ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅಲೆಯಲ್ಲ, ದೆಹಲಿ ಸೋಲಿಗೆ ಕಾರಣ EVM ಅಲೆ!

ಮೋದಿ ಅಲೆಯಲ್ಲ, ದೆಹಲಿ ಸೋಲಿಗೆ ಕಾರಣ EVM ಅಲೆ! ಎಂದು ಮತ್ತೊಮ್ಮೆ ಕೇಜ್ರಿವಾಲ್ ಮತ್ತು ತಂಡ EVM ಮೇಲೆ ಗೂಬೆ ಕೂರಿಸಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವ ದೆಹಲಿ, ಏಪ್ರಿಲ್ 26: ಮೋದಿ ಅಲೆಯಲ್ಲ, ದೆಹಲಿ ಸೋಲಿಗೆ ಕಾರಣ EVM ಅಲೆ! ಎಂದು ಮತ್ತೊಮ್ಮೆ ಕೇಜ್ರಿವಾಲ್ ಮತ್ತು ತಂಡ EVM ಮೇಲೆ ಗೂಬೆ ಕೂರಿಸಿದೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ (EVM) ದೂರಿದ್ದಾಯ್ತು, ಇದೀಗ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲೂ ತಮ್ಮ ಸೋಲಿಗೆ EVM ಗಳೇ ಕಾರಣ ಎಂದು ಕೇಜ್ರಿವಾಲ್ ಹೇಳಿದ್ದಾರೆ! [ದೆಹಲಿ ಕಾರ್ಪೊರೇಷನ್ ಚುನಾವಣೆ: ಭರ್ಜರಿ ಜಯದತ್ತ ಬಿಜೆಪಿ]

ಒಟ್ಟಿನಲ್ಲಿ ಕುಣಿಯೋಕೆ ಬಾರದವನು ನೆಲ ಡೊಂಕು ಅಂದಂತಾಗಿದೆ ಎಎಪಿ ಕತೆ! ಪಂಚ ರಾಜ್ಯಗಳ ಚುನಾವಣೆಯಲ್ಲೂ ಇದೇ ಕ್ಯಾತೆ ತೆಗೆದಿದ್ದ ಎಎಪಿ ಚುನಾವಣೆಗೂ ಮೊದಲೇ EVM ಕಾರ್ಯದಕ್ಷತೆಯ ಬಗ್ಗೆ ತನಗೆ ನಂಬಿಕೆಯಿಲ್ಲ ಎನ್ನಬಹುದಿತ್ತು.

ಆದರೆ ಆಗ ತುಟಿಪಿಟಿಕ್ಕೆನದೆ ಈಗ ಚುನಾವಣಾ ಫಲಿತಾಂಶದ ನಂತರ EVM ಅನ್ನು ದೂರುತ್ತಿರುವುದು ಎಷ್ಟು ಸರಿ ಎಂಬುದು ಹಲವರ ಪ್ರಶ್ನೆ. [ಇವಿಎಂ ದುರ್ಬಳಕೆ ಸಾಧ್ಯ: ಹಾಗಾದ್ರೆ ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದಿದ್ದು ಹೀಗೇನಾ?]

EVM ಕಾರ್ಯದಕ್ಷತೆಯ ಕುರಿತು ಅಪಸ್ವರವೆದ್ದಿದ್ದರಿಂದಲೇ ಈ ಬಾರಿಯ ಚುನಾವಣೆಯಲ್ಲಿ VVPAT (ವೊಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರೈಯಲ್) ಬಳಸಲಾಗಿತ್ತು. ಆದರೂ EVM ಮೇಲೆ ಗೂಬೆ ಕೂರಿಸುತ್ತಿರುವ ಆಪ್ ಸದಸ್ಯರು ಈ ಸೋಲನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.

English summary
After defeat in Delhi MCD election, Delhi CM Arvind Kejriwal and his AAP team blame EVMs again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X