ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್ ಎಂ ಚಾನೆಲ್ ಪಟ್ಟಿಗೆ ಸೇರಿದ ವಿವಿಧ ಭಾರತಿ

By Mahesh
|
Google Oneindia Kannada News

ನವದೆಹಲಿ, ಏ.14: ಆಕಾಶವಾಣಿ(AIR) ವಿವಿಧ ಭಾರತಿ ವಾಹಿನಿ ಇನ್ಮುಂದೆ ಎಫ್ ಎಂ ತರಂಗಾಂತರಗಳಲ್ಲಿ ಲಭ್ಯವಾಗಲಿದೆ. ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಕೇಳುಗರಿಗೆ ಈ ಸೌಲಭ್ಯವನ್ನು ಲೋಕಾರ್ಪಣೆ ಮಾಡಲಾಗಿದೆ.

ಮಾಹಿತಿ ಮತ್ತು ಪ್ರಸಾರ ಸಚಿವ ಅರುಣ್ ಜೇಟ್ಲಿ ಅವರು ಈ ಹೊಸ ಸೌಲಭ್ಯವನ್ನು ಜನರಿಗೆ ನೀಡಿ ಮೊದಲ ಭಾಷಣವನ್ನು ಎಫ್ ಎಂ ವಾಹಿನಿ ಮೂಲಕ ಬಿತ್ತರಿಸಿದರು. ವಿವಿಧ ಭಾರತಿ ಎಫ್ ಎಂ ವಾಹಿನಿ ದೆಹಲಿ ಹಾಗೂ ಸುತ್ತ ಮುತ್ತಲಿನ 60-65 ಕಿ.ಮೀ ದೂರದ ತನಕ ತಲುಪಲಿದೆ.

ಲೈವ್ ಸ್ಟ್ರೀಮ್: ಆಕಾಶವಾಣಿಯ ಎಲ್ಲಾ ವಾಹಿನಿಗಳನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ಬಿತ್ತರಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ. ವಿವಿಧ ಭಾರತಿ, ಎಫ್ ಎಂ ಗೋಲ್ಡ್, ಎಫ್ ಎಂ ರೈನ್ ಬೋ, ಉರ್ದು ವಾಹಿನಿ ಅಲ್ಲದೆ ವಿವಿಧ ಪ್ರಾದೇಶಿಕ ಚಾನೆಲ್ ಗಳು ಮೊಬೈಲ್ ಅಪ್ಲಿಕೇಷನ್ ಮೂಲಕ ಲಭ್ಯವಾಗಲಿದೆ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದರು. [ಏಲಿಯನ್ಸ್ ಗೆ ಸಂದೇಶ ಕೊಟ್ಟ ಕನ್ನಡ ದನಿ 'ಪೈ']

FM transmission of Vividh Bharati launched

ವಿವಿಧ ಭಾರತಿಯಲ್ಲಿ ಸಂಗೀತ, ನಾಟಕ, ಪ್ರಹಸನ, ಸಂವಹನ ಕಾರ್ಯಕ್ರಮಗಳು ಸೇರಿದಂತೆ ಲಘು ಸಂಗೀತ, ಸಿನಿಮಾ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ದೂರದರ್ಶನ ನ್ಯೂಸ್ ವಾಹಿನಿ ಕೂಡಾ ಇನ್ಮುಂದೆ ಮೊಬೈಲ್ ಅಪ್ಲಿಕೇಷನ್ ನಲ್ಲಿ ಲಭ್ಯವಾಗಲಿದೆ. ಪ್ರತ್ಯೇಕ ಕಿಸಾನ್ ಚಾನೆಲ್ ಮೇ ತಿಂಗಳಿನಲ್ಲಿ ಆರಂಭವಾಗಲಿದೆ. [ಮೋದಿ-ಒಬಾಮಾ 'ಮನ್‌ ಕೀ ಬಾತ್']

ಎಫ್ ಎಂ ವಾಹಿನಿಯಾಗಿರುವುದರಿಂದ ಮೊಬೈಲ್ ಫೋನ್ ಗಳಲ್ಲಿ ವಿವಿಧ ಭಾರತಿ ಸುಲಭವಾಗಿ ಲಭ್ಯವಾಗಲಿದೆ. ಹೀಗಾಗಿ ಪ್ರಸಾರ ವ್ಯಾಪ್ತಿ ಕೂಡಾ 20 ಪಟ್ಟು ಹೆಚ್ಚಾಗಲಿದೆ ಎಂದು ಪ್ರಸಾರ ಭಾರತಿ ಸಿಇಒ ಜವಹರ್ ಸಿರ್ಕಾರ್ ಅಭಿಪ್ರಾಯಪಟ್ಟಿದ್ದಾರೆ. (ಪಿಟಿಐ)

English summary
The popular Vividh Bharati services of All India Radio (AIR) will now be available to listeners in and around Delhi on mobile handsets with the launch of FM transmission of the channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X