ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ವರ್ಷಗಳ ನಂತರ ಏರ್ ಇಂಡಿಯಾಕ್ಕೆ ಬಂತು ಲಾಭ

By Kiran B Hegde
|
Google Oneindia Kannada News

ನವದೆಹಲಿ, ಜ. 13: ಪಕ್ಕಾ ಲಾಭ ಕೇಂದ್ರಿತ ವ್ಯವಹಾರ ನಡೆಸುವ ದೇಶದ ಹಲವು ಖಾಸಗಿ ವಿಮಾನಯಾನ ಸಂಸ್ಥೆಗಳು ತೀವ್ರ ನಷ್ಟದಲ್ಲಿವೆ. ಮುಚ್ಚುವ ಭೀತಿಯನ್ನೂ ಎದುರಿಸುತ್ತಿವೆ. ಆದರೆ, ಭಾರತದ ಸರ್ಕಾರಿ ಸ್ವಾಮಿತ್ವದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಲಾಭ ತೋರಿಸಿದೆ.

ಅಚ್ಚರಿಯಾದರೂ ನಿಜ. ಹಲವು ವರ್ಷಗಳಿಂದ ಬರೀ ನಷ್ಟವನ್ನಷ್ಟೇ ದಾಖಲಿಸುತ್ತಿದ್ದ ಏರ್ ಇಂಡಿಯಾ 2014ರಲ್ಲಿ 14.6 ಕೋಟಿ ರು. ನಿವ್ವಳ ಲಾಭ ಗಳಿಸಿದೆ. [1,557 ರು.ಗೆ ಏರ್ ಇಂಡಿಯಾ ಟಿಕೆಟ್ ದರ]

airindia

2013ರ ಡಿಸೆಂಬರ್ ಅಂತ್ಯದಲ್ಲಿ ಸಂಸ್ಥೆಯ ಆದಾಯ 1,944 ಕೋಟಿ ರು. ಇತ್ತು. ಈ ಮೊತ್ತ 2014ರ ಡಿಸೆಂಬರ್ ಅಂತ್ಯದಲ್ಲಿ ಶೇ. 6.5ರಷ್ಟು ಹೆಚ್ಚು ಆದಾಯ ಅಂದರೆ 2,070 ಕೋಟಿ ರು. ಗಳಿಸಿದೆ. [ದುಬೈ ಪ್ರವಾಸದ ಪ್ಯಾಕೇಜ್]

ಇದೇ ಸಂದರ್ಭದಲ್ಲಿ ಹೊಸದಾಗಿ ಆರಂಭವಾಗಿರುವ ವಿಸ್ತಾರಾ ಸೇರಿದಂತೆ ಸ್ಪೈಸ್ ಜೆಟ್ ಇತರ ವಿಮಾನಯಾನ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡುವ ಉದ್ದೇಶದಿಂದ ಟಿಕೆಟ್‌ನಲ್ಲಿ ಶೇ. 50ರವರೆಗೂ ದರ ಕಡಿತ ಘೋಷಿಸಿದೆ.

English summary
Government of India owned Air India recorded a net profit of Rs 14.6 crore in December last, driven by a healthy growth in both passenger and cargo revenue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X