ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ತೆ

By Mahesh
|
Google Oneindia Kannada News

ನವದೆಹಲಿ, ಏ.16: 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ದೆಹಲಿ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದಾರೆ...ರಾಹುಲ್ ಗಾಂಧಿ ಮತ್ತೆ ಭಾರತಕ್ಕೆ ವಾಪಸ್ ಬಂದಿರುವ ಸುದ್ದಿ ಬ್ರೇಕಿಂಗೋ, ಶೇಕಿಂಗೋ, ಟಿವಿ ಮಾಧ್ಯಮಗಳಲ್ಲಂತೂ ರಾಹುಲ್ ಆಗಮನಕ್ಕೆ ರೆಡ್ ಕಾರ್ಪೆಟ್ ಹಾಸಲಾಗಿದೆ.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ರಾತ್ರಿ 11 ಗಂಟೆಗೆ ಥಾಯ್ ಏರ್ ವೇಸ್ ವಿಮಾನದ ಮೂಲಕ ಬಂದಿಳಿದ ರಾಹುಲ್ ಗಾಂಧಿ ಅವರು ದೆಹಲಿಯ ನಿವಾಸಕ್ಕೆ ತೆರಳಿದ್ದಾರೆ. ಫೆ.20ರಂದು ಪ್ರವಾಸಕ್ಕೆ ತೆರಳಿದ್ದ ರಾಹುಲ್ ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಮಾಹಿತಿಯನ್ನು ಕಾಂಗ್ರೆಸ್ ಗೌಪ್ಯವಾಗಿಟ್ಟಿತ್ತು. [ರಾಹುಲ್ ಗಾಂಧಿ ಎಲ್ಲಿದ್ದರೂ ಮೇ.8 ಪ್ರತ್ಯಕ್ಷವಾಗ್ಲೇ ಬೇಕ್!]

AICC Vice President Rahul Gandhi Back in Delhi

ರಾಹುಲ್ ಅವರು ವಿಯೆಟ್ನಾಂ, ಮ್ಯಾನ್ಮಾರ್, ಥೈಲ್ಯಾಂಡ್, ಯುರೋಪ್, ಭೂತನ್, ಉತ್ತರಾಖಂಡ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿಹರಿಸುತ್ತಿದ್ದರು ಎಂಬ ಸುದ್ದಿ ಹಬ್ಬಿತ್ತು. [ರಾಹುಲ್ ಗಾಂಧಿ ಪತ್ತೆ ಹಚ್ಚುವಲ್ಲಿ ಸುಬ್ರಮಣ್ಯ ಸ್ವಾಮಿ ಯಶಸ್ವಿ!]

44 ವರ್ಷ ವಯಸ್ಸಿನ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಜೆಟ್ ಅಧಿವೇಶನಕ್ಕೆ ಗೈರು ಹಾಜರಾಗಿದ್ದು, ಭಾರಿ ಸುದ್ದಿಯಾಗಿತ್ತು. ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಯಿತು.


ಅಲಹಾಬಾದ್ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಯಿತು. ಪ್ರಿಯಾಂಕಾ ಕರೆ ತನ್ನಿ, ಕಾಂಗ್ರೆಸ್ ಉಳಿಸಿರಿ ಎಂಬ ಅಭಿಯಾನವೂ ನಡೆದು ಬಿಟ್ಟಿತು.ಏ.19ರಂದು ರೈತರ ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಅವರು ಭಾಷಣ ಮಾಡುವ ಸಾಧ್ಯತೆಯಿದೆ.

English summary
Congress president Sonia Gandhi on Thursday arrived at her son Rahul Gandhi's residence amid reports that he has returned to Delhi ending his much talked about 'sabbatical'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X