ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನನ್ನು ಗೆಲ್ಲಿಸಿ, ಸರ್ಕಾರದ ಬೆವರಿಳಿಸುತ್ತೇನೆ: ವಾಟಾಳ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್, 23: ನನ್ನನ್ನು ಗೆಲ್ಲಿಸಿ, ನಾನು ಸದಸ್ಯರಿಗೆ 5000 ರೂ ಮಾಸಾಶನ ನೀಡಲು ಹೋರಾಡುತ್ತೇನೆ. ಅಧಿಕಾರದಲ್ಲಿ ಇರುವವರಿಗೆ ಸರಿಯಾಗಿ ಬುದ್ದಿ ಕಲಿಸುತ್ತೇನೆ ಎಂದು ಕನ್ನಡ ಚಳುವಳಿಗಾರ, ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಮೈಸೂರಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಡಿಸೆಂಬರ್ 27ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯದ ಮತನೀಡಿ ನನ್ನನ್ನು ಗೆಲ್ಲಿಸಿದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಸದನದ ಒಳಗೂ ಹಾಗೂ ಹೊರಗೂ ಹೋರಾಟ ಮಾಡುತ್ತೇನೆ. ಜೊತೆಗೆ ಸರ್ಕಾರದ ಬೆವರಿಳಿಸುತ್ತೇನೆ ಎಂದರು. [ಪರಿಷತ್ ಅಖಾಡಕ್ಕಿಳಿದ ವಾಟಾಳ್ ನಾಗರಾಜ್]

Vatal nagaraj

ಕಳೆದ 50 ವರ್ಷಗಳಿಂದಲೂ ಸಕ್ರಿಯ ಹೋರಾಟ ಮಾಡಿಕೊಂಡು ಬಂದಿದ್ದರೂ ಹಲವು ಬಾರಿ ಸೋತು ಗೆದ್ದಿದ್ದೇನೆ. ಒಂದು ವೇಳೆ ರಾಜಕೀಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರೆ ಇಷ್ಟೊತ್ತಿಗೆ ನಾನು ಅಧಿಕಾರದ ಗದ್ದುಗೆ ಏರಿರುತ್ತಿದ್ದೆ.

ಆದರೆ ನನಗೆ ರಾಜಕೀಯ ಬೇಡ. ನಾನು ರಾಜ್ಯದ ಭಾಷೆ, ನೆಲ, ಜಲಕ್ಕಾಗಿ ಹೋರಾಡುತ್ತಿದ್ದೇನೆ. ಮುಂದೆಯೂ ಹೋರಾಟ ಮಾಡುತ್ತೇನೆ ಎಂಬುವುದಾಗಿ ಘೋಷಿಸಿದರು.[ವಿಧಾನ ಪರಿಷತ್ ಚುನಾವಣೆ, ಮತ ಹಾಕಿದ್ರೆ ಗ್ರಾಮಜ್ಯೋತಿ ಪ್ರಶಸ್ತಿ!]

ರಾಜಕೀಯ ಪ್ರಾಮಾಣಿಕತೆ ಹಾಗೂ ಸತ್ವದಿಂದ ಕೂಡಿತ್ತು. ಅಂದಿನ ರಾಜಕಾರಣಿಗಳನ್ನು ಪ್ರತ್ಯಕ್ಷ ದೇವರು ಎನ್ನುತ್ತಿದ್ದರು. ಆದರೆ, ಇಂದಿನ ರಾಜಕಾರಣಿಗಳನ್ನು ದೆವ್ವಗಳು ಎನ್ನುವ ಮಟ್ಟಿಗೆ ಭಯಪಡುವಂತಾಗಿದೆ ಎಂದು ನಗಾಡಿದ ಅವರು ಮತಯಾಚನೆ ಮಾಡಿದರು.

English summary
The president of Kannada Chalavali Vatal Paksha Vatal nagaraj attended legeslative council election press conference meeting in Mysuru on Wednesday, December 23rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X