ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಮುಖಂಡ ಸೋಮನಾಥ್ ಭಾರ್ತಿಗೆ ಜಾಮೀನು

By Mahesh
|
Google Oneindia Kannada News

ನವದೆಹಲಿ, ಅ.7: ಕೌಟುಂಬಿಕ ಕಲಹ, ಪತ್ನಿ ಮೇಲೆ ಹಲ್ಲೆ ಆರೋಪ ಹೊತ್ತಿರುವ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರಿಗೆ ದೆಹಲಿಯ ದ್ವಾರಕ ಕೋರ್ಟಿನಿಂದ ಬುಧವಾರ ಜಾಮೀನು ಮಂಜೂರಾಗಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಮುಂದೂಡಿ ಭಾರ್ತಿಗೆ ಅಕ್ಟೋಬರ್ 19ರ ತನಕ ನ್ಯಾಯಾಂಗ ಬಂಧನ ವಿಧಿಸಿತ್ತು.

ನನ್ನ ಮೇಲೆ ಪ್ರಕರಣ ದಾಖಲಾಗಿರುವುದಕ್ಕೆ ಬಿಜೆಪಿಯೇ ಕಾರಣ, ನನಗೆ ಪ್ರಾಣ ಬೆದರಿಕೆ ಇದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನ್ಯಾ ಅನಿಲ್ ಕುಮಾರ್ ಅವರ ಮುಂದೆ ಹೇಳಿಕೊಂಡಿದ್ದರು. ಕೌಟುಂಬಿಕ ಕಲಹ ಕೇಸಿಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ ಎಂದು ಸೋಮನಾಥ್ ಪರ ವಕೀಲ ವಿಜಯ್ ಅಗರ್ ವಾಲ್ ಅವರು ವಾದಿಸಿದ್ದರು. [ಆಮ್ ಆದ್ಮಿ ಪಕ್ಷದ ಗ್ರಹಗತಿ ಯಾಕೋ ಸರಿಯಿದ್ದಂತಿಲ್ಲ]

Delhi Court grants bail to AAP leader Somnath Bharti

ಎಎಪಿ ಶಾಸಕರಾದ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮಾರ್, ಮನೋಜ್ ಕುಮಾರ್, ಸುರೀಂದರ್ ಸಿಂಗ್ ಅವರು ದೆಹಲಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದರು. ನಾಲ್ಕು ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ನಾಲ್ಕನೇ ಶಾಸಕರ ಬಂಧನವಾಗಿತ್ತು.

ಸೋಮನಾಥ್ ಭಾರ್ತಿ ಅವರು ಆಪ್‌ನ ಮೊದಲ 49 ದಿನಗಳ ಸರಕಾರದಲ್ಲಿ ಭಾರ್ತಿ ಕಾನೂನು ಸಚಿವರಾಗಿದ್ದು, ಆ ಸಂದರ್ಭದಲ್ಲಿ ತನ್ನ ಮತಕ್ಷೇತ್ರದಲ್ಲಿಯ ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ನಡೆಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

ತನ್ನ ಪತಿ ಸೋಮನಾಥ ಭಾರ್ತಿ 2010ರಿಂದಲೂ ತನಗೆ ಮತ್ತು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಅವರಿಂದ ಮತ್ತು ಅವರ ಬೆಂಬಲಿಗರಿಂದ ನಿರಂತರ ಬೆದರಿಕೆಗಳಿವೆ. ತನಗೆ ಪತಿಯಿಂದ ವಿಚ್ಛೇದನ ಬೇಕು. ತಾನು ತನ್ನ ಮಕ್ಕಳೊಂದಿಗೆ ಘನತೆಯೊಂದಿಗೆ ಬದುಕಲು ಬಯಸಿದ್ದೇನೆ ಎಂದು ಲಿಪಿಕಾ ಅವರು ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A Delhi court on Wednesday granted bail to AAP leader and former Delhi law minister Somnath Bharti, who is facing domestic violence case. Somnath Bharti termed this is attempt to murder case against him as a "BJP-sponsored litigation".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X