ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕನಸಿನ ರೈಲು ಓಡಾಟಕ್ಕೆ ಮುಹೂರ್ತ ಫಿಕ್ಸ್

By Mahesh
|
Google Oneindia Kannada News

ಆಗ್ರಾ, ಅ.30: ಪ್ರತಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ದೇಶದ ಮೊತ್ತ ಮೊದಲ ಹೈಸ್ಪೀಡ್‌ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹೈಸ್ಪೀಡ್ ರೈಲು, ಬುಲೆಟ್ ರೈಲು ಕನಸು ಕಂಡಿದ್ದ ಮೋದಿ ಅವರ ಕನಸು ನವೆಂಬರ್ 10ರಂದು ಈಡೇರಲಿದೆ.

ಕಪೂರ್ತಲದ ರೈಲ್‌ ಕೋಚ್‌ ಫ್ಯಾಕ್ಟರಿ(ಆರ್‌ಸಿಎಫ್)ಯಲ್ಲಿ ನಿರ್ಮಾಣವಾಗಿರುವ ವಿಶೇಷ ಬೋಗಿಗಳ ಹೈ ಸ್ಪೀಡ್ ರೈಲು ನವೆಂಬರ್‌ 10ರಂದು ದೆಹಲಿ ಮತ್ತು ಆಗ್ರಾ ನಡುವೆ ಓಡಾಟ ಮಾಡಲಿದೆ. ಹೈಸ್ಪೀಡ್ ರೈಲಿನಲ್ಲಿ 14 ಬೋಗಿಗಳಿರಲಿದೆ. ಈ ಪೈಕಿ ನಾಲ್ಕು ಬೋಗಿಗಳು ಈಗಾಗಳೆ ಸಿದ್ದವಾಗಿದ್ದು ಉಳಿದ ಬೋಗಿಗಳು ನ.10ರೊಳಗೆ ಸಿದ್ದವಾಗಲಿದೆ ಎಂದು ಆರ್‌ಸಿಎಫ್ ಜನರಲ್‌ ಮ್ಯಾನೇಜರ್‌ ಪ್ರಮೋದ್‌ ಕುಮಾರ್‌ ಗುರುವಾರ ಹೇಳಿದ್ದಾರೆ. [ಬುಲೆಟ್ ರೈಲಿನ ವಿಶೇಷತೆಗಳು]

Narendra Modi

ದೇಶದ ಅತಿ ವೇಗ ರೈಲುಗಳಾದ ಶತಾಬ್ದಿ, ರಾಜಧಾನಿ ಎಕ್ಸ್ ಪ್ರೆಸ್ ನ ಕೋಚ್ ಗಳ ವಿನ್ಯಾಸವನ್ನು ಅಭ್ಯಸಿಸಿ ಈ ಎರಡು ರೈಲುಗಳಿಗಿಂತ ಉತ್ತಮ ತಾಂತ್ರಿಕತೆ, ಸುರಕ್ಷತೆ ಹೊಂದಿರುವ ಬೋಗಿಗಳನ್ನು ಹೈಸ್ಪೀಡ್ ರೈಲುಗಳಿಗಾಗಿ ಆರ್ ಸಿಎಫ್ ಇಂಜಿನಿಯರ್ ಗಳು ನಿರ್ಮಿಸಿದ್ದಾರೆ. ಇದಕ್ಕಾಗಿ ರಿಸರ್ಚ್ ಡೆವೆಲ್ಮೆಂಟ್ ಅಂಡ್ ಸ್ಟಾಂಡರ್ಡ್ ಆರ್ಗನೈಜೇಷನ್(ಆರ್ ಡಿಎಸ್ಒ) ಸಲಹೆ ಪಡೆದುಕೊಂಡಿದ್ದಾರೆ. [ಭಾರತ-ಚೀನಾ ದ್ವಿಪಕ್ಷೀಯ ಸಹಿ ಕಂಡ ಒಪ್ಪಂದ]

ಸುಮಾರು 2 ರಿಂದ 2.5 ಕೋಟಿ ರು ವೆಚ್ಚದಲ್ಲಿ ರೈಲಿನ ಪ್ರತಿ ಬೋಗಿ ನಿರ್ಮಾಣವಾಗುತ್ತಿದೆ. ಆರಂಭದಲ್ಲಿ 160 ಕಿ.ಮೀ/ಗಂಟೆ ವೇಗದಲ್ಲಿ ರೈಲು ಸಂಚರಿಸಲಿದ್ದು ನಂತರ 200 ಕಿ.ಮೀ/ಗಂಟೆ ವೇಗಕ್ಕೇರಿಸಲಾಗುವುದು. 200 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸುವ ರೈಲು ಮುಂದಿನ ವರ್ಷ ಜೂನ್ ತಿಂಗಳ ವೇಳೆಗೆ ನಿರೀಕ್ಷಿಸಬಹುದು. ಪ್ರಯೋಗಾತ್ಮಕ ಸಂಚಾರ ಸಮಯದಲ್ಲಿ ದೆಹಲಿಯಿಂದ ಬೆಳಗ್ಗೆ 11.15ಕ್ಕೆ ಗಂಟೆಗೆ ಹೊರಟ ರೈಲು 200 ಕಿ.ಮೀ ದೂರದಲ್ಲಿರುವ ಆಗ್ರಾವನ್ನು 99 ನಿಮಿಷಗಳಲ್ಲಿ ತಲುಪಿತ್ತು. [ವಿವರ ಇಲ್ಲಿ ಓದಿ]

English summary
The first high-speed train between Delhi and Agra with a speed of 160 km per hour is expected to run on November 10 as Kapurthala Rail Coach Factory is all set to roll out the first rake of fourteen coaches of the train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X