ಕೋಟಿ ರುಪಾಯಿ ಸಮೋಸ ತಿಂದು, ಟೀ ಕುಡಿದು ತೇಗಿತೆ ಆಪ್?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 11: ಇದೀಗ ಆಮ್ ಆದ್ಮಿ ಪಕ್ಷದ ಮೇಲೆ 1 ಕೋಟಿ ರುಪಾಯಿ ಸಮೋಸ ಹಗರಣದ ಆರೋಪ ಕೇಳಿಬಂದಿದೆ. ಬಿಜೆಪಿ ವಕ್ತಾರ ತಜಿಂದರ್ ಪಾಲ್ ಸಿಂಗ್ ಬಗ್ಗ ಈ ಬಗ್ಗೆ ದೆಹಲಿಯಲ್ಲಿ ಪೋಸ್ಟರ್ ಗಳನ್ನು ಹಾಕಿಸಿದ್ದು, ಕಳೆದ ಹದಿನೆಂಟು ತಿಂಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಸಮೋಸ ಹಾಗೂ ಟೀಗಾಗಿ ಸಾರ್ವಜನಿಕರ ಹಣ ಒಂದು ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಕೇಜ್ರಿವಾಲ್ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಒಬ್ಬ ವ್ಯಕ್ತಿಗೆ ಹದಿಮೂರು ಸಾವಿರ ರುಪಾಯಿ ಖರ್ಚು ಮಾಡಲಾಗಿತ್ತು. ಅದಕ್ಕಾಗಿ ಸಾರ್ವಜನಿಕ ಹಣ ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದ ನಂತರ ಇದೀಗ ಸಮೋಸ ಹಗರಣದ ಬಗ್ಗೆ ಬಿಜೆಪಿ ಪ್ರಸ್ತಾವ ಮಾಡಿದೆ.[ದೆಹಲಿಯಲ್ಲಿ ಎಎಪಿಯಿಂದ ಅಧಿಕಾರ ದುರುಪಯೋಗ: ವರದಿಯಲ್ಲಿ ಏನಿದೆ?]

Eating spree: Kejriwal now accused of a Rs 1 crore samosa scam

ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತಾ ಆಗ್ರಹಿಸಿದ್ದಾರೆ. ಸರಕಾರವು ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು. ಆದರೆ ಕೇಜ್ರಿವಾಲ್ ಮತ್ತು ಅವರ ಪಕ್ಷ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.[ಬಿಜೆಪಿ ಗೆಲುವಿಗೆ ಇವಿಎಂ ಲೋಪ ಎನ್ನುತ್ತಿದ್ದ ಕೇಜ್ರಿವಾಲ್ ಈಗ ಏನು ಹೇಳ್ತಾರೋ?]

ಆದರೆ, ಈ ಆರೋಪವನ್ನು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿರಾಕರಿಸಿದ್ದಾರೆ. ಬಿಲ್ ಗಳನ್ನು ತನ್ನ ಬಳಿ ಕಳುಹಿಸಿದ್ದು ಹೌದು, ಆದರೆ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಇದಕ್ಕೆ ಸಂಬಂಧಪಟ್ಟ ಕಡತದ ಮಾಹಿತಿಯು ಲೆಫ್ಟಿನೆಂಟ್ ಜನರಲ್ ಕಚೇರಿಯಿಂದ ಸೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Now the Aam Admi Party has been accused of a Rs 1 crore samosa scam. BJP's spokesperson, Tajinder Pal Singh Bagga put up posters in Delhi alleging that the Arvind Kejriwal led Delhi government had spent over Rs 1 crore of public money on tea and samosas in the last 18 months.
Please Wait while comments are loading...