ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಮಿಲನ್, ಮಾಧ್ಯಮಗಳಿಗೆ ಮೋದಿ ಅಭಿನಂದನೆ

|
Google Oneindia Kannada News

ನವದೆಹಲಿ, ಅ.25 : 'ಈ ದೀಪಾವಳಿ ಬಿಜೆಪಿ ಪಾಲಿಗೆ ತುಂಬಾ ಅದೃಷ್ಟವನ್ನು ತಂದಿದೆ. ಸಾರ್ವತ್ರಿಕ ಚುನಾವಣೆಯ ನಂತರ ಬಿಜೆಪಿ ಹಲವು ಗೆಲವುಗಳನ್ನು ಕಂಡಿದೆ. ಮಾಧ್ಯಮಗಳ ಮೂಲಕ ಸರ್ಕಾರದ ಶೇ. 80 ರಷ್ಟು ಕಾರ್ಯಗಳು ನೆರವೇರಿದೆ. ಇದಕ್ಕೆ ಸಹಕರಿಸಿದ ನಿಮಗೆಲ್ಲರಿಗೂ ಅಭಿನಂದನೆ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾಧ್ಯಮದವರಿಗೆ 'ದೀಪಾವಳಿ ಮಿಲನ್' ಚಹಾ ಕೂಟ ಹಮ್ಮಿಕೊಂಡಿದ್ದರು. ಬೆಳಗ್ಗೆ 11.30ಗೆ ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಚಿವರಾದ ಪ್ರಕಾಶ್ ಜಾವೇಡ್ಕರ್, ರಾಜನಾಥ್ ಸಿಂಗ್ ಪಾಲ್ಗೊಂಡಿದ್ದರು. ದೀಪಾವಳಿ ಮಿಲನ್ ಚಿತ್ರಗಳು [ಪೆನ್ನನ್ನೇ ಪೊರಕೆಯಾಗಿಸಿದ ಪತ್ರಕರ್ತರಿಗೆ ಮೋದಿ ಥ್ಯಾಂಕ್ಸ್]

ಮಾಧ್ಯಮದೊಂದಿಗೆ ಮೋದಿ ಸಂವಾದ

ಮಾಧ್ಯಮದೊಂದಿಗೆ ಮೋದಿ ಸಂವಾದ

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾಧ್ಯಮದವರಿಗೆ 'ದೀಪಾವಳಿ ಮಿಲನ್' ಚಹಾ ಕೂಟ ಹಮ್ಮಿಕೊಂಡಿದ್ದರು. ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ

ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ

ಈ ದೀಪಾವಳಿ ಬಿಜೆಪಿ ಪಾಲಿಗೆ ತುಂಬಾ ಅದೃಷ್ಟವನ್ನು ತಂದಿದೆ. ಸಾರ್ವತ್ರಿಕ ಚುನಾವಣೆಯ ನಂತರ ಬಿಜೆಪಿ ಹಲವು ಗೆಲವುಗಳನ್ನು ಕಂಡಿದೆ. ಮಾಧ್ಯಮಗಳ ಮೂಲಕ ಸರ್ಕಾರದ ಶೇ. 80 ರಷ್ಟು ಕಾರ್ಯಗಳು ನೆರವೇರಿದೆ. ಇದಕ್ಕೆ ಸಹಕರಿಸಿದ ನಿಮಗೆಲ್ಲರಿಗೂ ಅಭಿನಂದನೆ ಎಂದು ಮೋದಿ ತಿಳಿಸಿದರು.

ಪತ್ರಕರ್ತರೊಂದಿಗೆ ಸ್ನೇಹಮಯ ಸಂಬಂಧವಿದೆ

ಪತ್ರಕರ್ತರೊಂದಿಗೆ ಸ್ನೇಹಮಯ ಸಂಬಂಧವಿದೆ

ನಾನು ಮಾಧ್ಯಮದವರೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದೇನೆ ಎಂದು ಹೇಳಲಾಗುತ್ತದೆ. ಆದರೆ, ನನಗೆ ಪತ್ರಕರ್ತರೊಂದಿಗೆ ಸ್ನೇಹಮಯ ಸಂಬಂಧವಿದೆ ಎಂದು ಮೋದಿ ಹೇಳಿದರು.

ಜನರಿಗೆ ಸಂದೇಶ ತಲುಪಿಸಿದ್ದೀರಿ

ಜನರಿಗೆ ಸಂದೇಶ ತಲುಪಿಸಿದ್ದೀರಿ

ಸ್ವಚ್ಛತಾ ಆಂದೋಲನದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಮಹತ್ತರವಾದ ಪಾತ್ರವನ್ನು ವಹಿಸಿವೆ. ನಮ್ಮ ಯೋಜನೆಗೆ ಮಾಧ್ಯಮಗಳಿಂದ ಉತ್ತಮ ಸಹಕಾರ ಲಭಿಸಿದೆ. ಅಂಕಣಕಾರರು ಪತ್ರಿಕೆಗಳಲ್ಲಿ 'ಸ್ವಚ್ಛ ಭಾರತ್ ಅಭಿಯಾನ'ದ ಬಗ್ಗೆ ಬರೆದಿದ್ದಾರೆ ಎಂದು ಮೋದಿ ಹೇಳಿದರು.

ಲೇಖನಿಯನ್ನು ಪೊರಕೆಯಾಗಿ ಪರಿವರ್ತಿಸಿದ್ದೀರಿ

ಲೇಖನಿಯನ್ನು ಪೊರಕೆಯಾಗಿ ಪರಿವರ್ತಿಸಿದ್ದೀರಿ

ಸ್ವಚ್ಛ ಭಾರತ್ ಅಭಿಯಾನ'ದ ಬಗ್ಗೆ ಹಲವಾರು ಅಂಕಣಗಳನ್ನು ಬರೆದಿದ್ದೀರಿ. ಮಾಧ್ಯಮಗಳು ಕ್ಲೀನ್ ಇಂಡಿಯಾ ಸಂದೇಶವನ್ನು ಜನರಿಗೆ ತಲುಪಿಸಿದ್ದು, ಇಲ್ಲಿ ಮಾಧ್ಯಮದವರು ತಮ್ಮ ಲೇಖನಿಯನ್ನು ಪೊರಕೆಯಾಗಿ ಪರಿವರ್ತಿಸಿದ್ದಾರೆ ಎಂದು ಮೋದಿ ಹೇಳಿದರು.

ಮಾಧ್ಯಮ ಸಂವಾದ ಅಲ್ಲ

ಮಾಧ್ಯಮ ಸಂವಾದ ಅಲ್ಲ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ದೀಪಾವಳಿ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರಿಗಾಗಿ ಔತಣಕೂಟವನ್ನು ಆಯೋಜಿಸಲಾಗಿದೆ. ಹೀಗಾಗಿ ಇದು ಮಾಧ್ಯಮ ಸಂವಾದ ಅಲ್ಲ. ಇದು ದಿವಾಳಿ ಮಿಲನ ಕಾರ್ಯಕ್ರಮ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಪಿಯೂಶ್ ಗೋಯಲ್ ಭಾಗವಹಿಸಿದ್ದರು.

English summary
Narendra Modi has come to be known as a prime minister who keeps the media at an arm's length. However, that changed on Saturday when the PM met journalists and editors over tea. The occasion was 'Deepawali Milan', organized at the BJP headquarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X