ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ನಿರ್ಧಾರದಿಂದ ಗೂಗಲ್ ನಲ್ಲಿ ಹುಡುಕಿದ್ದೇನು ಗೊತ್ತಾ?

By Prithviraj
|
Google Oneindia Kannada News

ನವದೆಹಲಿ, ನವೆಂಬರ್, 13: ರೂ 500 ಹಾಗು ರೂ.1000 ಮುಖಬೆಲೆಯ ನೋಟುಗಳನ್ನು ನವೆಂಬರ್ 8 ಮಧ್ಯರಾತ್ರಿಯಿಂದಲೇ ನಿಷೇಧಿಸುತ್ತಿರುವುದಾಗಿ ಪ್ರಧಾನಿ ಪ್ರಕಟಿಸಿದ ಕೂಡಲೇ ಹಲವು ಮಂದಿ ಗೊಂದಲಕ್ಕೆ ಈಡಾದರು.

ನಿಷೇಧವಾಗಿರುವ ನೋಟುಗಳನ್ನು ಏನು ಮಾಡಬೇಕು. ಹೇಗೆ ವಿನಿಮಯ ಮಾಡಿಕೊಳ್ಳಬೇಕು ಎಂಬುದು ಸಾಮಾನ್ಯರ ಚಿಂತೆಯಾಗಿತ್ತು. ಆದರೆ ಕಾಳಧನಿಕರು ಮಾತ್ರ ಕೂಡಿಟ್ಟ ಅಕ್ರಮ ಹಣವನ್ನು ಏನು ಮಾಡುವುದು ಎಂದು ತಲೆ ಕೆರೆದುಕೊಂಡು ನಿದ್ದೆ ಮಾಡದೆ ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. [ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]

How to convert black into white the google trending search

ಈ ಕಾರಣಕ್ಕಾಗಿಯೇ ಇರಬೇಕು ಪ್ರಧಾನಿ ಮೋದಿ ಹಳೆ ನೋಟುಗಳ ಮೇಲೆ ನಿಷೇಧ ಹೇರುತ್ತಿರುವುದಾಗಿ ಘೋಷಿಸುತ್ತಿದ್ದಂತೆಯೇ ದೇಶದ ಹಲವು ಮಂದಿ ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಳ್ಳುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಾಡಿದ್ದಾರೆ!

ಇನ್ನೂ ಸ್ವಾರಸ್ಯಕರ ಸಂಗತಿ ಏನೆಂದರೆ ಈ ರೀತಿ ಹುಡುಕಿರುವ ರಾಜ್ಯಗಳ ಪೈಕಿ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ ಮೊದಲ ಸ್ಥಾನದಲ್ಲಿದೆ. [ಯಾವ ನಿಯಮದಡಿ ನೋಟುಗಳನ್ನು ನಿಷೇಧಿಸಲಾಗಿದೆ?]

ಇತ್ತೀಚೆಗೆ ಬಿಡುಗಡೆಯಾದ ಗೂಗಲ್ ಟ್ರೆಂಡಿಂಗ್ ಲಿಸ್ಟ್ ನಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಬ್ಲಾಕ್ ಮನಿಯನ್ನು ವೈಟ್ ಮನಿಯಾಗಿ ಪರಿವರ್ತಿಸಿಕೊಳ್ಳಲು ಗುಜರಾತ್ ನಂತರ, ಮಹಾರಾಷ್ಟ್ರ, ಹರ್ಯಾಣ, ಪಂಜಾಬ್ ರಾಜ್ಯಗಳ ಜನರೇ ಅಧಿಕವಾಗಿದ್ದಾರೆ.

ಇನ್ನು ಇದಾದ ನಂತರ ಹೊಸದಾಗಿ ಬಿಡುಗಡೆ ಮಾಡಿದ ನೋಟುಗಳಲ್ಲಿನ ಫೀಚರ್ಸ್ ಗಳನ್ನು ತಿಳಿಯಲು ಹೆಚ್ಚಾಗಿ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಹುಡುಕಾಟ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.[ಹೊಸ ನೋಟುಗಳು ಪ್ರಿಂಟ್ ಆಗಿದ್ದು ಎಲ್ಲಿ ಗೊತ್ತಾ?]

ಏನೇ ಆದರೂ ಕಪ್ಪು ಹಣವನ್ನು ಹೊರತೆಗೆಯಲು ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿದರೆ, ಹಣವನ್ನು ಹೇಗೆ ವಿನಿಮಯ ಮಾಡಿಕೊಳ್ಳುವುದು ಎಂಬ ಪ್ರಯತ್ನದಲ್ಲಿ ಹಲವು ಮಂದಿ ಕಪ್ಪು ಕುಬೇರರು ತಲೆಕೆಡಿಸಿಕೊಳ್ಳುತ್ತಿದ್ದಾರೆ.

English summary
After Prime minister Narendra Modi decision to demonitize Rs 500 and Rs 1000 lot of netizens searched for a particular topic in Google. 'How to convert black into white' was the most searched keyword.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X