ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಹಿಂದೂ ಸಂಘಟನೆಗೆ ಓಂಕಾರ ಬರೆದ ಸ್ವಾಮಿ

By Mahesh
|
Google Oneindia Kannada News

ನವದೆಹಲಿ, ಏ.9: ದೇಶದ ಯುವ ಜನಾಂಗದಲ್ಲಿ ಹಿಂದೂಪರ ಚಿಂತನೆ ಹಾಗೂ ಮೌಲ್ಯಗಳನ್ನು ಜಾಗೃತಿಗೊಳಿಸಲು ಬಿಜೆಪಿ ಮುಖಂಡ ಸುಬ್ರಮಣಿಯನ್ ಅವರು ಹೊಸ ಸಂಘಟನೆಯನ್ನು ಸ್ಥಾಪಿಸಿದ್ದಾರೆ.

ವಿರಾಟ್ ಹಿಂದೂಸ್ತಾನ್ ಸಂಘಂ (ವಿಎಚ್ ಎಸ್) ಬುಧವಾರದಿಂದ ಕಾರ್ಯಾರಂಭ ಮಾಡಿದೆ. ರಾಷ್ಟ್ರದ ಹತ್ತು ಹಲವು ಸಮಸ್ಯೆಗಳಿಗೆ ಹಿಂದೂತ್ವವೇ ಪರಿಹಾರ. ದೇಶದ ಜನತೆಯ ಡಿಎನ್ಎ ವಂಶವಾಹಿ ಎಲ್ಲವೂ ಒಂದೇ ಆಗಿದೆ. ಹಿಂದೂ ಮುಸ್ಲಿಂ ಇಬ್ಬರ ವಂಶವಾಹಿ ಒಂದೇ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕ್ರೈಸ್ತರು ತಮ್ಮ ಮೂಲ ಹಿಂದೂಗಳು ಎಂದು ಒಪ್ಪಿಕೊಂಡಾಗಿದೆ. ದೇಶದಲ್ಲಿರುವ ನಾವೆಲ್ಲರೂ ಹಿಂದೂಗಳೇ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. [ಅಮೀರ್ 'ಪಿಕೆ' ಚಿತ್ರಕ್ಕೆ ಐಎಸ್ಐ ಹಣ, ಸ್ವಾಮಿ ಟ್ವೀಟ್]

BJP leader Subramanian Swamy launches a Hindutva outfit

ಅಯೋಧ್ಯೆಯಲ್ಲಿ ರಾಮ ಮಂದಿರ: ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಘಟನೆ ಬದ್ಧವಾಗಿದೆ. ಜನವರಿ 1, 2016ರಿಂದ ಕಾನೂನು ಹೋರಾಟ ಮುಂದುವರೆಯಲಿದೆ. ವಕ್ಫ್ ಮಂಡಳಿ ನಿಯಮದಂತೆ ಸರಯೂ ನದಿ ಸುತ್ತ ಮಸೀದಿ ನಿರ್ಮಾಣ ಸಾಧ್ಯವಾಗುವುದಾದರೆ, ರಾಮ ಮಂದಿರದ ಆವರಣದಲ್ಲಿ ಬರೀ ದೇಗುಲಕ್ಕೆ ಮೀಸಲು ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. [ಮಸೀದಿ ಹೇಳಿಕೆ: ಸುಬ್ರಹ್ಮಣ್ಯಸ್ವಾಮಿ ವಿರುದ್ಧ ಎಫ್‌ಐಆರ್]

2016ರ ಅಂತ್ಯಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, 2019ರ ಹೊತ್ತಿಗೆ ಸಂವಿಧಾನ ಪರಿಚ್ಛೇದ 370 ಸಂಪೂರ್ಣ ಕಿತ್ತು ಹಾಕುವುದು ನಮ್ಮ ಸಂಘಟನೆಯ ಪ್ರಮುಖ ಗುರಿ ಎಂದು ಸ್ವಾಮಿ ಹೇಳಿದ್ದಾರೆ.

ಉಳಿದಂತೆ ಯುವ ಜನಾಂಗದಲ್ಲಿ ಹಿಂದು ಮೌಲ್ಯಗಳ ಕುರಿತು ಜಾಗೃತಿ, ಗೋ ಮಾಂಸ ಮಾರಾಟ ನಿಷೇಧಕ್ಕೆ ಆಗ್ರಹ ಎಲ್ಲವೂ ಸಂಘಟನೆಯ ಯೋಜನೆಗಳಲ್ಲಿ ಪ್ರಮುಖವಾಗಿವೆ.(ಒನ್ ಇಂಡಿಯಾ ಸುದ್ದಿ)

English summary
BJP leader Subramanian Swamy has launched a new Hindutva outfit Virat Hindustan Sangam (VHS) on Wednesday(Apr.8). Swamy said science had proven that the DNA of Hindus and Muslims in India was the same and that Hindustan was for those who were Hindus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X