ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಜಲ್ ಗುರು ಪರ ವಿವಾದ: ನ್ಯಾಯಾಂಗ ಸಮಿತಿ ತನಿಖೆ, ಕನ್ಹಯ್ಯಾ ಡಿಬಾರ್

By Mahesh
|
Google Oneindia Kannada News

ನವದೆಹಲಿ, ಫೆ. 14: ಅಧಿಕಾರಕ್ಕೆ ಬಂದು ಒಂದು ವರ್ಷವಾದ ಸಂಭ್ರಮ ಆಚರಿಸಲು ಸಿದ್ಧವಾಗಿರುವ ಆಮ್ ಆದ್ಮಿ ಪಕ್ಷಕ್ಕೆ ಜವಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ರಗಳೆ ತಲೆ ನೋವು ತರಿಸಿದೆ. ನಿರೀಕ್ಷೆಯಂತೆ ಅಫ್ಜಲ್ ಗುರು ಪರ ಕಾರ್ಯಕ್ರಮ, ಜೆಎನ್ ಯು ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ಈಗ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಸಿಲುಕಿದೆ.

ಈ ನಡುವೆ ಫೆಬ್ರವರಿ 09ರಂದು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ ಕಾರಣ ನೀಡಿ ಕನ್ಹಯ್ಯ ಕುಮಾರ್ ಹಾಗೂ 7 ಜನರನ್ನು ಡಿಬಾರ್ ಮಾಡಲಾಗಿದೆ. ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸಿ ಶಿಫಾರಸು ನೀಡಿದ್ದು, ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ, ಪ್ರಧಾನ ಕಾರ್ಯದರ್ಶಿ ರಾಮ ನಾಗ ಮುಂತಾದವರನ್ನು ಕೂಡಲೇ ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಭೂಪಿಂದರ್ ಝುಟ್ಷಿ ಹೇಳಿದ್ದಾರೆ. [ಅಫ್ಜಲ್ ಗುರು ಪರ ಘೋಷಣೆ ಕೂಗಿದವರ ಬಂಧನ]

Kanhaiya Kumar and 7 others debarred

ಕನ್ಹಯಾ ಹಾಗೂ ಇತರರ ಬಿಡುಗಡೆ, ಡಿಬಾರ್ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆ ಸೋಮವಾರ(ಫೆ. 15)ದಂದು ಬೃಹತ್ ಪ್ರತಿಭಟನೆಗೆ ಮುಂದಾಗಿದೆ.

ಕನ್ಹಯಾ ಕುಮಾರ್, ನಾಗ, ಸಯದ್ ಉಮರ್ ಖಾಲೀದ್, ಅನಿರ್ ಬನ್ ಭಟ್ಟಚಾರ್ಯ, ಅಶುತೋಷ್ ಕುಮಾರ್, ಅನಂತ್ ಪ್ರಕಾಶ್ ನಾರಾಯಣ್, ಐಶ್ವರ್ಯ ಅಧಿಕಾರಿ ಹಾಗೂ ಶ್ವೇತ ರಾಜ್ ಅವರು ಮೇಲೆ ಡಿಬಾರ್ ಆದೇಶ ಹೇರಲಾಗಿದೆ. ಆದರೆ, ಕಾಲೇಜು ಹಾಸ್ಟೆಲ್ ರೂಮುಗಳನ್ನು ತೊರೆಯುವಂತೆ ಸೂಚಿಸಿಲ್ಲ.

ಕನ್ಹಯ್ಯಾ ಕುಮಾರ್ ಅವರು ಭಾರತ ವಿರೋಧಿ ಹೇಳಿಕೆ ನೀಡಿರುವುದರ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಎಎಪಿ ವರ್ಷಾಚರಣೆ ಹಿನ್ನಲೆಯಲ್ಲಿ ಭಾನುವಾರದಂದು ಸಾರ್ವಜನಿಕರೊಡನೆ ನೇರ ಸಂವಾದ ಕಾರ್ಯಕ್ರಮದಲ್ಲಿ ಸದ್ಯಕ್ಕೆ ನಿರತರಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)

English summary
The high-level inquiry conducted by a three-member committee submitted its interim report on Friday evening and recommended debarring eight student from academic activities," announced Bupinder Zutshi, registrar of the university
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X