ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಗ್ರಿ ಪ್ರಕರಣಕ್ಕೆ ಬಿಜೆಪಿ ಸಚಿವ ಸಂಗೀತ್ ಹೊಸ ಸೇರ್ಪಡೆ

By Vanitha
|
Google Oneindia Kannada News

ನವದೆಹಲಿ, ಜುಲೈ, 20 : ನಕಲಿ ಪ್ರಮಾಣ ಪತ್ರ ಸಲ್ಲಿಕೆ ಆರೋಪಗಳು ಬಿಜೆಪಿ ಸಚಿವರಿಗೆ ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಇವರ ಡೆಪ್ಯೂಟಿ ರಾಮ ಶಂಕರ ಕಥೇರಿಯಾ ಇವರ ಕುರಿತಾದ ಆರೋಪಗಳು ಹಸಿಯಾಗಿರುವಾಗಲೇ ನಂತರ ಮತ್ತೊಬ್ಬ ಬಿಜೆಪಿ ಸಚಿವರು ಡಿಗ್ರಿ ಪ್ರಕರಣ ಆರೋಪಕ್ಕೆ ಸಿಲುಕಿದ್ದಾರೆ.

ಬಿಜೆಪಿ ಎಂಎಲ್ಎ ಸಂಗೀತ್ ಸಾಮ್ ಅವರು ಚುನಾವಣಾ ಕಮಿಷನ್‌ಗೆ ಡಿಗ್ರಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಆದರೆ 2009ರ ಲೋಕಸಭಾ ಚುನಾವಣೆ ವೇಳೆ ಸಂಗೀತ್ ಅವರು ಇಂಟರ್ ಮೀಡಿಯೇಟ್ ಪರೀಕ್ಷೆ ಮುಗಿಸಿದ್ದರು ಎಂಬ ಮಾಹಿತಿ ತಪ್ಪು ಎಂಬುದಾಗಿ ದೇವೇಂದ್ರ ಮುಖಿಯಾ ಸಮಜಾಯಿಷಿ ನೀಡಿದ್ದಾರೆ.[ಸ್ಮೃತಿ ಇರಾನಿ ಡಿಗ್ರಿ ಪ್ರಕರಣ ವಿಚಾರಣೆ ಆ. 28ಕ್ಕೆ ಮುಂದೂಡಿಕೆ]

sangeet som

ತಪ್ಪು ಮಾಹಿತಿ ಸಲ್ಲಿಕೆ ಆರೋಪ ಕುರಿತು ಮುಖಿಯಾ ಅವರು ಚುನಾವಣೆ ಕಮೀಷನ್ ಮತ್ತು ಮೀರುತ್ ಜಿಲ್ಲೆಯ ಮಾಜಿಸ್ಟ್ರೆಟ್ ಪಂಕಜ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ. ಸಂಗೀತ್ ಅವರಿಗೆ ಬೆಂಬಲ ನೀಡಿದ ಇವರು ಕತೌಲಿ ಬಳಿ ಇರುವ ಕೆ ಕೆ ಜೈನ್ ಇಂಟರ್ ಕಾಲೇಜಿನ ಪ್ರಾಂಶುಪಾಲರ ಬಳಿ ತಂದ ದಾಖಲೆಗಳನ್ನು ಚುನಾವನಾ ಕಮಿಷನ್ ಗೆ ಸಲ್ಲಿಸಿದ್ದಾರೆ.

ಬಿಸಾರಕ್ ಪೊಲೀಸ್ ಠಾಣೆಗೆ ಸಲ್ಲಿಸಿರುವ ನನ್ನ ವೈಯಕ್ತಿಕ ಮಾಹಿತಿಗಳು ಸರಿಯಾಗಿಲ್ಲ. ಸಲ್ಲಿಸಿರುವ ದೂರಿನಲ್ಲಿ ನೀಡಿರುವ ಮಾಹಿತಿಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ದೇವೇಂದ್ರ ಮುಖಿಯಾ ಅವರ ಮೇಲೂ ಹಲವಾರು ನಾಯಕರು ಬೆದರಿಕೆ ಒಡ್ಡಿದ್ದಾರೆ ಎನ್ನುವ ಸಚಿವ ಸಂಗೀತ್ ಆರೋಪವನ್ನು ನಿರಾಕರಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೆಕ್ಟರ್ ಪಂಕಜ್ ಯಾದವ್ ' ಈ ಪ್ರಕರಣದ ಕುರಿತಾಗಿ ಈಗಾಗಲೇ ಎಲ್ಲಾ ತನಿಖೆಗಳನ್ನು ಮುಗಿಸಿದ್ದು, ಮುಂದಿನ ವಿಚಾರಣೆಗಾಗಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.

English summary
BJP MLA Sangeet Som who is notorious for making inflammatory speeches has been accused of submitting false information regarding his educational qualifications to the Election Commission.Mukhia has said that Som's declaration in 2009 Lok Sabha election that he had passed intermediate exam was false.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X