ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪುನರ್ ಪರಿಶೀಲನೆಗೆ ಸಿಬಿಐ ಮನವಿ

ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ ಆರೋಪದಿಂದ ಖುಲಾಸೆಯಾಗಿದ್ದ ಬಿಜೆಪಿ ಎಲ್ ಕೆ ಅಡ್ವಾಣಿ ಸೇರಿದಂತೆ ಇತರರ ವಿರುದ್ಧ ಪ್ರಕರಣವನ್ನು ಪುನರ್ ಪರಿಶೀಲಿಸಬೇಕು ಎಂದು ಸಿಬಿಐ ಸುಪ್ರೀಂ ಕೋರ್ಟ್ ಗೆ ಗುರುವಾರ ಮನವಿ ಮಾಡಿದೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಏಪ್ರಿಲ್ 6: ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತಿತರರ ವಿರುದ್ಧದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂಚು ಆರೋಪವನ್ನು ಪುನರ್ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಗುರುವಾರ ಸಿಬಿಐ ಹೇಳಿದೆ.

ಕೆಳಹಂತದ ನ್ಯಾಯಾಲಯವು ಬಿಜೆಪಿಯ ನಾಯಕರ ವಿರುದ್ಧದ ಸಂಚು ಆರೋಪವನ್ನು ಕೈ ಬಿಡುವಂತೆ ಆದೇಶ ನೀಡಿತ್ತು. ಆ ಆದೇಶವನ್ನೇ ಅಲಹಾಬಾದ್ ಹೈ ಕೋರ್ಟ್ 2010ರಲ್ಲಿ ಖಾತ್ರಿ ಪಡಿಸಿತ್ತು. ಇದೀಗ ಕೋರ್ಟ್ ನ ತೀರ್ಮಾನದ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.[ಬಾಬರಿ ಮಸೀದಿ ಧ್ವಂಸ: ವಿಚಾರಣೆಯನ್ನು 2 ವಾರ ಮುಂದೂಡಿದ ಸುಪ್ರೀಂ]

Conspiracy Charges Against LK Advani, Others Should Be Revived, CBI Tells Supreme Court

ಕಳೆದ ತಿಂಗಳು ಸುಪ್ರೀಂ ಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿತ್ತು. ಲಿಖಿತ ಅಭಿಪ್ರಾಯವನ್ನು ಸಲ್ಲಿಸುವಂತೆ ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತಿತರ ಆರೋಪಿಗಳಿಗೆ ಎರಡು ವಾರ ಅವಕಾಶ ನೀಡಿತ್ತು.

Conspiracy Charges Against LK Advani, Others Should Be Revived, CBI Tells Supreme Court

" ಅಡ್ವಾಣಿ ಮತ್ತಿತರ ಆರೋಪಿಗಳ ವಿರುದ್ಧ ತಾಂತ್ರಿಕ ಕಾರಣಗಳಿಗಾಗಿ ಆರೋಪ ಕೈಬಿಡುವುದನ್ನು ಒಪ್ಪಲು ಸಾಧ್ಯವಿಲ್ಲ. ನಿಮಗೆ (ಸಿಬಿಐ) ಹದಿಮೂರು ಮಂದಿ ವಿರುದ್ಧ ಸಂಉ ಸೇರಿದಂತೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲು ಅವಕಾಶ ನೀಡುತ್ತೇವೆ. ವಿಚಾರ್ಣೆ ಕೋರ್ಟ್ ಗೆ ಜಂಟಿ ವಿಚಾರಣೆ ನಡೆಸುವಂತೆ ತಿಳಿಸಲಾಗುವುದು" ಎಂದು ಮಾರ್ಚ್ 6ರಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.

Conspiracy Charges Against LK Advani, Others Should Be Revived, CBI Tells Supreme Court

"ಒಂದು ವೇಳೆ ಅಡ್ವಾಣಿ ವಿರುದ್ಧ ಸಂಚು ಆರೋಪವನ್ನು ಸೇರಿಸುವುದಾದರೆ ಕೆಳ ಹಂತದ ಕೋರ್ಟ್ ನಲ್ಲಿ ಪರೀಕ್ಷೆ ಮಾಡಿದ 183 ಸಾಕ್ಷಿಗಳನ್ನು ಮತ್ತೆ ಕೋರ್ಟ್ ಗೆ ಕರೆಯಬೇಕು" ಎಂದು ಅಡ್ವಾಣಿ ಪರ ವಕೀಲರು ಸುಪ್ರೀಂ ಕೋರ್ಟ್ ಗ್ ಹೇಳಿದ್ದಾರೆ.[25 ವರ್ಷ ಕಳೆದರೂ ಅಡ್ವಾಣಿಯನ್ನು ಬೆಂಬಿಡದ 'ಬಾಬ್ರಿ ಮಸೀದಿ' ಭೂತ]

1992ರಲ್ಲಿ ಅಯೋಧ್ಯೆಯಲ್ಲಿದ್ದ 16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ಹನ್ನೆರಡು ಮಂದಿ ವಿರುದ್ಧದ ಸಂಚು ರೂಪಿಸಿದ ಆರೋಪವನ್ನು ರಾಯ್ ಬರೇಲಿ ಕೋರ್ಟ್ ಕೈಬಿಟ್ಟು, ಖುಲಾಸೆ ಮಾಡಿತ್ತು. 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿತ್ತು.ಇದೀಗ ಸಿಬಿಐ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀ ಕೋರ್ಟ್ ಗೆ ಮನವಿ ಸಲ್ಲಿಸಿದೆ.

English summary
Conspiracy charges against BJP veteran LK Advani, Murli Manohar Joshi and others in Babri demolition case must be revived, Central Bureau of Investigation told Supreme Court today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X