ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಹುಟ್ಟಿದ್ದು ಯಾವಾಗ ಗೊತ್ತಾ?

|
Google Oneindia Kannada News

ನವದೆಹಲಿ, ಜುಲೈ 1: ಸಮಸ್ತ ಭಾರತೀಯರ ಪಾಲಿಗೆ ಹೊಸ ಯುಗಾರಂಭ ಎಂದೇ ಬಣ್ಣಿಸಲ್ಪಟ್ಟ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಸಾಮ್ರಾಜ್ಯ ಇಂದಿನಿಂದ (ಜುಲೈ 1) ಆರಂಭವಾಗಿದೆ.

ಜೂ.30 ರ ಮಧ್ಯರಾತ್ರಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮಿದ್ ಅನ್ಸಾರಿ, ವಿತ್ತ ಸಚಿವ ಅರುಣ್ ಜೇಟ್ಲಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಜಿಎಸ್ ಟಿ ಜಾರಿಗೆ ಅಧಿಕೃತ ಅನುಮೋದನೆ ದೊರೆತು, ನಿನ್ನೆ ಮಧ್ಯರಾತ್ರಿಯಿಂದಲೇ 'ಒಂದು ರಾಷ್ಟ್ರ, ಒಂದು ತೆರಿಗೆ' ಎಂಬ ಘೋಷ ವಾಕ್ಯದೊಂದಿಗೆ ಜಿಎಸ್ ಟಿ ಜಾರಿಗೆ ಬಂದಿದೆ.

Do you know, when did the GST concept take birth?
ಆದರೆ ಈ ಜಿಎಸ್ ಟಿಯ ಪರಿಕಲ್ಪನೆ ಹುಟ್ಟಿದ್ದು ಯಾವಾಗ ಎಂಬ ಕುತೂಹಲ ಹಲವರಿಗಿರಬಹುದು. 17 ವರ್ಷದ ಹಿಂದೆಯೇ ಜಿಎಸ್ ಟಿ ಪರಿಕಲ್ಪನೆಯ ಪ್ರಸ್ತಾಪವಾಗಿತ್ತು. ಆಗ ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಎನ್ ಡಿಎ ಸರ್ಕಾರ ಜಿಎಸ್ ಟಿ ಸಮಿತಿಯನ್ನೂ ಸ್ಥಾಪಿಸಿತ್ತು.
ನಂತರ 2006 ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಆಗಿನ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ತಮ್ಮ ಬಜೆಟ್ ಭಾಷಣದಲ್ಲಿ ಜಿಎಸ್ ಟಿ ಬಗ್ಗೆ ಪ್ರಸ್ತಾಪಿಸಿದ್ದರು.

ನಂತರ 2010 ರಲ್ಲಿ ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದ ಪಿ.ಚಿದಂಬರಂ, ಜಿಎಸ್ ಟಿ ಏಪ್ರಿಲ್ 2011 ರಿಂದ ಜಾರಿಗೆ ಬರಲಿದೆ ಎಂದಿದ್ದರು. ಆದರೆ ಕಾರಣಾಂತರಗಳಿಂದ ಅದು ಜಾರಿಗೆ ಬಂದಿರಲಿಲ್ಲ. ನಂತರ 2016 , ಸೆಪ್ಟೆಂಬರ್ ನಲ್ಲಿ ಜಿಎಸ್ ಟಿಗೆ ಅಧಿಕೃತ ಅನುಮೋದನೆ ಸಿಕ್ಕು, ಜುಲೈ 1, 2017 ರಂದು ಜಾರಿಗೆ ಬರುವುದೆಂದು ನಿಶ್ಚಯವಾಗಿತ್ತು.

English summary
Do you know, when did the GST concept took birth? The Goods and Service Tax (GST) was first proposed 17 years ago, when the prime minister Atal Bihari Vajpayee formed GST committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X