ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಂದರಿ ಶಾಜಿಯಾಗೆ ನನ್ನ ಮತ ಅಂದ್ರು ಕಾಟ್ಜು

By Kiran B Hegde
|
Google Oneindia Kannada News

ನವದೆಹಲಿ, ಜ. 31: ಈಗಾಗಲೇ ಹಲವು ವಿವಾದಿತ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಮತ್ತೆ ಸುದ್ದಿಯಾಗಿದ್ದಾರೆ.

ಈ ಬಾರಿ ಅವರ ಟೀಕೆಗೆ ಗುರಿಯಾಗಿರುವುದು ಕಿರಣ್ ಬೇಡಿ ಹಾಗೂ ಶಾಜಿಯಾ ಇಲ್ಮಿ. "ಕಿರಣ್ ಬೇಡಿ ಅವರಿಗಿಂತ ಶಾಜಿಯಾ ಇಲ್ಮಿ ಇನ್ನೂ ಸುಂದರವಾಗಿದ್ದಾರೆ. ಆದ್ದರಿಂದ ಶಾಜಿಯಾ ಇಲ್ಮಿ ಅವರನ್ನೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕಿತ್ತು. ಆಗ ಬಿಜೆಪಿ ಖಂಡಿತವಾಗಿ ನವದೆಹಲಿ ಚುನಾವಣೆ ಗೆಲ್ಲುತ್ತಿತ್ತು" ಎಂದು ಟ್ವೀಟ್ ಮಾಡಿದ್ದಾರೆ.

ilmi

ಕ್ರೋಶಿಯಾ ಉದಾಹರಣೆ : ತಮ್ಮ ಹೇಳಿಕೆಗೆ ಅವರು ಉದಾಹರಣೆ ಸಹಿತ ಸಮರ್ಥನೆಯನ್ನೂ ಕೊಟ್ಟಿದ್ದಾರೆ. "ಜನರು ಸುಂದರ ಮುಖ ಹೊಂದಿರುವವರನ್ನು ಮತ ಹಾಕಿ ಆರಿಸುತ್ತಾರೆ. ಇದಕ್ಕೆ ಕ್ರೋಶಿಯಾ ದೇಶವೇ ಉದಾಹರಣೆ. ಅಲ್ಲಿನ ಜನರು ಸುಂದರ ಮಹಿಳೆಯನ್ನು ತಮ್ಮ ನೇತಾರಳಾಗಿ ಆರಿಸಿಕೊಂಡಿದ್ದಾರೆ. ಆದ್ದರಿಂದ ಮತವನ್ನೇ ಹಾಕದ ನನ್ನಂತವರೂ ಶಾಜಿಯಾ ಅವರನ್ನು ನೋಡಿ ಮತ ಹಾಕುತ್ತಾರೆ" ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. [ಸುಂದರಿ ಕತ್ರಿನಾ ಪ್ರಧಾನಿ ಆಗ್ಲಿ ಅಂತಾರೆ ಕಾಟ್ಜು]

ತಮ್ಮ ಟ್ವೀಟ್‌ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದಾಗ ಜನರ ಆಕ್ರೋಶ ಕಡಿಮೆ ಮಾಡಲು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಏನೆಂದರೆ "ಕೆಲವರು ನನ್ನ ಮೊದಲಿನ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ನಾನು ಹಾಸ್ಯ ಮನೋಭಾವ ರೂಢಿಸಿಕೊಳ್ಳಿ ಎಂದು ಸಲಹೆ ನೀಡುತ್ತೇನೆ. ನಾನು ಹಾಸ್ಯಮಯವಾಗಿ ಟ್ವೀಟ್ ಮಾಡಿದ್ದೇನೆ. ಅದನ್ನು ದೊಡ್ಡದು ಮಾಡಬೇಡಿ" ಎಂದು ತಿಳಿಸಿದ್ದಾರೆ.

ಕತ್ರಿನಾ ಪ್ರಧಾನಿಯಾಗಲಿ ಎಂದಿದ್ರು : ಇದಕ್ಕೂ ಮೊದಲು ಅವರು ಕತ್ರಿನಾ ಕೈಫ್ ಪ್ರಧಾನಿಯಾಗಬೇಕಿತ್ತು ಎಂದು ಹೇಳಿ ಹುಬ್ಬು ಕುಣಿಸಿದ್ದರು. ಇದು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.

ನಂತರ ತಮ್ಮ ಧೋರಣೆಗಳನ್ನು ಬ್ಲಾಗ್‌ನಲ್ಲಿ ಹೀಗೆ ಸಮರ್ಥಿಸಿಕೊಂಡಿದ್ದಾರೆ. "ಜನರಿಗೆಲ್ಲಾ ಏನಾಗಿದೆ. ನನ್ನಂತಹ ವೃದ್ಧನೋರ್ವ ಸುಂದರ ಮಹಿಳೆಯನ್ನು ಹೊಗಳುವುದು ಇಷ್ಟವಾಗುವುದಿಲ್ಲವೇ? ಅವರನ್ನು ನಾನು ಹೊಗಳಿದೆ ಎಂದರೆ ಆಕೆಯೊಂದಿಗೆ ತಪ್ಪು ನಡತೆ ತೋರಿದೆ ಎಂದಲ್ಲ" ಎಂದು ಬುದ್ಧಿವಾದ ಹೇಳಿದ್ದಾರೆ.

English summary
Justice Markandey Katju has said that BJP leader Shazia Ilmi is much more beautiful than the party's chief ministerial candidate Kiran Bedi. Even a person like me who does not vote would have voted for Shazia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X