ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ದೆಹಲಿ ವಿಜಯ ಹುತಾತ್ಮ ಸಿಆರ್‌ಪಿಎಫ್ ಜವಾನರಿಗೆ ಅರ್ಪಣೆ

ದೆಹಲಿಯ ಬಿಜೆಪಿ ಕಚೇರಿಯ ಮುಂದೆ ಬೃಹತ್ ಬ್ಯಾನರನ್ನು ಹಾಕಲಾಗಿದ್ದು, ಅದರಲ್ಲಿ 'ಮಾ ತುಝೇ ಸಲಾಂ' ಎಂದು ದಪ್ಪಕ್ಷರಗಳಲ್ಲಿ ಬರೆಯಲಾಗಿದೆ. ಸುಕ್ಮಾದಲ್ಲಿ ಹುತಾತ್ಮರಾದ ಯೋಧರಿಗೆ ಈ ವಿಜಯ ಅರ್ಪಣೆ ಎಂದು ಬರೆಯಲಾಗಿದೆ.

By Prasad
|
Google Oneindia Kannada News

ನವದೆಹಲಿ, ಏಪ್ರಿಲ್ 26 : ದೆಹಲಿ ಕಾರ್ಪೊರೇಷನ್ ಚುನಾವಣೆಯಲ್ಲಿ ಸಾಧಿಸಿರುವ ಅಭೂತಪೂರ್ವ ವಿಜಯವನ್ನು ಭಾರತೀಯ ಜನತಾ ಪಕ್ಷ, ಎರಡು ದಿನಗಳ ಹಿಂದೆ ಸುಕ್ಮಾದಲ್ಲಿ ಹತರಾದ 25 ಸಿಆರ್‌ಪಿಎಫ್ ಯೋಧರಿಗೆ ಅರ್ಪಿಸಿದೆ.

ದೆಹಲಿಯ ಬಿಜೆಪಿ ಕಚೇರಿಯ ಮುಂದೆ ಬೃಹತ್ ಬ್ಯಾನರನ್ನು ಹಾಕಲಾಗಿದ್ದು, ಅದರಲ್ಲಿ 'ಮಾ ತುಝೇ ಸಲಾಂ' ಎಂದು ದಪ್ಪಕ್ಷರಗಳಲ್ಲಿ ಬರೆಯಲಾಗಿದೆ. ಸುಕ್ಮಾದಲ್ಲಿ ಹುತಾತ್ಮರಾದ ಯೋಧರಿಗೆ ಈ ವಿಜಯ ಅರ್ಪಣೆ ಎಂದು ಬರೆಯಲಾಗಿದೆ.

ಛತ್ತೀಸ್ ಗಢದ ಸುಕ್ಮಾದಲ್ಲಿ 25 ಕೇಂದ್ರ ಮೀಸಲು ಪಡೆಯ ಪೊಲೀಸರನ್ನು ನಕ್ಸಲೀಯರು ಹತ್ಯೆಗೈದ ನಂತರ ಮೋದಿ ಸರಕಾರ ಭಾರೀ ಟೀಕೆಗೆ ಗುರಿಯಾಗಿತ್ತು. ಇಷ್ಟೊಂದು ಭೀಕರ ಹತ್ಯಾಕಾಂಡ ನಡೆದಿದ್ದರೂ 56 ಇಂಚಿನ ನರೇಂದ್ರ ಮೋದಿಯವರು ಏಕೆ ಸುಮ್ಮನಿದ್ದಾರೆ ಎಂದು ಟೀಕಾಸ್ತ್ರ ಪ್ರಯೋಗಿಸಲಾಗಿತ್ತು. ['ರಜಾ ಹಾಕ್ತೀನಿ ಅಂದಿದ್ದ ನನ್ನ ಮಗ ಇನ್ಯಾವತ್ತೂ ಮನೆಗೆ ಬರಲ್ಲ']

BJP dedicates MCD victory to CRPF jawans

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಸೋಲು ಕಂಡಿದ್ದು, ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಕಾರ್ಪೊರೇಷನ್ ನ ಒಟ್ಟು 270 ಸ್ಥಾನಗಳಲ್ಲಿ ಬಿಜೆಪಿ 181 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಗೆಲುವುದು ಪಡೆಯುವುದು ಖಾತ್ರಿಯಾಗಿದೆ. [LIVE: ದೆಹಲಿ ಕಾರ್ಪೊರೇಷನ್ ಚುನಾವಣೆ: ಭರ್ಜರಿ ಜಯದತ್ತ ಬಿಜೆಪಿ]

ಹುತಾತ್ಮರಾದ ಸಿಆರ್ಪಿಎಫ್ ಜವಾನರಿಗೆ ಈ ವಿಜಯವನ್ನು ಅರ್ಪಿಸಿದರೆ ಸಾಲದು, ಯೋಧರನ್ನು ಕೊಂದರ ನಕ್ಸಲೀಯರ ವಿರುದ್ಧ ಆದಷ್ಟು ಬೇಗನೆ ಕ್ರಮ ತೆಗೆದುಕೊಳ್ಳಿ ಗಣೇಶ್ ಸಿಎಚ್ ಎಂಬುವವರು ಫೇಸ್ ಬುಕ್ಕಿನಲ್ಲಿ ಕಾಮೆಂಟ್ ಮಾಡಿದ್ದಾರೆ.

English summary
BJP has dedicated it's victory in Delhi Municipal Corporation election to CRPF jawans who were brutally murdered by Naxalites in Chattisgarh in Sukma two days back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X