ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನ್ ಮಾಡ್ಕೋತಿಯೋ ಮಾಡ್ಕೋ ಅಂದವನಿಗೆ ತಕ್ಕ ಶಾಸ್ತಿ

By Vanitha
|
Google Oneindia Kannada News

ನವದೆಹಲಿ, ಆಗಸ್ಟ್, 24 : ಆಧುನಿಕ ಯುಗದಲ್ಲಿ ಮಹಿಳೆಯರು ಇತ್ತೀಚೆಗೆ ಒಬ್ಬಂಟಿಯಾಗಿ ಓಡಾಡುವ, ಎಲ್ಲಾ ಕೆಲಸ ಕಾರ್ಯಗಳಲ್ಲಿ ದೈರ್ಯವಾಗಿ ತೊಡಗಲು ಶುರುವಿಟ್ಟಿದ್ದಾಳೆ. ಪುಂಡರ ಹುಚ್ಚಾಟಗಳಿಗೆ ಹೆದರುತ್ತಾ ಮನೆಯಿಂದ ಹೊರಗೆ ಅಡಿ ಇಡುವ ಮಹಿಳೆಯರಿಗೆ ಇಲ್ಲೊಬ್ಬ ಕಾಲೇಜು ಯುವತಿ ಮಾದರಿಯಾಗಿದ್ದಾಳೆ.

ದೆಹಲಿಯ ಅಗರ್ ವಾಲಾ ಬಳಿಯ ತಿಲಕ್ ನಗರ ನಿವಾಸಿಯಾದ, ಕಾಲೇಜು ಯುವತಿ ಜಸ್ಲೀನ್ ಕವೂರ್ ಟ್ರಾಫಿಕ್‌ನಲ್ಲಿ ಹೋಗುತ್ತಿದ್ದಾಗ ಇಲ್ಲೊಬ್ಬ ಭೂಪ ಭಾನುವಾರ ರಾತ್ರಿ 8ರ ಸಮಯದಲ್ಲಿ ರೇಗಿಸಿದ್ದಾನೆ. ಈಕೆ ತಿರುಗಿ ಮಾತನಾಡಿದಾಗ "Jo kar sakti hai kar le. Complaint karke dikha, fir dekhiyo kya karta hun main".ಎಂದು ಹೇಳಿ ಪೇಚಿಗೆ ಸಿಲುಕಿದ್ದಾನೆ.[ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದ್ದಾಗ....]

Delhi shocker! Man abuses girl on road, says 'Jo kar sakti hai kar le', arrested

ಯುವತಿಗೆ ಆ ಪೋಕಿರಿ ಕಂಡ ಸಾರ್ವಜನಿಕರು ಮೂಕ ಕೇವಲ ಮೂಕ ಪ್ರೇಕ್ಷರಾಗಿದ್ದರು. ಆಕೆಯ ಸಹಾಯಕ್ಕೆ ಯಾರು ಧಾವಿಸಲಿಲ್ಲ. ಇದರಿಂದ ಧೈರ್ಯಗೆಡದ ಯುವತಿ ಆತನ ಫೋಟೋ ತೆಗೆದು ಆತ ರೇಗಿಸಿದ್ದನ್ನು ಸಾಮಾಜಿಕ ಜಾಲತಾಣ(ಫೇಸ್ ಬುಕ್)ನಲ್ಲಿ ಹಾಕಿದ್ದಾಳೆ.

ಯುವತಿಯ ಫೇಸ್ ಬುಕ್ ಪುಟ ನೋಡಿದ ದೆಹಲಿ ಡಿಸಿಪಿ ಮಧುರ್ ವರ್ಮ 'ಯುವತಿಗೆ ನಡೆದಿರುವ ಘಟನೆಯ ಕುರಿತಾಗಿ ದೂರು ನೀಡುವಂತೆ ಹೇಳಿ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬಳಿಕ ತಿಲಕ್ ನಗರ ಪೊಲೀಸ್ ಠಾಣೆಗೆ ತೆರಳಿದ ಕವೂರ್ ಆತನ ಅಸಭ್ಯ ವರ್ತನೆಯ ವಿರುದ್ದ ಆತನ ಬೈಕ್ ನಂಬರ್ ಸೇರಿದಂತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯುವತಿಯ ಧೈರ್ಯವನ್ನು ಮೆಚ್ಚಿದ ದೆಹಲಿಯ ಪಶ್ಚಿಮ ವಿಭಾಗದ ಡಿಸಿಪಿ ಆಕೆಗೆ 5000ರೂ ಬಹುಮಾನ ನೀಡಿ ಗೌರವಿಸಿದ್ದಾರೆ.

This man (misnomer) made obscene comments on me today at around 8 pm near Aggarwal, Tilak Nagar. He was on a silver...

Posted by Jasleen Kaur onSunday, August 23, 2015

English summary
A girl, Jasleen Kaur, has alleged that a boy heckled at her and also passed lewd comments on her on Sunday.The incident came to light after the girl posted the photograph of the guy on social media. The incident took place in West Delhi's Tilak Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X