ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಸರ್ಕಾರ್ 2: ಕ್ಯಾಬಿನೆಟ್ ಗೆ ಯಾರು ಸೇರ್ತಾರೆ?

By Mahesh
|
Google Oneindia Kannada News

ನವದೆಹಲಿ, ಫೆ.13: ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ದಿಲ್ಲಿಯಲ್ಲಿ ದರ್ಬಾರ್ ನಡೆಸಲು ಸಜ್ಜಾಗುತ್ತಿದೆ. ಮತ್ತೊಮ್ಮೆ ಜನಮನ್ನಣೆ ಪಡೆದುಕೊಂಡಿರುವ ಅರವಿಂದ್ ಕೇಜ್ರಿವಾಲ್ ಅವರು ಜನಸಾಮಾನ್ಯರ ಸರ್ಕಾರ್ ಭಾಗ 2 ಎಪಿಸೋಡ್ ಶನಿವಾರದಿಂದ ಆರಂಭಿಸಲಿದ್ದಾರೆ.

ಎಎಪಿ ಸರ್ಕಾರದ ಕ್ಯಾಬಿನೆಟ್ ಸೇರಲಿರುವ ಅದೃಷ್ಟವಂತರ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ. ಸದ್ಯಕ್ಕೆ ಶನಿವಾರದಂದು ಅರವಿಂದ್ ಕೇಜ್ರಿವಾಲ್ ಅವರ ಜೊತೆಗೆ ಕೇವಲ 7 ಜನ ಶಾಸಕರು ಕ್ಯಾಬಿನೆಟ್ ಸ್ಥಾನ ಪಡೆಯಲಿದ್ದಾರಂತೆ. ನಿರೀಕ್ಷೆಯಂತೆ ಮನೀಷ್ ಸಿಸೋಡಿಯಾ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ.[ನೆಗೆಟಿವ್ ಪಬ್ಲಿಸಿಟಿ ಬಿಜೆಪಿ ಸೋಲಿಗೆ ಕಾರಣ: ಎಎಪಿ]

ಮಹಿಳೆಯರಿಗೆ ಸ್ಥಾನವಿಲ್ಲ: ಅರವಿಂದ್ ಕೇಜ್ರಿವಾಲ್ ಅವರ ಮೊದಲ ಸಂಪುಟ ವಿಸ್ತರಣೆಯಲ್ಲಿ ಯಾವೊಬ್ಬ ಮಹಿಳಾ ಶಾಸಕಿಯೂ ಮನ್ನಣೆ ಸಿಗುವ ಸಾಧ್ಯತೆ ಕಂಡು ಬಂದಿಲ್ಲ. ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ನೀಡಿರುವ ಪಟ್ಟಿಯಲ್ಲಿ ಮಹಿಳಾ ಶಾಸಕಿಯರ ಹೆಸರಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಜೊತೆಗೆ ನಾಲ್ಕು ಹೊಸ ಮುಖಗಳಿಗೆ ಈ ಬಾರಿ ಆದ್ಯತೆ ನೀಡಲಾಗಿದೆ. [ಕಿರಣ್ ಬೇಡಿ ಸಿಡಿಸಿದ ಹೊಸ ಬಾಂಬ್]

Kejriwal to head 7-member cabinet, Sisodia as DCM, 4 new faces

ಕಳೆದ ಬಾರಿ 49 ದಿನಗಳ ಕಾಲ ಅಧಿಕಾರ ನಡೆಸಿದ ಆಮ್ ಆದ್ಮಿ ಸರ್ಕಾರದಲ್ಲಿದ್ದ ಸಚಿವ ಸಂಪುಟವೇ ಈ ಬಾರಿಯೂ ಇರಲಿದೆ. ಆದರೆ ರಾಖಿ ಬಿರ್ಲಾ, ಗಿರೀಶ್ ಸೋನಿ ಹಾಗೂ ಸೋಮನಾಥ್ ಭಾರ್ತಿ ಕ್ಯಾಬಿನೇಟ್ ಸೇರುವುದು ಅನುಮಾನವಾಗಿದೆ. ಸತ್ಯೇಂದ್ರ ಜೈನ್ ಹಾಗೂ ಸುರಭಿ ಭಾರದ್ವಾಜ್ ಕೇಜ್ರಿ ಸಂಪುಟದ ಹೊಸ ಮುಖಗಳಾಗಿವೆ. [ಕೇಜ್ರಿವಾಲ್ ಪ್ರಮಾಣ ವಚನಕ್ಕೆ ಮೋದಿ ಗೈರು]

ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ 49 ದಿನಗಳ ಕಾಲ ಅಧಿಕಾರ ನಡೆಸಿ ಕಳೆದ ಫೆ.14ರಂದು ರಾಜೀನಾಮೆ ನೀಡಿದ್ದರು. ಒಂದು ವರ್ಷ ಕಳೆದ ನಂತರ ಅದೇ ದಿನಾಂಕದಂದು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ನಾಲ್ವರಿಗೆ ಕೊಕ್‌: ಕಳೆದ ಸಲ ಸಚಿವರಾಗಿದ್ದವರ ಪೈಕಿ ರಾಖೀ ಬಿರ್ಲಾ, ಸೋಮನಾಥ್‌ ಭಾರ್ತಿ, ಸೌರಭ್‌ ಭಾರದ್ವಾಜ್‌ ಮತ್ತು ಗಿರೀಶ್‌ ಸೋನಿ ಅವರನ್ನು ಈ ಸಲ ಸಚಿವರನ್ನಾಗಿಸದೇ ಇರಲು ಆಪ್‌ ನಿರ್ಧರಿಸಿದೆ. [ಕೇಜ್ರಿಗೆ ಅಣ್ಣಾ ಕಿವಿಮಾತು]

70 ಜನ ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 67 ಜನ ಆಮ್ ಆದ್ಮಿ ಪಕ್ಷದ ಶಾಸಕರಿದ್ದಾರೆ ಇವರಲ್ಲಿ ಶೇ 15ರಷ್ಟು ಜನ ಸಚಿವ ಸ್ಥಾನ ಪಡೆದುಕೊಳ್ಳಬಹುದು ಎಂದು ನಿಯಮ ಹೇಳುತ್ತದೆ. ವಿಪಕ್ಷ ಸ್ಥಾನ ಪಡೆಯಲು ಬೇಕಿದ್ದ 7 ಸ್ಥಾನವನ್ನು ಗಳಿಸಲು ವಿಫಲವಾದ ಬಿಜೆಪಿ 3 ಶಾಸಕರೊಂದಿಗೆ ಅಸೆಂಬ್ಲಿ ಪ್ರವೇಶಿಸಲಿದೆ. 15 ವರ್ಷಗಳ ಕಾಲ ದೆಹಲಿ ಆಳಿದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅಸೆಂಬ್ಲಿ ಎಂಟ್ರಿ ಸಿಕ್ಕಿಲ್ಲ.

ತ್ರಿನಗರ ಶಾಸಕ ಜಿತೇಂದ್ರ ತೋಮಾರ್, ಸುಲ್ತಾನ್ ಪುರಿ ಮಾಜ್ರಾದ ಸಂದೀಪ್ ಕುಮಾರ್, ಮಾತೀಯ ಮಹಲ್ ನ ಆಸೀಮ್ ಖಾನ್ ಅಲ್ಪಸಂಖ್ಯಾತ ಮುಖಗಳಾಗಿವೆ.

English summary
Arvind Kejriwal will be heading a seven-member AAP cabinet which will include his close confidante Manish Sisodia as Deputy Chief Minister and four new faces, party sources said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X