ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ತಾಣದಲ್ಲಿ ಬಿರುಗಾಳಿ ಎಬ್ಬಿಸಿರುವ ಅಮೀರ್ ಮಾತು

By Prasad
|
Google Oneindia Kannada News

ನವದೆಹಲಿ, ನವೆಂಬರ್ 24 : ದೇಶದಲ್ಲಿ 'ಹೆಚ್ಚುತ್ತಿರುವ ಅಸಹಿಷ್ಣುತೆ' ಕುರಿತಂತೆ ಬಾಲಿವುಡ್ ನಟ ಅಮೀರ್ ಖಾನ್ ಅವರು ಆಡಿರುವ ಮಾತುಗಳು ಸಾಮಾಜಿಕ ತಾಣಗಳಲ್ಲಿ ಅಲ್ಲೋಲಕಲ್ಲೋಲವನ್ನು ಎಬ್ಬಿಸಿವೆ. ಕೆಲವರು ಅವರ ಮೇಲೆ ಟೀಕಾಪ್ರಹಾರ ಆರಂಭಿಸಿದ್ದರೆ, ಇನ್ನು ಕೆಲವರು 'ಮಿ. ಪರ್ಫೆಕ್ಟ್' ಬೆಂಬಲಕ್ಕೆ ನಿಂತಿದ್ದಾರೆ.

ದೆಹಲಿಯಲ್ಲಿ ಸೋಮವಾರ ನಡೆದ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೀರ್ ಅವರು, ದೇಶದಲ್ಲಿನ ಅಸಹಿಷ್ಣುತೆ, ಅಲ್ಪಸಂಖ್ಯಾತರು, ವಿಚಾರವಾದಿಗಳ ಮೇಲೆ ಆಗುತ್ತಿರುವ ಹಲ್ಲೆ, ಪ್ಯಾರಿಸ್ ನಲ್ಲಿ ನಡೆದ ಭೀಕರ ದಾಳಿಗಳ ಕುರಿತು ಮಂಡಿಸಲಾಗಿರುವ ಅಭಿಪ್ರಾಯಗಳು ಹಲವರ ಕಣ್ಣು ಕೆಂಪಾಗುವಂತೆ ಮಾಡಿವೆ. [ಉಗ್ರರಿಂದ ಫ್ರಾನ್ಸ್ ಮೇಲೆ ರಾಸಾಯನಿಕ, ಜೈವಿಕ ಅಸ್ತ್ರ ಬಳಕೆ?]

Aamir Khan's statement on intolerance creates ripples on social media

ಅವರು ಹೇಳಿದ್ದಿಷ್ಟು, "(ಪ್ಯಾರಿಸ್ ದಾಳಿ ಕುರಿತು) ಧಾರ್ಮಿಕತೆಯ ಹೆಸರಿನಲ್ಲಿ ಮುಗ್ಧರನ್ನು ಕೊಲ್ಲುತ್ತಿರುವವರು ಮುಸ್ಲಿಂ ಅಲ್ಲ. ಅವರು ತಾವು ಮುಸ್ಲಿಂ ಎಂದು ಹೇಳಿಕೊಳ್ಳಬಹುದು. ಆದರೆ, ಅವರನ್ನು ಮುಸ್ಲಿಂ ಎಂದು ಮಾನ್ಯ ಮಾಡಲು ಸಾಧ್ಯವಿಲ್ಲ. ಕುರಾನ್ ಕೈಯಲ್ಲಿ ಹಿಡಿದುಕೊಂಡು ಜನರನ್ನು ಕೊಲ್ಲುತ್ತಿದ್ದರೆ ಅದು ಇಸ್ಲಾಮ್ ಕೃತ್ಯವಾಗುವುದಿಲ್ಲ."

"(ಹೆಚ್ಚುತ್ತಿರುವ ಅಸಹಿಷ್ಣುತೆ ಕುರಿತು) ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಿ ನೆಲೆಸುವುದು ಸೂಕ್ತವೆ ಎಂದು ಹೆಂಡತಿ ಕಿರಣ್ ಕೇಳುತ್ತಿದ್ದಾಳೆ" ಎಂಬ ಮಾತನ್ನು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಅಮೀರ್ ಆಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ, ತಮಗೆ ದಕ್ಕಿರುವ ಪ್ರಶಸ್ತಿ ವಾಪಸ್ ಮಾಡುವ ಕುರಿತು ಏನನ್ನೂ ಹೇಳಿಲ್ಲ.


ಅಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು, "ಜಗತ್ತಿನ ಎಲ್ಲೆಡೆಯೂ ಅಸಹಿಷ್ಣುತೆ ಇದ್ದೇ ಇದೆ. ಭಾರತದ ಫಿಲ್ಮಂ ಸ್ಟಾರ್ ಅಮೀರ್ ಖಾನ್ ಮತ್ತು ಕುಟುಂಬಕ್ಕೆ ಭಾರತಕ್ಕಿಂತ ಸುರಕ್ಷಿತ ರಾಷ್ಟ್ರ ಮತ್ತೊಂದಿಲ್ಲ" ಎಂದಿದ್ದಾರೆ.

English summary
Bollywood Actor Aamir Khan's statement on intolerance has created furore in social media. He had stated, his wife Kiran was asking if it is safe to more out of coutry as she feared safety of their children. He has also said, people who are killing innocent are not muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X