ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಟ್ಟದ ಕೋಟೆ ಮನೆತನ ಯುವರಾಜ ಯದುವೀರ್ ಪರಿಚಯ

By ರಾಘವೇಂದ್ರ ಅಡಿಗ
|
Google Oneindia Kannada News

ಮೈಸೂರು ರಾಜಮನೆತನದ ಯುವರಾಜನ ಪಟ್ಟಕ್ಕೆ ಚಾಮರಾಜ ಒಡೆಯರ್ ರವರ ಹಿರಿಯ ಪುತ್ರಿ ಗಾಯಿತ್ರಿದೇವಿಯವರ ಮಗಳು ತ್ರಿಪುರಸುಂದರಿ ದೇವಿ - ಸ್ವರೂಪ್ ಆನಂದ್ ಗೋಪಾಲರಾಜೇ ಅರಸ್ ದಂಪತಿಗಳ ಪುತ್ರನಾಗಿರುವ ಯದುವೀರ್ ಗೋಪಾಲ್ ರಾಜೇ ಅರಸ್ (22 ವರ್ಷ) ರವರನ್ನು ದತ್ತು ತೆಗೆದುಕೊಳ್ಳುವುದಕ್ಕೆ ರಾಣಿ ಪ್ರಮೋದಾ ದೇವಿ ಅಂತಿಮ ಮುದ್ರೆ ಒತ್ತಿದ್ದಾರೆ.

ಇದರಿಂದಾಗಿ ಕಳೆದ ಒಂದು ವರ್ಷದಿಂದ ಒಡೆಯರ್ ರವರ ಉತ್ತರಾಧಿಕಾರಿ ಪಟ್ಟಕ್ಕೆ ಯಾರು? ಎಂಬ ಪ್ರಶ್ನೆ ಹಾಗೂ ವಿವಾದಕ್ಕೆ ಇಂದು ಅಂತಿಮ ಉತ್ತರ ದೊರಕಿದಂತಾಗಿದೆ.

ಇದೇ ಫೆ .20 ರಂದು ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರವರ ಜನ್ಮ ದಿನವಾಗಿದ್ದು ಅಂದು ಅರಮನೆಯ ಅಂಗಳದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಫೆ .21 ರಂದು ಅರಮನೆಯ ಬ್ಯಾಂಕ್ಪೆಟ್ ಹಾಲ್ ನಲ್ಲಿ ಗಣಪತಿ ಹೋಮ ಸೇರಿದಂತೆ ದಿನವಿಡಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಫೆ.23 ರಂದು ಬೆಳಿಗ್ಗೆ 6.30 ರಿಂದ ಸಂಜೆ ತನಕ ವಿಶೇಷ ಪೂಜಾ ಕಾರ್ಯಕ್ರಮಗಳ ನಡುವೆ ಯದುವೀರ್ ಗೋಪಾಲ ರಾಜೇ ಅರಸ್ ರವರನ್ನು ದತ್ತು ಸ್ವೀಕಾರ ಮಾಡಲಾಗುವುದು.

Yaduveer Gopal Raj Urs

ಯದುವೀರ್ ಗೋಪಾಲ್ ರಾಜೇ ಅರಸ್ : ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಕೆನೆಡಿಯನ್ ಅಂತರಾಷ್ಟ್ರೀಯ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಪ್ರಸ್ತುತ ಅಮೇರಿಕಾದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ಆಂಗ್ಲ ಭಾಷೆಯೊಂದಿಗೆ ಬಿ.ಎ.ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರು ಬೆಟ್ಟದ ಕೋಟೆ ಮನೆತನಕ್ಕೆ ಸೇರಿದವರು. ಮೈಸೂರಿನ ಒಡೆಯರ್ ಮನೆತನ ಹಾಗೂ ಬೆಟ್ಟದ ಕೋಟೆ ಮನೆತನದ ಮಧ್ಯೆ ಇರುವ ಸಂಬಂಧ ಹಾಗೂ ಒಡನಾಟ 200 ವರ್ಷಕ್ಕೂ ಮಿಗಿಲಾಗಿ ಬೆಳೆದು ಬಂದಿದೆ. ಮಹಾರಾಣಿ ಲಕ್ಷಮಣ್ಣಿ ರವರು, ಇದೇ ಮನೆತನಕ್ಕೆ ಸೇರಿದವರು. [ಯದು ವಂಶದ ಉತ್ತರಾಧಿಕಾರಿ ವಿವಾದದ ನೆನೆಪುಗಳು]

ಮುಮ್ಮಡಿ ಕೃಷ್ಣರಾಜ ಒಡೆಯರ್ ರವರಿಗೆ ರಾಜ್ಯಭಾರವನ್ನು ಮರುಗಳಿಸಿಕೊಡುವಲ್ಲಿ ಅವರ ಪ್ರಮುಖ ಪಾತ್ರ ಮರೆಯುವಂತಿಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತು ಪುತ್ರ 10 ನೇ ಚಾಮರಾಜೇಂದ್ರ ಒಡೆಯರ್ ರವರು ಸಹ ಇದೇ ಮನೆತನಕ್ಕೆ ಸೇರಿದವರು.

Srikantadatta narasimharaja Wodeyar
ಮೈಸೂರು ಸಂಸ್ಥಾನವನ್ನು ಆಳಿದ ಅರಸರು

* ಯದುರಯರುರು (ಸುಮಾರು 1399-1423)
* ಬೆಟ್ಟದ ಚಾಮರಾಜ ಒಡೆಯರು (1423-1459)
* ತಿಮ್ಮರಾಜ ಒಡೆಯರು (1459-1478)
* ಹಿರಿಯ ಚಾಮರಾಜ ಒಡೆಯರು (1478-1513)
* ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553)
* ತಿಮ್ಮರಾಜ ಒಡೆಯರು
* ಬೋಳ ಚಾಮರಾಜ ಒಡೆಯರು
* ಬೆಟ್ಟದ ಚಾಮರಾಜ ಒಡೆಯರು (ಈ ಮೂರೂ ಜನ 1553-1578)
* ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
* ಚಾಮರಾಜ ಒಡೆಯರು (1617-1637)
* ಎರಡನೆ ರಾಜ ಒಡೆಯರು (1637-1638) ಕೇವಲ 1 ವರ್ಷದ ಆಳ್ವಿಕೆ
* ರಣಧೀರ ಕಂಠೀರವ ನರಸರಾಜ ಒಡೆಯರು (1638-1659)
* ದೊಡ್ಡದೇವರಾಜ ಒಡೆಯರು (1659-1673)
* ಚಿಕ್ಕದೇವರಾಜ ಒಡೆಯರು (1673-1704)
* ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714 ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
* ದೊಡ್ಡ ಕೃಷ್ಣರಾಜ ಒಡೆಯರು (1714-1734)
* ಅಂಕನಹಳ್ಳಿ ಚಾಮರಾಜ ಒಡೆಯರು
* ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು, 1766ರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
* ನಂಜರಾಜ ಒಡೆಯರು (1766- 1770)
* ಬೆಟ್ಟದ ಚಾಮರಾಜ ಒಡೆಯರು (1770-1776)
* ಖಾಸಾ ಚಾಮರಾಜ ಒಡೆಯರು (1776-1796) (ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)
* ಮುಮ್ಮಡಿ ಕೃಷ್ಣರಾಜ ಒಡೆಯರು (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆಬಿಟ್ಟುಕೊಡಬೇಕಾಯಿತು.
* ಚಾಮರಾಜ ಒಡೆಯರು (1881-1902)
* ನಾಲ್ವಡಿ ಕೃಷ್ಣರಾಜ ಒಡೆಯರು (1902-1940)
* ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)
* ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ (20 ಫೆಬ್ರುವರಿ 1953 - 10 ಡಿಸೆಂಬರ್ 2013)

English summary
The Wadiyar dynasty an Indian Hindu dynasty that ruled the Kingdom of Mysore from 1399 to 1947. The kingdom was incorporated into the Dominion of India after its independence from British rule. Mysore Royal Family named Yaduveer Gopal Raj Urs as Wodeyar heir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X