ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯದುವಂಶದ ಉತ್ತರಾಧಿಕಾರಿ ಯದುವೀರ್, ಒಂದು ಪರಿಚಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 25 : ಮೈಸೂರು ಅರಮನೆಯಲ್ಲಿ ಮದುವೆ ಸಂಭ್ರಮ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಾಹಕ್ಕೆ ಭರದ ಸಿದ್ಧತೆ ನಡೆದಿದೆ. ಸಾಂಪ್ರದಾಯಿಕವಾಗಿ ನಡೆಯುವ ವಿವಾಹದ ವಿಧಿ ವಿಧಾನಗಳಿಗೆ ಶನಿವಾರ ಚಾಲನೆ ಸಿಕ್ಕಿದೆ. ಯದುವೀರ್ ಒಡೆಯರ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

ಮೈಸೂರು ಯದುವಂಶದ ಉತ್ತರಾಧಿಕಾರಿಯಾಗಿ ರಾಜಮಾತೆ ಪ್ರಮೋದಾದೇವಿ ಅವರ ದತ್ತು ಪುತ್ರನಾಗಿ ಯುವರಾಜನೆಂದೇ ಕರೆಯಲ್ಪಡುತ್ತಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯಾರು? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. [40 ವರ್ಷ ಬಳಿಕ ಅರಮನೆಯಲ್ಲಿ ವಿವಾಹ ಸಂಭ್ರಮ!]

yaduveer urs

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಎರಡನೇ ಪತ್ನಿ ತ್ರಿಪುರಸುಂದರಿ ಅಮ್ಮಣಿ ಅವರಿಗೆ 6 ಮಂದಿ ಮಕ್ಕಳು. ಅವರೆಂದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಗಾಯಿತ್ರಿ ದೇವಿ, ಮೀನಾಕ್ಷಿ ದೇವಿ, ಕಾಮಾಕ್ಷಿ ದೇವಿ, ಇಂದ್ರಾಕ್ಷಿ ದೇವಿ, ವಿಶಾಲಾಕ್ಷಿ ದೇವಿ. [ಅರಮನೆಯಲ್ಲಿ ಯದುವೀರ್ ವಿವಾಹ ಸಂಭ್ರಮ ಆರಂಭ]

ಇವರ ಪೈಕಿ ಗಾಯಿತ್ರಿ ದೇವಿ ಅವರನ್ನು ರಾಜಸ್ಥಾನದ ರಾಜ ಕುಟುಂಬದ ಕೆ.ಬಿ.ರಾಮಚಂದ್ರರಾಜೇ ಅರಸ್ ಅವರಿಗೆ ವಿವಾಹ ಮಾಡಿಕೊಡಲಾಗಿದೆ. ಈ ದಂಪತಿಗಳ ಪುತ್ರ ಸ್ವರೂಪ್ ಆನಂದ್ ಗೋಪಾಲ್ ರಾಜೇ ಅರಸ್ ಆಗಿದ್ದು, ಇವರು ತ್ರಿಪುರ ಸುಂದರಿ ಎಂಬುವರನ್ನು ವಿವಾಹವಾಗಿದ್ದಾರೆ. ಈ ದಂಪತಿಗಳ ಪುತ್ರ ಯದುವೀರ್ ಅರಸ್. [ಸಿಂಹಾಸನವೇರಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್]

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ವರ್ಗಸ್ಥರಾದ ಬಳಿಕ ರಾಜಮಾತೆ ಪ್ರಮೋದಾದೇವಿ ಅವರು ಶಾಸ್ತ್ರ ಸಂಪ್ರದಾಯದಂತೆ ಯದುವೀರರನ್ನು ದತ್ತು ಪಡೆದಿದ್ದು, ಇದೀಗ ಅವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಿದ್ದಾರೆ. [ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]

ಬೆಂಗಳೂರಲ್ಲಿ ವ್ಯಾಸಂಗ : ಬೆಂಗಳೂರಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿದ ಯದುವೀರ್ ಅವರು ಬಳಿಕ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಯದುವೀರ್ ಅವರು ಯದುವಂಶವನ್ನು ಮುನ್ನಡೆಸಲಿದ್ದಾರೆ.

ಅರಮನೆಯಲ್ಲಿ ಈಗಾಗಲೇ ವಿವಾಹದ ಕಾರ್ಯಕ್ರಮಗಳು ಆರಂಭವಾಗಿದ್ದು ರಾಜಸ್ಥಾನದ ಡುಂಗಾಪುರ ರಾಜಮನೆತನದ ಹರ್ಷವರ್ಧನ್ ಹಾಗೂ ಮಹೇಶ್ರೀ ದಂಪತಿಗಳ ಪುತ್ರಿ ತ್ರಿಷಿಕಾಕುಮಾರಿ ಸಿಂಗ್ ಮತ್ತು ಸಂಬಂಧಿಕರು ಮೈಸೂರಿಗೆ ಆಗಮಿಸಿದ್ದಾರೆ.

ಮದುವೆಗೆ ಆಮಂತ್ರಣ ಪಡೆದ ಹಲವು ಗಣ್ಯರು ಮೈಸೂರಿಗೆ ಆಗಮಿಸಿದ್ದು ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದಾರೆ. ಹಲವು ಗಣ್ಯರು ಜೂ.27 ಮತ್ತು 28ರಂದು ನಡೆಯಲಿರುವ ಧಾರಾಮುಹೂರ್ತ ಮತ್ತು ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

yaduveer

ವಿವಾಹ ಕಾರ್ಯಕ್ರಮಗಳು ಅರಮನೆಯಲ್ಲಿ ನಡೆಯುತ್ತಿರುವುದರಿಂದ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದ್ದರಿಂದ ದೂರದಿಂದ ಬಂದ ಪ್ರವಾಸಿಗರು ದೂರದಿಂದಲೇ ಅರಮನೆಯನ್ನು ವೀಕ್ಷಿಸಿ ವಾಪಸ್ ಆಗುತ್ತಿದ್ದಾರೆ.

English summary
The Mysuru Palace gears up to hold the first marriage in four decades. The 27th scion of the royal family, Yaduveer Krishnadatta Chamaraja Wadiyar is getting married to Trishika Kumari Singh on Monday, June 27, 2016. Who is Yaduveer Krishnadatta Chamaraja Wadiyar?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X