ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಿಗಳಿಗೆ ಜನರಿಕ್ ಔಷಧಗಳನ್ನೇ ನೀಡಿ: ಎಂಸಿಐ

|
Google Oneindia Kannada News

ನವದೆಹಲಿ, ಏಪ್ರಿಲ್ 23 : ಜನರಿಕ್ ಔಷಧಗಳನ್ನೇ ತೆಗೆದುಕೊಳ್ಳುವಂತೆ ರೋಗಿಗಳಿಗೆ ಸೂಚಿಸಬೇಕು ಎಂದು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಎಲ್ಲ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರೋಗಿಗಳಿಗೆ ಜನರಿಕ್ ಔಷಧಗಳ ಜತೆಗೆ ಚೀಟಿಯಲ್ಲಿ ಔಷಧಗಳ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸುವಂತೆಯೂ ಎಂಸಿಐ ತಾಕೀತು ಮಾಡಿದೆ. ಒಂದು ವೇಳೆ, ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದೆ.

Doctors to face action unless they only prescribe generic drugs: MCI

ರೋಗಿಗಳಿಗೆ ಔಷಧಗಳನ್ನು ಸೂಚಿಸುವಾಗ ಮತ್ತು ಚಿಕಿತ್ಸೆಯ ಸಂದರ್ಭದಲ್ಲಿ ಅವುಗಳನ್ನು ಬಳಸುವಾಗ ವಿವೇಚನೆ ಬಳಸುವಂತೆಯೂ ಎಂಸಿಐ ಸಲಹೆ ನೀಡಿದೆ. ವೈದ್ಯರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಿ ಮಂಡಳಿಯು ಕಳೆದ ವರ್ಷ (2016) ಅಧಿಸೂಚನೆ ಹೊರಡಿಸಿತ್ತು.

ಈಗ ಅದೇ ಮಾರ್ಗಸೂಚಿಗಳನ್ನು ವೈದ್ಯಕೀಯ ಕಾಲೇಜುಗಳ ಡೀನ್ ಗಳು, ಪ್ರಾಂಶುಪಾಲರು, ಆಸ್ಪತ್ರೆಗಳ ನಿರ್ದೇಶಕರು ಮತ್ತು ಎಲ್ಲ ರಾಜ್ಯಗಳ ವೈದ್ಯಕೀಯ ಮಂಡಳಿಗಳ ಗಮನಕ್ಕೆ ತಂದಿರುವ ಎಂಸಿಐ, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.

ವೈದ್ಯರು ರೋಗಿಗಳಿಗೆ ಅಗ್ಗದ ಜನರಿಕ್ ಔಷಧಗಳನ್ನೇ ತೆಗೆದುಕೊಳ್ಳಲು ಸೂಚಿಸುವಂತೆ ಮಾಡಲು ಕಾನೂನು ರೂಪಿಸಬೇಕಾದ ಅವಶ್ಯಕತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ಕೆಲವೇ ದಿನಗಳಲ್ಲಿ ಎಂಸಿಐ, ಈ ಸುತ್ತೋಲೆ ಹೊರಡಿಸಿದೆ.

English summary
The country's apex medical regulator has warned the doctors of action if they fail to adhere to its guideline on prescribing the drugs only in generic names and writing prescriptions legibly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X