ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಚೆನ್ನೈಗೆ 6 ಗಂಟೆಯಲ್ಲೇ ತಲುಪಿ!

By Mahesh
|
Google Oneindia Kannada News

ನವದೆಹಲಿ, ನ.14: ಶೀಘ್ರದಲ್ಲೇ ದೆಹಲಿ-ಚೆನ್ನೈ ನಡುವೆ ವಿಶ್ವದಲ್ಲೇ ಅತೀ ಎರಡನೆ ಉದ್ದವಾದ ರೈಲ್ವೆ ಟ್ರ್ಯಾಕ್ ನಿರ್ಮಾಣವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ದೆಹಲಿಯಿಂದ ಚೆನ್ನೈಗೆ ಕೇವಲ 6 ಗಂಟೆಯಲ್ಲೇ ತಲುಪಬಹುದು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ಪ್ರತಿ ಗಂಟೆಗೆ 300ಕಿಮೀ ವೇಗದಲ್ಲಿ ಚಲಿಸಲಿರುವ ಈ ರೈಲು ದೆಹಲಿ-ಚೆನ್ನೈ ನಡುವಿನ ಸುಮಾರು 1754ಕಿಮೀ ದೂರವನ್ನು ಕೇವಲ ಆರು ಗಂಟೆಗಳಲ್ಲೇ ತಲುಪಲಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ದೆಹಲಿ-ಚೆನ್ನೈ ನಡುವೆ ಹೈ ಸ್ಪೀಡ್ ರೈಲು ಓಡಿಸಲು ಕ್ರಿಯಾಯೋಜನೆಯೊಂದನ್ನು ರೂಪಿಸಿದ್ದಾರೆ. ಸುಮಾರು 2 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಾಮಗಾರಿ ನಿರ್ಮಾಣಗೊಳ್ಳಲಿದೆ.[ಬುಲೆಟ್ ರೈಲಿನ ವಿಶೇಷತೆಗಳು!]

ಚೀನಾ ಬೀಜಿಂಗ್-ಗುಂಗ್ಜು ನಡುವೆ ವಿಶ್ವದಲ್ಲೇ ಅತಿ ಉದ್ದವಾದ ರೈಲ್ವೆ ಟ್ರ್ಯಾಕ್ ಇದೆ. ಇದನ್ನು ಹೊರತುಪಡಿಸಿದರೆ ಚೆನ್ನೈ ಹಾಗೂ ದೆಹಲಿ ನಡುವಿನ ರೈಲು ಸಂಚಾರ ವಿಶ್ವದ ಎರಡನೆ ಅತಿ ದೊಡ್ಡ ರೈಲ್ವೆ ಟ್ರ್ಯಾಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನ.24ರಂದು ಭಾರತದ ಉನ್ನತ ರೈಲ್ವೆ ನಿಯೋಗವು ನ.24ರಂದು ಬೀಜಿಂಗ್ ಗೆ ಭೇಟಿ ನೀಡಲಿದ್ದು, ಯೋಜನೆಗಳ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಸ್ವದೇಶಕ್ಕೆ ಹಿಂತಿರುಗಿದ ಮೇಲೆ ವರದಿಯೊಂದನ್ನು ನೀಡಲಿದ್ದು, ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ.

Delhi to Chennai in 6 hrs by train : Minister Suresh Prabhu

ಹೈ ಸ್ಪೀಡ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಹಾಗೂ ರೈಲ್ವೆ ವಿಕಾಸ್ ನಿಗಮ್ ಒಪ್ಪಂದ ಮಾಡಿಕೊಂಡಿವೆ. ಚೀನಾದಲ್ಲಿ ಆರಂಭವಾಗಿರುವ ಮಾದರಿಯ ಆಧಾರದ ಮೇಲೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಅಧಿಕಾರಿಗಳ ತಂಡ ಚೀನಾಕ್ಕೆ ಭೇಟಿ ನೀಡಲಿದ್ದು, ವರದಿ ನೀಡಲಿದೆ. ನಂತರ ದೆಹಲಿ-ಚೆನ್ನೈ ನಡುವೆ ಹೈ ಸ್ಪೀಡ್ ರೈಲು ಆರಂಭಿಸಲು ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಮುಂದಿನ ವರ್ಷದ ಪ್ರಾರಂಭದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. [ಮೋದಿ ಕನಸಿನ ರೈಲು ಓಡಾಟಕ್ಕೆ ಮುಹೂರ್ತ]

ಮೋದಿ ಯೋಜನೆ: ದೆಹಲಿ-ಮುಂಬೈ, ಮುಂಬೈ-ಚೆನ್ನೈ, ಚೆನ್ನೈ-ಕೋಲ್ಕತ್ತಾ, ಕೋಲ್ಕತ್ತಾ ದೆಹಲಿ ಹಾಗೂ ಮುಂಬೈ-ಕೋಲ್ಕತ್ತಾ ನಡುವೆ diamond quadrilateral ಹೈಸ್ಪೀಡ್ ರೈಲು ಯೋಜನೆ ಪ್ರಧಾನಿ ಮೋದಿ ಅವರ ಕನಸಾಗಿದೆ. ಜಪಾನಿನ ಜಿಐಸಿಎ ಸಂಸ್ಥೆ ಈಗಾಗಲೇ ದೇಶದ ಮೊದಲ ಹೈಸ್ಪೀಡ್ ಯೋಜನೆಯಾದ ಮುಂಬೈ-ಅಹಮದಾಬಾದಿನ ಹೈಸ್ಪೀಡ್ ರೈಲು ಯೋಜನೆ ಕೈಗೆತ್ತಿಕೊಂಡಿದೆ.. ಚೀನಾ ಸಂಸ್ಥೆ ಮೈಸೂರು-ಬೆಂಗಳೂರು -ಚೆನ್ನೈ ನಡುವೆ ಹೈಸ್ಪೀಡ್ ರೈಲು ಓಡಿಸಲು ಮುಂದಾಗಿದೆ.

English summary
Railways minister Suresh Prabhu has fast-tracked plans to build the world’s second-longest high-speed rail corridor between Delhi and Chennai that will see trains running at speeds of 300km/hour, covering the 1,754-kilometre distance between the two cities in six hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X