ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ದೇಜಗೌ ಅವರಿಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 01 : ಸೋಮವಾರ ನಿಧನರಾದ ಹಿರಿಯ ಸಾಹಿತಿ, ನಾಡೋಜ ದೇ.ಜವರೇಗೌಡ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು. ಆ ಮೂಲಕ ಕನ್ನಡದ ಹಿರಿಯ ಹಾಗೂ ಕುವೆಂಪು ಶಿಷ್ಯ ಪರಂಪರೆಯ ಕೊನೆಯ ಕೊಂಡಿ ಕಳಚಿ ಭೂತಾಯಿಯ ಒಡಲಲ್ಲಿ ಚಿರನಿದ್ರೆಗೆ ಜಾರಿತು.

ದೇಜಗೌ ಅವರ ಪಾರ್ಥೀವ ಶರೀರವನ್ನು ಅವರ ಮನೆಗೆ ಕೊಂಡೊಯ್ಯಲಾಗಿತ್ತು. ಮಂಗಳವಾರ ಬೆಳಗ್ಗೆ ಪಾರ್ಥೀವ ಶರೀರವನ್ನು ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಗೆ ತರಲಾಯಿತು. ಅಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. [ಪದ್ಮಶ್ರೀ, ಪಂಪ, ಕರ್ನಾಟಕ ರತ್ನ ದೇಜಗೌ ಕಣ್ಮರೆ]

de javaregowda
Photo Credit:

ಸಾರ್ವಜನಿಕ ದರ್ಶನದ ನಂತರ ಜಿಲ್ಲಾಡಳಿತದ ಗೌರವ ಹಾಗೂ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇಜಗೌ ಅವರ ಪತ್ನಿ ಸಾವಿತ್ರಮ್ಮ ಅವರ ಸಮಾಧಿ ಪಕ್ಕದಲ್ಲೇ ದೇಜಗೌ ಅವರನ್ನು ಮಣ್ಣು ಮಾಡಲಾಯಿತು. ದೇಜಗೌ ಅವರ ಪುತ್ರ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಶಶಿಧರ ಪ್ರಸಾದ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಮುಖ್ಯಮಂತ್ರಿಗಳಿಂದ ಅಂತಿಮ ನಮನ : ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಆವರಣಕ್ಕೆ ತೆರಳಿ ದೇಜಗೌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಅಂತಿಮ ನಮ ಸಲ್ಲಿಸಿದ ದೇವೇಗೌಡರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ದೇಜಗೌ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಸಿದ್ದರಾಮಯ್ಯ, ಸಚಿವರಿಂದ ಅಂತಿಮ ನಮನ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ದೇಜಗೌ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಭೈರಪ್ಪ ಅವರಿಂದ ಅಂತಿಮ ನಮನ

ಹಿರಿಯ ಸಾಹಿತಿ ಎಲ್‌.ಎಲ್.ಭೈರಪ್ಪ ಅವರು ದೇಜಗೌ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಪುಟ್ಟಣ್ಣಯ್ಯ ಅವರಿಂದ ಅಂತಿಮ ನಮನ

ಮೇಲುಕೋಟೆ ಶಾಸಕ ಮತ್ತು ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರು ದೇಜಗೌ ಅವರಿಗೆ ನಮನ ಸಲ್ಲಿಸಿದರು.

ವೀರಪ್ಪ ಮೊಯ್ಲಿ ಅವರಿಂದ ನಮನ

ಚಿಕ್ಕಬಳ್ಳಾಪುರ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿ ಅಂತಿಮ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರು, 'ದೇಜಗೌ ಅಪ್ಪಟ ಕನ್ನಡ ಅಭಿಮಾನಿಯಾಗಿದ್ದರು. ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಮೈಸೂರು ವಿವಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯನ್ನು ಕುವೆಂಪುರವರ ಹೆಸರಿನಲ್ಲಿ ಸ್ಥಾಪಿಸಿದ್ದರು. ಕಡು ಬಡತನದ ಕುಟುಂಬದಲ್ಲಿ ಜನಿಸಿದ ಅವರು ಹಂತ ಹಂತವಾಗಿ ಮೇಲೆ ಬಂದು ಮೈಸೂರು ವಿವಿ ಕುಲಪತಿ ಸ್ಥಾನ ಅಲಂಕರಿಸಿದ್ದರು' ಎಂದು ಹೇಳಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಮಾಜಿ ಪ್ರಧಾನಿ ದೇವೇಗೌಡ, ಆದಿ ಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಸಕ್ಕರೆ ಸಚಿವ ಮಹದೇವ್ ಪ್ರಸಾದ್ ಮುಂತಾದ ಗಣ್ಯರು ದೇಜಗೌ ಅವರಿಗೆ ಅಂತಿಮ ನಮನ ಸಲ್ಲಿಸಿದರು.

English summary
Writer De Jaware Gowda who passed away on Monday, May 31, 2016 was laid to rest. Last writes with state honors held at premises of Kuvempu Vidyavardaka Trust at Jayalakshmipuram, Mysuru on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X