ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ನೋಟು ಜಾಲ, ಐವರು ಪೊಲೀಸರ ಅತಿಥಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ,ಮಾರ್ಚ್,12: ಕೆಲವು ದಿನಗಳ ಹಿಂದೆ ತಮಿಳುನಾಡು, ಕೇರಳ ರಾಜ್ಯದಲ್ಲಿ ನಕಲಿ ನೋಟು ಜಾಲ ಪತ್ತೆಯಾದ ಬೆನ್ನಲ್ಲೇ ಇದೀಗ ನಕಲಿ ನೋಟಿನ ಜಾಲದಲ್ಲಿ ಭಾಗಿಯಾಗಿದ್ದ ಐದು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ.

ಸುಶಾಂತ್ ಸಾಹು, ಉತ್ತಮ್ ಕುಮಾರ್ ಸಿನ್ಹಾ, ಪುರುಷೋತ್ತಮ್ ಕುಮಾರ್ ಕೇಸರಿ, ನಿಶ್ಫಾಲ್ ಮಾಂಡಲ್, ರಮೇಶ್ವರ್ ಸಾಹು ಇವರು ನಕಲಿ ನೋಟು ದಂಧೆಯಲ್ಲಿ ಸಿಕ್ಕಿ ಬಿದ್ದ ಆರೋಪಿಗಳು. ಇವರು ಉತ್ತರಖಾಂಡ, ಜಾರ್ಖಂಡ್, ಪಶ್ಚಿಮ ಬಂಗಾಳ, ಒರಿಸ್ಸಾ ಮೂಲದವರು ಎಂದು ತಿಳಿದು ಬಂದಿದೆ.[ಥ್ರೆಡ್ ಇಲ್ಲದೇ ಪ್ರಿಂಟ್: 1000 ರೂಪಾಯಿ ನೋಟಿನಲ್ಲಿ ಭಾರೀ ಎಡವಟ್ಟು!]

Fake currency, chargesheet filed against five persons in New delhi

ಬಂಧಿತರಾದ ಈ ಐದು ಆರೋಪಿಗಳು ನಕಲಿ ನೋಟಿನ ದಂಧೆಯಲ್ಲಿ ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆ. ಇವರು ಮಹಾರಾಷ್ಟ್ರ ಹಾಗೂ ಗುಜರಾತ್ ಹೀಗೆ ಇನ್ನಿತರ ರಾಜ್ಯಗಳ ಜನರ ಸಹಾಯದಿಂದ ಈ ಕೃತ್ಯ ಎಸಗುತ್ತಿದ್ದಾರೆ ಎಂದು ತನಿಖಾ ದಳ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ.[ಈ ಎರಡು ಕ್ರಮ ಸಂಖ್ಯೆಯ ಸಾವಿರ ರೂಪಾಯಿ ನೋಟನ್ನು ಸ್ವೀಕರಿಸದಿರಿ!]

ನಕಲಿ ನೋಟು ಜಾಲ ಕಂಡು ಹಿಡಿಯಲು ಏನು ಕ್ರಮಗಳನ್ನು ಅನುಸರಿಸಬೇಕು?

* ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಹೀಗೆ ಹಲವು ನಾಗರಿಕ ಸುರಕ್ಷಾ ಸಂಸ್ಥೆಗಳು ರಾಜ್ಯ ಹಾಗು ಕೇಂದ್ರದಲ್ಲಿ ಈ ಕೃತ್ಯದ ಬಗ್ಗೆ ಜಂಟಿಯಾಗಿ ಚರ್ಚೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಬೇಕು.

* ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಗಡಿ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ನಕಲಿ ನೋಟು ಜಾಲದ ಬಗ್ಗೆ ಪ್ರತಿಯೊಂದು ಕ್ಷಣಗಳಲ್ಲಿ ಕಟ್ಟೆಚ್ಚರ ವಹಿಸಬೇಕು.

* ಈ ನಕಲಿ ನೋಟಿನ ಜಾಲವನ್ನು ತಡೆಗಟ್ಟಲು ಬಾಂಗ್ಲಾದೇಶ ಮತ್ತು ಭಾರತ ನಡುವೆ ಸಹಿ ಒಪ್ಪಂಡ ಏರ್ಪಡಿಸಿಕೊಳ್ಳಬೇಕು.

* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

English summary
The National Investigating Agency which has filed yet another chargesheet in connection with a fake currency case says that the racket has spread into Gujarat and Maharashtra. In its chargesheet filed against five persons, the NIA says that these persons would source fake currency from Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X