ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕುಡಿದು ವಾಹನ ಚಾಲನೆ, ಸೂಸೈಡ್ ಬಾಂಬರ್ ಗೆ ಸಮ"

By Mahesh
|
Google Oneindia Kannada News

ನವದೆಹಲಿ, ಮಾ.31: ಕುಡಿದು ವಾಹನ ಚಾಲನೆ ಮಾಡಿ ಅಪಘಾತ ಮಾಡಿದ ಅಪರಾಧಿಗಳಾದವರಿಗೆ ಲಘುವಾದ ಶಿಕ್ಷೆ ನೀಡಿದರೆ ನ್ಯಾಯಾಂಗ ವ್ಯವಸ್ಥೆಗೆ ಅವಮಾನ. ಕುಡುಕ ಚಾಲಕರು ಸೂಸೈಡ್ ಬಾಂಬರ್ ಗಳಿಗೆ ಸಮ ಎಂದು ದೆಹಲಿ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಚುನಾಯಿತ ಪ್ರತಿನಿಧಿಗಳು ಅಪಘಾತ ವಿಚಾರಣೆ ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲಿಸಿ ಬಿಗಿ ಕಾನೂನು ರೂಪಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಭಾರತದಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಕಾಯ್ದೆಗಳು ವಿವಾಸ್ಪಾದವಾಗಿಯೇ ಇದೆ. ಚಾಲಕರ ವಿರುದ್ಧ ಯಾವುದೇ ಸೂಕ್ತ ಕ್ರಮಕ್ಕೆ ಅಲ್ಲಿ ಅವಕಾಶವೇ ಇಲ್ಲ. ಚಾಲಕರು ಮದ್ಯಪಾನ ಮಾಡಿ ನಿರ್ಲಕ್ಷ್ಯದಿಂದ ವಾಹನಗಳನ್ನು ಚಲಾಯಿಸುವುದು ಸಾಮಾನ್ಯ ಸಂಗತಿಯಾಗಿರುವುದು ವಿಷಾದನೀಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. [ಗುದ್ದೋಡು ಪ್ರಕರಣದಲ್ಲಿ ಟ್ವಿಸ್ಟ್: ಸಲ್ಲೂ ಪರ ಸಾಕ್ಷಿ ಹೇಳಿದ ಡ್ರೈವರ್]

Drunken driver is like a suicide bomber set out to kill: Delhi Court

ಬಡವರಲ್ಲಿ ನಮ್ಮ ಜೀವಕ್ಕೆ ಭದ್ರತೆಯೇ ಇಲ್ಲ ಎಂಬ ಭಾವನೆ ಮೂಡಿದೆ. ಶ್ರೀಮಂತರು ತಮ್ಮ ವಾಹನಗಳನ್ನು ಬೇಕಾಬಿಟ್ಟಿ ಓಡಿಸುತ್ತಾರೆ. ರಸ್ತೆಯ ಮೇಲೆ ವಾಹನಗಳನ್ನು ಚಲಾಯಿಸುವ ಚಾಲಕರಿಗೆ ಮೈಮೇಲೆ ಪ್ರಜ್ಞೆ ಇಲ್ಲದೆ ಹೋದರೆ ಅನಾಹುತ ಸಂಭವಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಪ್ರಫುಲ್ಲ ಪಂತ್ ಅವರನ್ನೊಳಗೊಂಡ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

2007ರಲ್ಲಿ ಅಪಘಾತ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಸೌರಭ್ ಭಕ್ಷಿ ಎಂಬುವನಿಗೆ ನ್ಯಾಯಾಲಯವೊಂದು ವಿಧಿಸಿದ್ದ 2 ವರ್ಷಗಳ ಶಿಕ್ಷೆಯನ್ನು, ಮೇಲಿನ ನ್ಯಾಯಾಲಯ ಕೇವಲ 24 ದಿನಗಳಿಗೆ ಇಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮಿಶ್ರಾ ಮತ್ತು ಪಂತ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಇದೇ ರೀತಿ ಕುಡಿದು ವಾಹನ ಚಾಲನೆ ಮಾಡಿ ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡ ಪ್ರಕರಣ 2002ರಿಂದ ಕೋರ್ಟಿನಲ್ಲಿ ವಿಚಾರಣೆಗೊಳಲ್ಪಡುತ್ತಿದೆ. ಹೆಚ್ಚೆಂದರೆ ಈ ಪ್ರಕರಣದಲ್ಲಿ ಒಂದು ವೇಳೆ ಸಲ್ಮಾನ್ ಮೇಲಿನ ಆರೋಪ ಸಾಬೀತಾದರೆ 10 ವರ್ಷ ಜೈಲು ಶಿಕ್ಷೆ ಸಿಗಬಹುದು ಆದರೆ, ಹೋದ ಜೀವ ಮತ್ತೆ ಬರುವುದಿಲ್ಲ. (ಪಿಟಿಐ)

English summary
A drunken driver is like a suicide bomber who has set out to kill himself and other road users, a city court said on Tuesday and proposed stringent punishment to the offenders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X