ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮೇಲಿನ ನಿಷೇಧ ತೆರವು

By Vanitha
|
Google Oneindia Kannada News

ನವದೆಹಲಿ,ಫೆಬ್ರವರಿ, 02: ಪೋಷಕರೇ ಹೆಣ್ಣು ಭ್ರೂಣ ಹತ್ಯೆಗೆ ತೆರಳಿದ್ದಲ್ಲಿ ನೀವು ಜೈಲು ಪಾಲಾಗುವುದು ಗ್ಯಾರಂಟಿ. ಏಕೆಂದರೆ ಮುಂದಿನ ದಿನಗಳಲ್ಲಿ ಗರ್ಭಿಣಿ ಹಾಗೂ ಇನ್ನು ಹುಟ್ಟದ ಮಗುವನ್ನು ಕಡ್ಡಾಯವಾಗಿ ನೋಂದಾವಣೆ ಮಾಡುವ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಹೆಣ್ಣು ಭ್ರೂಣ ಹತ್ಯೆ ತಡೆಯಲು ಹಾಗೂ ಭ್ರೂಣ ಹತ್ಯೆಗೆ ಪ್ರಯತ್ನಿಸುವ ಮಂದಿಯನ್ನು ಪತ್ತೆ ಹಚ್ಚಲು ಭ್ರೂಣದ ಲಿಂಗ ಪತ್ತೆಯ ಪರೀಕ್ಷೆ ಮೇಲಿರುವ ನಿಷೇಧ ತೆರವುಗೊಳಿಸಲಾಗುತ್ತದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ತಿಳಿಸಿದರು.[ತಾಯ್ತನದ ಅವಧಿಯಲ್ಲಿ ಆರೋಗ್ಯದ ಆರೈಕೆ ಹೀಗಿರಲಿ]

Government may make Sex Test Mandatory to curb Female Foeticide

ಈ ನಿಯಮವನ್ನು ಪಾಲಿಸದೆ ಭ್ರೂಣ ಹತ್ಯೆಗೆ ಪ್ರಯತ್ನ ಮಾಡಿದ್ದಲ್ಲಿ ಯಾವ ಕಾರಣಕ್ಕೆ ಗರ್ಭಪಾತ ಮಾಡಿಸಲಾಗಿದೆ ಎಂಬುದಕ್ಕೆ ಕಾರಣ ಸಹಿತ ದಾಖಲೆ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.[ಯಶಸ್ವಿ ಗರ್ಭಧಾರಣೆಗೆ ಉಪಯುಕ್ತ ಸಲಹೆಗಳು]

2011 ರ ಜನಗಣತಿಯ ಪ್ರಕಾರ ಭಾರತದಲ್ಲಿ 1,000 ಪುರುಷರಿಗೆ 943 ಮಹಿಳೆಯರ ಅನುಪಾತವಿದೆ. ಹರಿಯಾಣದಲ್ಲಿ ಈ ಸಂಖ್ಯೆ ಪ್ರಮಾಣ ಕೆಳ ಮಟ್ಟದಲ್ಲಿದ್ದು, 1,000 ಗಂಡು ಮಕ್ಕಳಿಗೆ 889 ಹೆಣ್ಣು ಮಕ್ಕಳಿದ್ದಾರೆ. ಈ ಸಂಖ್ಯಾನುಪಾತದಲ್ಲಿ ಬೆಳವಣಿಗೆ ತರುವುದೇ ಈ ವ್ಯವಸ್ಥೆಯ ಮೂಲ ಉದ್ದೇಶ ಎಂದು ಹೇಳಿದರು.

English summary
Government may make Sex Determination Test Mandatory to curb Female Foeticide Told by Union women Child decelopment Minister Maneka Gandhi on Monday, February 01st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X