ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಪ್ರೇಮಿಗಳ ಲವ್ವಿಗೆ ಪೊಲೀಸರ ಸರ್ಪಗಾವಲು

ಕುಕ್ಕರಹಳ್ಳಿ ಕೆರೆಗೆ ಪ್ರೇಮಿಗಳು ಕೂರಲು ಮಾತ್ರ ಬಂದಿರಲಿಲ್ಲ, ಕಾರಂಜಿ ಕೆರೆಗೆ ಪ್ರಣಯಪಕ್ಷಿಗಳು ತೇಲಲು ಮಾತ್ರ ಬಂದಿರಲಿಲ್ಲ. ನಗರದ ಎಲ್ಲೆಲ್ಲೂ ಪ್ರೇಮಿಗಳ ಹಬ್ಬದ್ದೇ ಸಂಭ್ರಮ. ಪೊಲೀಸ್ ಸರ್ಪಗಾವಲು ಇದ್ದರೂ ಪ್ರೇಮಿಗಳ ದಿನ ಯಶಸ್ವಿಯಾಗಿದೆ.

By ಯಶಸ್ವಿನಿ ಎಂ.ಕೆ, ಮೈಸೂರು
|
Google Oneindia Kannada News

ಮೈಸೂರು, ಫೆಬ್ರವರಿ 14 : ಪ್ರೀತಿ ಪಾತ್ರರನ್ನು ಒಲಿಸಿಕೊಳ್ಳೋದಿಕ್ಕೆ ನಾನಾ ವಿಧದ ಕಸರತ್ತುಗಳನ್ನು ಮಾಡುತ್ತಲೇ ಇರಬೇಕು. ಪ್ರೀತಿಸುವವರ ಮನಸು ಯಾವತ್ತೂ ನೋಯಿಸಬಾರದು. ಯಾಕಂದ್ರೆ ಇಂದು ಪ್ರೇಮಿಗಳ ದಿನ! ಮೈಸೂರಲ್ಲೆಲ್ಲಾ ಉಲಿಯುವ ಪ್ರೇಮಿಗಳ ಚಿಲಿಪಿಲಿ!

ಉಡುಗೊರೆಗಳನ್ನು ನೀಡದೆ ಹೋದರೆ ಅವನು/ಅವಳು ಎಲ್ಲಿ ಮುನಿಸಿಕೊಂಡು ದೂರಾಗಿ ಬಿಡುತ್ತಾರೋ ಎಂಬ ಆತಂಕ ಹಲವರದ್ದಾದರೆ, ಕದ್ದುಮುಚ್ಚಿ ಪಾರ್ಕಲ್ಲಿ ಕುಳಿತು ಹೊಂಗನಸುಗಳನ್ನು ಹೆಣೆಯುವ ಜೋಡಿಗಳು, ಪ್ರೇಮಿಸುತ್ತಾ ಕುತ್ತಾಗ ಪೊಲೀಸರ ಕೆಂಗಣ್ಣಿಗೆಲ್ಲಿ ಬೀಳುತ್ತೇವೋ ಎಂಬ ಆತಂಕ ಕೆಲವರದ್ದು. [ಮೈಸೂರು ವರ, ಚೀನಾ ವಧುವಿನ ಪ್ರೇಮ್ ಕಹಾನಿ]

ಎಲ್ಲಿ ನೋಡಿದರಲ್ಲಿ ಪ್ರೇಮಿಗಳ ಸದ್ದು..

ಎಲ್ಲಿ ನೋಡಿದರಲ್ಲಿ ಪ್ರೇಮಿಗಳ ಸದ್ದು..

ಮೈಸೂರಿನ ಪ್ರಮುಖ ಮಾಲ್ ಗಳು, ಪಾರ್ಕ್ ಗಳು ಕಾಫಿ ಪಾರ್ಲರ್ ಗಳು ಮಂಗಳವಾರ ಪ್ರೇಮಿಗಳ ದಿನವಾದ್ದರಿಂದ ಗಿಜಿಗುಡುತ್ತಿತ್ತು. ಎತ್ತ ಕಣ್ಣು ಹಾಯಿಸಿದರೂ ಕೈಕೈ ಹಿಡಿದು ನಡೆಯುವ ಜೋಡಿಗಳು ಕಾಣಸಿಗುತ್ತಿದ್ದರು. ಹಲವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡುವುದಕ್ಕೋಸ್ಕರ್ ಗಿಫ್ಟ್ ಖರೀದಿಸಲು ಗಿಫ್ಟ್ ಸೆಂಟರ್ ಗಳಲ್ಲಿ ಮುಗಿ ಬಿದ್ದಿದ್ದರು.

ಖಾಕಿ ಕಣ್ಗಾವಲು…

ಖಾಕಿ ಕಣ್ಗಾವಲು…

ಆದರೆ ಪೊಲೀಸರು ತಮ್ಮ ಕರ್ತವ್ಯ ತಾವು ನಿರ್ವಹಿಸಬೇಕೆಂದು ಪಣ ತೊಟ್ಟು ಲವ್ವಿಗೆ ಪ್ರಶಸ್ತವಾಗಿರುವ ಕುಕ್ಕರಳ್ಳಿ ಕೆರೆ, ಕಾರಂಜಿಕೆರೆ, ಮಹಿಳಾ ಕಾಲೇಜು, ಪಾರ್ಕ್ ಗಳ ಎದುರು ಸರ್ಪಗಾವಲನ್ನು ಹಾಕಿ ಗಸ್ತು ತಿರುಗುತ್ತಿದ್ದರು. ಖುದ್ದು ಡಿಸಿಪಿಗಳೇ ಗಸ್ತು ತಿರುಗುತ್ತಿರುವುದು ಕಂಡು ಬಂತು. ಅಪರಿಚಿತರ ಜೊತೆ ಮಾತನಾಡಬೇಡಿ, ನಿಮ್ಮ ಸ್ನೇಹಿತರೊಂದಿಗೆ ಮಾತ್ರ ಮಾತನಾಡಿ ಎಂಬ ಎಚ್ಚರಿಕೆಯ ಮಾತುಗಳನ್ನು ಕಾಲೇಜು ವಿದ್ಯಾರ್ಥಿನಿಯರಿಗೆ ಪೊಲೀಸರು ಹೇಳುತ್ತಿದ್ದರು.

ಮೊಬೈಲ್ ಶಾಪ್ ಗಳಲ್ಲಂತೂ ಬಂಪರ್ ಆಫರ್..

ಮೊಬೈಲ್ ಶಾಪ್ ಗಳಲ್ಲಂತೂ ಬಂಪರ್ ಆಫರ್..

ಗಿಫ್ಟ್ ಕೊಡುವ ಟ್ರೆಂಡ್ ಗಳಲ್ಲಿ ಹೊಸ ಸೇರ್ಪಡೆಯಾಗಿ ಮೊಬೈಲ್ಗಳನ್ನು ಆಯ್ಕೆ ಮಾಡುವುದು ಈಗ ಸಾಮಾನ್ಯ. ಹಾಗಾಗಿ ನಗರದ ಗಿಜಿಗುಡುವ ರೋಡ್ ಎಂದೇ ಖ್ಯಾತಿಯಾಗಿರುವ ಅರಸು ರಸ್ತೆಯಲ್ಲಿ ಮೊಬೈಲ್ ಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಹಾಗೂ ಶೇ.0ರಷ್ಟು ಬಡ್ಡಿ ದರದಲ್ಲಿ ನೀಡುವ ಆಫರ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿತ್ತು. ಇದಷ್ಟೇ ಅಲ್ಲ ಇಂದು ಕೆಂಪು ಬಣ್ಣದ ಬಟ್ಟೆಗಳಿಗೆ ಭಾರೀ ಬೇಡಿಕೆ. ಹಾಗಾಗಿ ಅನೇಕ ಬಟ್ಟೆ ಅಂಗಡಿಗಳಲ್ಲಿ ರೆಡ್ ಡ್ರೆಸ್ಗಳಿಗೆ ಶೇ.50ರಷ್ಟು ಕಡಿತಗೊಳಿಸಲಾಗಿತ್ತು.

ಎಲ್ಲೆಲ್ಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಪ್ರೇಮಿಗಳು..

ಎಲ್ಲೆಲ್ಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಪ್ರೇಮಿಗಳು..

ಇನ್ನು ಮಾಲ್ ಆಫ್ ಮೈಸೂರು ಹಾಗೂ ಅನೇಕ ಶಾಪಿಂಗ್ ಮಾಲ್ ಗಳಲ್ಲಿ ಸೆಲ್ಫಿಗಳದ್ದೇ ಕಾರುಬಾರು ಜೋರಾಗಿತ್ತು. ತಮ್ಮ ಪ್ರೇಮಿಗಳಿಗೆ ಗಿಫ್ಟ್ ಹಾಗೂ ಚಾಕೋಲೆಟ್, ಕೇಕ್ ನೀಡಿ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗೆ ಮುಂದಾಗಿದ್ದರು.

ವೃದ್ಧರ ಪಾದತೊಳೆದು ಪೂಜೆ!

ವೃದ್ಧರ ಪಾದತೊಳೆದು ಪೂಜೆ!

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಮೈಸೂರಿನ ವಿದ್ಯಾರಣ್ಯಪುರಂ ಸೂಯೇಜ್ ಫಾರಂ ರಸ್ತೆಯಲ್ಲಿರುವ ಭಾರತೀ ವೃದ್ಧ ಸೇವಾಶ್ರಮದಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ಯುವಕ ಯುವತಿಯರು ಪಾದಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿದರು. ಕೆ.ಎಂ.ಪ್ರವೀಣ್ ಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವೃದ್ಧರ ಪಾದತೊಳೆದು ಪೂಜೆ ನೆರವೇರಿಸಲಾಯಿತು

ಒಟ್ಟಿನಲ್ಲಿ ಪ್ರೇಮಿಗಳ ದಿನದಂದು ಮೈಸೂರು ಬಣ್ಣಬಣ್ಣದ ಕನಸುಗಳನ್ನು ಹೊತ್ತ ಪೋರ-ಪೋರಿಯರ ಕಲರವದ ಬೀಡಾಗಿದ್ದಂತೂ ಸುಳ್ಳಲ್ಲ.

ಫೋಟೋ ಕೃಪೆ- ನಂದನ್ .ಎ

English summary
Valentiens day celebrated in Mysuru under the supervision of police. Lovers were seen everywhere buying greeting cards, mobiles. Kukkarahalli lake, Karangi lakes were abuzz with love birds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X