ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ 3 ವರ್ಷ ಪೂರೈಸಿದ ಅಮಿತ್ ಶಾಗೆ ಅಭಿನಂದನೆ

|
Google Oneindia Kannada News

ನವದೆಹಲಿ, ಆಗಸ್ಟ್ 9: ರಾಜಕೀಯ ವಲಯದಲ್ಲಿ ಚಾಣಕ್ಯ ಎಂದೇ ಖ್ಯಾತಿ ಪಡೆದ ಅಮಿತ್ ಶಾ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಇಂದಿಗೆ(ಆಗಸ್ಟ್ 9) ಮೂರು ವರ್ಷ.

ಹೇಳಹೆಸರಿಲ್ಲದಂತಾಗಿದ್ದ ಬಿಜೆಪಿಯನ್ನು ತಳಮಟ್ಟದಿಂದ ಮೇಲಕ್ಕೆತ್ತಿ, ಇಂದು ಭಾರತದ ಅತಿದೊಡ್ಡ ರಾಜಕೀಯ ಪಕ್ಷವನ್ನಾಗಿ ಮಾಡಿದ ಹಲವು ಬಿಜೆಪಿ ನಾಯಕರಲ್ಲಿ ಅಮಿತ್ ಶಾ ಸಹ ಒಬ್ಬರು. ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವಲ್ಲಿ ಅವರ ಆಪ್ತ ಅಮಿತ್ ಶಾ ಅವರ ಕೊಡುಗೆ ಅಪಾರ.

ಭಾರತದ ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ, 73 ಸ್ಥಾನಗಳನ್ನು 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಿಸಿಕೊಟ್ಟ ಕೀರ್ತಿ ಅಮಿತ್ ಶಾ ಅವರಿಗೆ ಸಲ್ಲುತ್ತದೆ. ಉತ್ತರ ಪ್ರದೇಶದ ಈ ಅಭೂತಪೂರ್ವ ಗೆಲುವೇ ಅಮಿತ್ ಶಾ ಅವರಿಗೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಪಟ್ಟ ಒಲಿದುಬರುವಂತೆ ಮಾಡಿತು.

ಮೂರು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸದ ವೇಳಾಪಟ್ಟಿ ಮೂರು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸದ ವೇಳಾಪಟ್ಟಿ

ಅಮಿತ್ ಶಾ ಅವರು ಹುಟ್ಟಿದ್ದು 1964, ಅಕ್ಟೋಬರ್ 22 ರಂದು, ಮುಂಬೈಯಲ್ಲಿ. ತಂದೆ ಅನಿಲ್ ಚಂದ್ರ ಶಾ ಗುಜರಾತಿನಲ್ಲಿ ಉದ್ಯಮಿಯಾಗಿದ್ದವರು. ಗುಜರಾತಿನಲ್ಲಿಯೇ ಬಯೋಕೆಮಿಸ್ಟ್ರಿ ಓದಿದ ಅಮಿತ್ ಶಾ, ಬಿಎಸ್ಸಿ ಪದವಿ ಪಡೆದ ನಂತರ ತಂದೆಯ ವ್ಯವಹಾರದಲ್ಲಿ ಭಾಗಿಯಾಗತೊಡಗಿದರು.

ಮನೆಯಲ್ಲಿ ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನುಯಾಯಿಗಳೇ ಇದ್ದಿದ್ದರಿಂದ ಶಾ ಅವರು ತಪ್ಪದೇ, ಶಾಖೆಗಳಿಗೆ ಹೋಗುತ್ತಿದ್ದರು. ತಮ್ಮ ಕಾಲೇಜು ದಿನಗಳಲ್ಲಿ ಸ್ವಯಂಸೇವಕರಾಗಿದ್ದ ಅಮಿತ್ ಶಾ ಅವರು ಮೊಟ್ಟಮೊದಲ ಬಾರಿಗೆ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು 1982. ಆ ಸಮಯದಲ್ಲಿ ಮೋದಿಯವರು ಆರೆಸ್ಸೆಸ್ ನ ಪ್ರಚಾರಕ್ ಆಗಿದ್ದರು.

ನಂತರ 1983 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೆ ಸೇರಿದ ಅಮಿತ್ ಶಾ 1986 ರಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು. ನಂತರ ಹಂತ ಹಂತವಾಗಿಯೇ ಬೆಳೆದು ಬಂದ ಶಾ ಸದ್ಯಕ್ಕೆ ಬಿಜೆಪಿಯ ಅತ್ಯುನ್ನತ ಹುದ್ದೆಯಾದ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ. ರಾಷ್ಟ್ರಾಧ್ಯಕ್ಷರಾಗಿ ಮೂರು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅಮಿತ್ ಶಾ ಅವರಿಗೆ ಟ್ವಿಟ್ಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿನಂದನೆಗಳು

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ 3 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅಮಿತ್ ಶಾ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ಯಶಸ್ಸು ಸಿಗಲಿ

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ 3 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅಮಿತ್ ಶಾ ಅವರಿಗೆ ಅಭಿನಂದನೆಗಳು. ನಿಮ್ಮ ಅಧ್ಯಕ್ಷತೆಯಲ್ಲಿ ಬಿಜೆಪಿ ಮತ್ತಷ್ಟು ಮೈಲಿಗಲ್ಲುಗಳನ್ನು ನಿರ್ಮಿಸಲಿ ಎಂದು ರಿಚರ್ಡ್ ಹೆ ಎಂಬುವವರು ಟ್ವೀಟ್ ಮಾಡಿದ್ದಾರೆ.

ಉಲ್ಲೇಖಿಸುವಂಥ ಕಾರ್ಯ

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ 3 ಯಶಸ್ವಿ ವರ್ಷಗಳನ್ನು ಪೂರೈಸಿದ ಅಮಿತ್ ಶಾ ಅವರಿಗೆ ಅಭಿನಂದನೆಗಳು. ನಿಸ್ಸಂಶಯವಾಗಿ ಅವರದು ಅತ್ಯಂತ ಉಲ್ಲೇಖಿಸುವಂಥ ಕಾರ್ಯ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಸ್ಮರಣೀಯ ಮೂರು ವರ್ಷ

ಮೂರು ವರ್ಷಗಳಲ್ಲಿ ಬಿಜೆಪಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಧನ್ಯವಾದಗಳು. ಈ ಮೂರು ವರ್ಷಗಳು ನಿಜಕ್ಕೂ ಸ್ಮರಣೀಯವಾದುದು ಎಂದು ಕೇಂದ್ರ ಸಚಿವ ಜೆ ಪಿ ನಡ್ಡಾ ಅವರು ಟ್ವೀಟ್ ಮಾಡಿದ್ದಾರೆ.

English summary
Congratulations to Shr Amit Shah on completing 3 successful years as BJP President, Prime minister of India Narendra Modi tweeted. Many people congratulate Amith shah for completing three successful years as BJP national president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X