ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಅಸೆಂಬ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆ

By Mahesh
|
Google Oneindia Kannada News

ನವದೆಹಲಿ, ಜ.12: ದೆಹಲಿ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ವಿಎಸ್ ಸಂಪತ್ ಅವರು ಸೋಮವಾರ ಸಂಜೆ ಪ್ರಕಟಿಸಿದ್ದಾರೆ. 70 ಅಸೆಂಬ್ಲಿ ಸೀಟುಗಳಿಗೆ ಫೆ.7ರಂದು ಮತದಾನ ನಡೆಯಲಿದೆ. ಫೆ.1೦ರಂದು ಫಲಿತಾಂಶ ಹೊರಬೀಳಲಿದೆ.

ದೆಹಲಿ ವಿಧಾನಸಭಾ ಚುನಾವಣೆ ಪ್ರಮುಖ ದಿನಾಂಕ:
ನಾಮಪತ್ರ ಸಲ್ಲಿಕೆ ಅರಂಭ: 14/01/2015
ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ: 21/01/2015
ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : 24/01/2015
ಮತದಾನ: 07/02/2015
ಮತ ಎಣಿಕೆ: 10/02/2015
ಮತದಾರರ ಸಂಖ್ಯೆ: 1.30 ಕೋಟಿ ಜನ.

Delhi Assembly Elections 2015

ಆಯೋಗದ ಪ್ರಕಟಣೆ ಪ್ರಕಾರ ಪಶ್ಚಿಮ ದೆಹಲಿಯ ಮತಿಯಾಲಾ ಅಸೆಂಬ್ಲಿ ಕ್ಷೇತ್ರ ಹೆಚ್ಚು ಮತದಾರರನ್ನು(3,39,686) ಹೊಂದಿದ್ದರೆ, ಚಾಂದಿನಿ ಚೌಕ್ ಕ್ಷೇತ್ರ 1,12,739 ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ.

ದೆಹಲಿಯಲ್ಲಿ ಸುಮಾರು 2,527 ಮತಕೇಂದ್ರಗಳಿದ್ದು 11,763ಕ್ಕೂ ಅಧಿಕ ಮತಗಟ್ಟೆಗಳಿವೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಶೇ 65.6ರಷ್ಟು ಮತದಾನವಾಗಿತ್ತು. ಏಪ್ರಿಲ್ ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ 65.07ರಷ್ಟು ಮತದಾನ ದಾಖಲಾಗಿದೆ.

ಈ ಹಿಂದಿನ ಫಲಿತಾಂಶ: ಬಿಜೆಪಿ 31 ಸ್ಥಾನ ಗಳಿಸಿದ್ದರೂ ಸರ್ಕಾರ ರಚಿಸಲು ಆಸಕ್ತಿ ತೋರಲಿಲ್ಲ. ಕಾಂಗ್ರೆಸ್ ಕೇವಲ 8 ಸ್ಥಾನ ಗಳಿಸಿತ್ತು. ಆಮ್ ಆದ್ಮಿ ಪಕ್ಷ 28 ಸ್ಥಾನಗಳಿಸಿದ್ದರೂ ಅಲ್ಪ ಸಂಖ್ಯಾತ ಸರ್ಕಾರ ರಚಿಸಿತ್ತು. ಆರವಿಂದ್ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿಯಾಗಿ 49 ದಿನಗಳ ಕಾಲ ಆಡಳಿತ ನಡೆಸಿದ್ದರು.

ಜನ ಲೋಕಪಾಲ ಮಸೂದೆ ಮಂಡನೆಗೆ ವಿಪಕ್ಷಗಳು ಸಹಕಾರ ನೀಡುತ್ತಿಲ್ಲ ಎಂದು ಕಾರಣ ನೀಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅಸೆಂಬ್ಲಿ ವಿಸರ್ಜನೆಯಾಗಿತ್ತು. ಫೆಬ್ರವರಿ 2014ರಿಂದ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.

English summary
Delhi Legislative Assembly election, 2015 The elections for 70 assembly seats in Delhi will be held on February 7th and counting will be held on Feb.10th Chief Election Commissioner VS Sampath announced on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X