್ರಾನ್ಸ್ ಸೈನಿಕರ ಪಥ ಸಂಚಲನ]

ದೆಹಲಿಯಲ್ಲಿನ ಮೈ ಕೊರೆಯುವ ಚಳಿಯ ನಡುವೆಯೂ ಯೋಧರು ತಮ್ಮ ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸಲು ತಾಲೀಮು ನಡೆಸುತ್ತಿದ್ದಾರೆ. ಯೋಧರ ತಾಲೀಮಿನ ಚಿತ್ರಗಳು ಇಲ್ಲಿವೆ ನೋಡಿ....[ಪಿಟಿಐ ಚಿತ್ರಗಳು]

ರಾಷ್ಟ್ರಪತಿಗಳ ಬೆಂಗಾವಲು ಪಡೆ ತಾಲೀಮು

ರಾಷ್ಟ್ರಪತಿಗಳ ಬೆಂಗಾವಲು ಪಡೆ ತಾಲೀಮು

ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಬೆಂಗಾವಲು ಪಡೆಯಾಗಿ ಕಾರ್ಯ ನಿರ್ವಹಿಸುವ ಯೋಧರು ಶುಕ್ರವಾರ ತಾಲೀಮು ನಡೆಸುವಾಗ ಕಂಡುಬಂದಿದ್ದು ಹೀಗೆ.

ಯೋಧರ ಸಹಾಸ ಪ್ರದರ್ಶನ

ಯೋಧರ ಸಹಾಸ ಪ್ರದರ್ಶನ

ರಾಜಪಥ್‌ನಲ್ಲಿ ಜನವರಿ 26ರಂದು ಸಾಹಸ ಪ್ರದರ್ಶನ ನಡೆಸುವ ಯೋಧರು ಶುಕ್ರವಾರ ತಾಲೀಮು ನಡೆಸಿದರು.

ತಾಲೀಮು ನಡೆಸಿದ ಫ್ರೆಂಚ್ ಸೈನಿಕರು

ತಾಲೀಮು ನಡೆಸಿದ ಫ್ರೆಂಚ್ ಸೈನಿಕರು

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್‌ನ 35ನೇ ಸಶಸ್ತ್ರ ಪಡೆಯ 56 ಯೋಧರು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಪರೇಡ್ ನಡೆಸುವಾಗ ಫ್ರೆಂಚ್ ಸೈನಿಕರು ಕಂಡಿದ್ದು ಹೀಗೆ.

ಯೋಧರ ಪಥ ಸಂಚಲನ

ಯೋಧರ ಪಥ ಸಂಚಲನ

ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಯೋಧರು ಒಂಟೆಗಳ ಜೊತೆ ರಾಜಪಥ್‌ನಲ್ಲಿ ಇಂದು ಹೆಜ್ಜೆ ಹಾಕಿದರು.

ಯೋಧರ ಬೈಕ್ ಸಾಹಸ

ಯೋಧರ ಬೈಕ್ ಸಾಹಸ

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುವ ಯೋಧರು ಇಂದು ರಾಜಪಥ್‌ನಲ್ಲಿ ಬೈಕ್‌ನಲ್ಲಿ ಸಾಹಸ ಪ್ರದರ್ಶನದ ತಾಲೀಮು ನಡೆಸಿದರು.

English summary
Army daredevils rehearsal for the 67th Republic Day at Rajpath in New Delhi. Here is a pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X