ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳ ಧನಿಕರ ಹೆಸರು ಸಿಕ್ಕರೂ ಕಾನೂನು ಕ್ರಮ ಸಾಧ್ಯವಿಲ್ಲ?!

By Mahesh
|
Google Oneindia Kannada News

ನವದೆಹಲಿ,ಫೆ.9: ನರೇಂದ್ರ ಮೋದಿ ಅವರು ಚುನಾವಣಾ ಕಾಲದಲ್ಲಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವತ್ತ ಎನ್ ಡಿಎ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ವಿದೇಶದ ಬ್ಯಾಂಕುಗಳಲ್ಲಿರುವ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ತನಿಖೆ ಮುಂದುವರೆದಿದ್ದು, ಕಾಳಧನಿಕರ ಹೆಸರನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೊಮ್ಮೆ ಬಹಿರಂಗ ಪಡಿಸಿದ್ದಾರೆ.

ತೆರಿಗೆ ವಂಚಕದ ಖಾತೆ ಬಗ್ಗೆ ವಿವರಣೆ ನೀಡಲು ಸುದ್ದಿಗೋಷ್ಠಿ ನಡೆಸಿದ ಸಚಿವ ಅರುಣ್ ಜೇಟ್ಲಿ ಆವರು ಈಗಾಗಲೇ 60 ಜನ ವಂಚಕರ ವಿರುದ್ಧ ಎಸ್ ಐಟಿ ತನಿಖೆ ತೀವ್ರಗೊಳಿಸಿದೆ ಎಂದಿದ್ದಾರೆ. [ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ]

ಎಚ್ ಎಸ್ ಬಿಸಿಯಿಂದ ಸುಮಾರು 1,195 ಖಾತೆದಾರರ ಹೆಸರು ಬಹಿರಂಗ ಗೊಂಡಿದೆ. ಈ ಪೈಕಿ 350 ಖಾತೆದಾರರ ವಿಚಾರಣೆ ಜಾರಿಯಲ್ಲಿದೆ. ವಿಚಾರ್ಣೆಯನ್ನು ಮಾರ್ಚ್ 31 ರೊಳಗೆ ಮುಕ್ತಾಯಗೊಳಿಸುವುದಾಗಿ ಎಸ್ ಐಟಿ ಹೇಳಿದೆ. [ಸ್ವಿಸ್ ಲೀಕ್ ಪಟ್ಟಿಯಲ್ಲಿರುವ 100 ಜನ ವಂಚಕರು]

Arun Jaitley on black money list: Need evidence to take legal action

ಅದರೆ, ಕಾಳಧನಿಕರು ಅಥವಾ ತೆರಿಗೆ ವಂಚಕರು ಎಂದು ಎಚ್ ಎಸ್ ಬಿಸಿಯಿಂದ ಸಿಕ್ಕಿರುವ ಖಾತೆದಾರರನ್ನು ಹೆಸರಿಸಿ ಕಾನೂನು ಕ್ರಮ ತಕ್ಷಣಕ್ಕೆ ಜರುಗಿಸಲು ಸಾಧ್ಯವಿಲ್ಲ. ತೆರಿಗೆ ವಂಚನೆ ಬಗ್ಗೆ ಸೂಕ್ತ ಸಾಕ್ಷಿ ಸಿಕ್ಕಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. [ಕಪ್ಪು ಖಾತೆ ವಿವರ ಲೀಕ್ ಮಾಡಿದ್ದ ಎಲ್ಮಾರ್]

ಸ್ವಿಸ್ ಲೀಕ್ ಹೆಸರಿನಲ್ಲಿ 1195 ಖಾತೆದಾರರ ಹೆಸರು ಬಹಿರಂಗಗೊಂಡ ತಕ್ಷಣ ಸರ್ಕಾರ ಕ್ರಮ ಜರುಗಿಸಲು ಸಾಧ್ಯವಿಲ್ಲ. ಈ ಬಗ್ಗೆ ಎಸ್ ಐಟಿ ವರದಿ ಸಲ್ಲಿಸಲಿದೆ ಎಂದರು. [ಕಪ್ಪು ಹಣ: ಮೊದಲ ಮೂವರು ಉದ್ಯಮಿಗಳ ವಿವರ]

ವಿದೇಶಗಳಲ್ಲಿ ಕಪ್ಪು ಹಣ ಇಟ್ಟಿರುವ 60 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ. ಸದ್ಯದಲ್ಲೇ ಸರ್ಕಾರ ಇವರ ವಿರುದ್ದ ಕಾನೂನು ಪ್ರಕ್ರಿಯೆ ಆರಂಭಿಸಿದೆ. ಸುಪ್ರೀಂಕೋರ್ಟಿನ ಮಾಜಿ ಜಸ್ಟೀಸ್ ಎಂಬಿ ಶಾ ಅವರ ನೇತೃತ್ವದ ವಿಶೇಷ ತನಿಖಾ ತಂಡ ಕಪ್ಪು ಹಣ ವಾಪಸ್ ಪ್ರಕರಣದ ತನಿಖೆ ನಡೆಸುತ್ತಿದೆ.

English summary
The Centre has initiated tax-evasion proceedings against 60 Indian accounts who have allegedly parked black money in foreign accounts, finance minister Arun Jaitley said Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X