ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾದ್ರಾ ಭೂ ಹಗರಣದ ಎರಡು ಪುಟ ಮಾಯ

By Mahesh
|
Google Oneindia Kannada News

ಚಂದೀಗಢ, ಡಿ.19: ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಸಂದರ್ಭದಲ್ಲೇ ಅಳಿಯ ರಾಬರ್ಟ್ ವಾದ್ರಾಗೆ ಮತ್ತೆ ಸಂಕಷ್ಟ ಕಾಣಿಸಿಕೊಂಡಿದೆ. ಡಿಎಲ್ಎಫ್ ಹಗರಣಕ್ಕೆ ಸಂಬಂಧಿಸಿದ ದಾಖಲೆ ಪೈಕಿ ಎರಡು ಪುಟಗಳು ನಾಪತ್ತೆಯಾಗಿರುವುದನ್ನು ಹರ್ಯಾಣ ಸರ್ಕಾರ ಸ್ಪಷ್ಟಪಡಿಸಿದೆ.

ಗುರುಗಾಂವ್ ಲ್ಯಾಂಡ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತಹ ದಾಖಲೆಗಳು ಈಗ ಕಣ್ಮರೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಐಎಎಸ್ ಅಧಿಕಾರಿ ಅಶೋಕ್ ಖೆಮ್ಕಾ ಅವರು ಆರ್ ಟಿಐ ಅರ್ಜಿ ಸಲ್ಲಿಸಿ ಈ ಮಾಹಿತಿ ಪಡೆದುಕೊಂಡಿದ್ದಾರೆ. ಖೆಮ್ಕಾ ಅವರು ಪ್ರಧಾನ ನಿರ್ದೇಶಕರಾಗಿದ್ದ ಕಾಲದಲ್ಲಿ ವಾದ್ರಾ ಹಾಗೂ ಡಿಎಲ್ ಎಫ್ ಹಗರಣವನ್ನು ರದ್ದುಗೊಳಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. [ವಾದ್ರಾಗೆ ಕೋಪ ಬಂದಿದ್ದೇಕೆ?]

Twist in DLF-Vadra land deal

ಅದರೆ, ಖೆಮ್ಕಾ ಅವರಿಗೆ ವಾದ್ರಾ ಹಾಗೂ ಡಿಎಲ್ ಎಫ್ ನಡುವಿನ ಒಪ್ಪಂದ ರದ್ದುಗೊಳಿಸುವ ಅಧಿಕಾರ ಇದೆಯೆ? ಎಂದು ತನಿಖೆ ಮಾಡಲು ಭೂಪೇಂದ್ರ ಸಿಂಗ್ ಹೂಡಾ ನೇತೃತ್ವದ ಸರ್ಕಾರ ಹರ್ಯಾಣ ಸರ್ಕಾರ ಸಮಿತಿ ನೇಮಿಸಿತ್ತು. ಮೂವರು ಸದಸ್ಯರ ತನಿಖಾ ಸಮಿತಿ ವಿರುದ್ಧ ವರದಿ ನೀಡಿತ್ತು. ಖೆಮ್ಕಾ ಅವರಿಗೆ ಚಾರ್ಚ್ ಶೀಟ್ ಹಾಕಿ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಒಪ್ಪಂದ ರದ್ದು ಮಾಡಿದ್ದ ಅಶೋಕ್ ಖೇಮ್ಕಾ ವಿನಾಕಾರಣ ದೂರುತಿದ್ದಾರೆ ಎಂದು ಸಮಿತಿ ಹೇಳಿತ್ತು.

ರಾಬರ್ಟ್ ವಾದ್ರಾ ಅವರು ಹೊಂದಿರುವ ಎಲ್ಲ ಆಸ್ತಿ ಹಾಗೂ ಅವರ ಒಡೆತನದ ಎಲ್ಲ ಕಂಪನಿಗಳ ವಿವರಗಳನ್ನು ನೀಡುವಂತೆ ನೂತನ ಸರ್ಕಾರ ಗುಡಗಾಂವ್ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಒಂದು ವಾರದೊಳಗೆ ವಿವರ ನೀಡಬೇಕೆಂದು ಭೂ ದಾಖಲೆಗಳ ನಿರ್ದೇಶಕರು ಗುಡಗಾಂವ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. [ರಾಬರ್ಟ್ ವಾದ್ರಾ ಹಿನ್ನೆಲೆ ಗೊತ್ತೇ?]

English summary
Twist in DLF-Vadra land deal: Crucial papers related to deal missing from Government records. This came to light after whistleblower IAS officer Ashok Khemka filed an RTI query seeking a copy of that file.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X