ಚಿತ್ರಗಳು : ಹುಣಸೂರಿನಲ್ಲಿ ಕಾಡಾನೆಗಳ ಪರೇಡ್, ಜನರಲ್ಲಿ ಆತಂಕ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮಾರ್ಚ್ 29 : ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ನೀರು ಮತ್ತು ಮೇವು ಅರಸಿ ಬಂದ ಕಾಡಾನೆ ಹಿಂಡು ಹುಣಸೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಪೆರೇಡ್ ನಡೆಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿವೆ.

ಹುಣಸೂರಿನ ಹನಗೋಡು ಹೋಬಳಿಯ ಕಚುವಿನಹಳ್ಳಿ ಕೆರೆಯಲ್ಲಿ 8 ಕಾಡಾನೆಗಳು ಬೀಡು ಬಿಟ್ಟಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಆನೆಗಳನ್ನು ಕಂಡ ನೂರಾರು ಗ್ರಾಮಸ್ಥರು ಕೆರೆಯ ಸುತ್ತ-ಮುತ್ತ ಸುತ್ತುವರಿದು ಕೇಕೆ ಹಾಕುತ್ತಾ, ಶಿಳ್ಳೆ ಹೊಡೆಯುತ್ತ ಕಾಡಾನೆಗಳನ್ನು ಕಾಡಿನತ್ತ ಓಡಿಸಲು ಪ್ರಯತ್ನಪಟ್ಟರು. [555 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಅರಣ್ಯ ಇಲಾಖೆ]

elephant

ಇದರಿಂದ ಗಾಬರಿಗೊಂಡ ಆನೆಗಳು ಕೆರೆಯ ಸುತ್ತ ಮುತ್ತ ಅಲ್ಲಿಯೇ ಗಿರಕಿ ಹೊಡೆಯುತ್ತ ಕೆಲ ಸಮಯ ಕಳೆದವು. ಅಷ್ಟರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೆರೆ ಬಳಿಗೆ ಧಾವಿಸಿ ಜನ ಸಮೂಹವನ್ನು ನಿಯಂತ್ರಿಸಿ ಹತ್ತಾರು ಬಾರಿ ಗಾಳಿಯಲ್ಲಿ ಗುಂಡು ಹಾಗೂ ಪಟಾಕಿ ಸಿಡಿಸಿ 2 ಕಿ.ಮೀ.ದೂರದವರೆಗೆ ಆನೆಗಳನ್ನು ಓಡಿಸಲು ಪ್ರಯತ್ನಿಸಿದರು. [ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ]

-
-
-
-
-

ಮಾರ್ಗ ಮಧ್ಯೆ ನೇರಳಕುಪ್ಪೆ ಗ್ರಾಮದ ಎ.ವಿ.ಬಾಲಕೃಷ್ಣರವರ ತೆಂಗಿನತೋಟದಲ್ಲಿ 5 ಹೆಣ್ಣಾನೆ 2 ಮರಿಯಾನೆ ಹಾಗೂ ಒಂದು ಸಲಗ ಸೇರಿದಂತೆ ಒಟ್ಟು 8 ಆನೆಗಳಿದ್ದವು, ಅವು ಮೂರು ಗುಂಪುಗಳಾಗಿ ಚದುರಿದವು. ಸಲಗವೊಂದು ನೇರಳಕುಪ್ಪೆಯ ಜವರಮ್ಮನ ಜಮೀನಿನಲ್ಲಿರುವ ಪಂಪ್‍ಸೆಟ್ ಹಾಗೂ ಮನೆಯನ್ನು ಧ್ವಂಸಗೊಳಿಸಿತು. [ಮೈಸೂರು ಮೃಗಾಲಯದ 'ಟಿಂಬೋ' ಇನ್ನಿಲ್ಲ]

ಆನೆಯೊಂದು ಗಿರಿಜನರ ಬಿ ಹಾಡಿ ಮೂಲಕ ಕಾಡು ಸೇರಿಕೊಂಡರೆ ಹೆಣ್ಣಾನೆಯೊಂದು ಎ.ವಿ.ಬಾಲಕೃಷ್ಣ ಅವರ ತೆಂಗಿನತೋಟದಲ್ಲಿ ಬೀಡು ಬಿಟ್ಟಿತು. ಅಲ್ಲಿದ್ದ ದನದ ಕೊಟ್ಟಿಗೆಯನ್ನು ಧ್ವಂಸಗೊಳಿಸಿ ಆತಂಕ ಸೃಷ್ಠಿಸಿತು.

-
-
-
-
-

ತೆಂಗಿನತೋಟದಲ್ಲಿ ಬೀಡು ಬಿಟ್ಟ ಹೆಣ್ಣಾನೆಯು ಸುಮಾರು 1 ಗಂಟೆ ಕಾಲ ಹೊರ ಬಾರದೆ ಆತಂಕ ಉಂಟು ಮಾಡಿತು. ಈ ಹಿನ್ನಲೆಯಲ್ಲಿ ಎಸಿಎಫ್ ಶ್ರೀಪತಿ ಅವರು ಸಾಕಾನೆಗಳಾದ ಬಲರಾಮ ಹಾಗೂ ಗೋಪಾಲಸ್ವಾಮಿಯನ್ನು ಕರೆತಂದು ತೋಟದಿಂದ ಹೊರ ಹಾಕಿ ನೇರಳಕುಪ್ಪೆ ಸಿದ್ದಯ್ಯನಕೆರೆಗೆ ಸೇರಿಸಿದರು. ಬಳಿಕ ಕಾಡಿನತ್ತ ಅಟ್ಟುವ ಕಾರ್ಯ ನಡೆಯಿತು.

English summary
Residents of several villages in Hunsur taluk, Mysuru district live under fear as elephant herds went on a rampage destroying crops.
Please Wait while comments are loading...