ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗರೇ ಇನ್ನು ವಿವಿಯಲ್ಲೂ ಸಕಾಲ ಸೇವೆ ಪಡೆಯಿರಿ

By Kiran B Hegde
|
Google Oneindia Kannada News

ಮೈಸೂರು, ಫೆ. 12: ಸರ್ಕಾರಿ ಸೇವೆ ಕುರಿತು ಹಲವರು ಮಾಹಿತಿ ಕೊರತೆ ಎದುರಿಸುತ್ತಿದ್ದಾರೆ. ಅವರಿಗಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಕಾಲ ಸೇವೆ ಆರಂಭಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಸ್‌. ರಂಗಪ್ಪ ಹೇಳಿದರು.

ವಿಶ್ವವಿದ್ಯಾಲಯದ ಕ್ರಾಫಡ್ ಭವನದಲ್ಲಿ ಬುಧವಾರ ಸಕಾಲ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ಶೈಕ್ಷಣಿಕ, ಪರೀಕ್ಷಾಂಗ ಹಾಗೂ ಹಣಕಾಸು ವಿಭಾಗಗಳಲ್ಲಿ ಸಕಾಲ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದರು. [ಸಕಾಲ ಸೇವೆ ಆನ್ ಲೈನ್]

mysuru

ಕಚೇರಿಯ ಸಿಬ್ಬಂದಿ ಅಥವಾ ಅಧಿಕಾರಿಗಳು ನಿಗದಿಪಡಿಸಿದ ಗುರಿ ತಲುಪುವಲ್ಲಿ ವಿಫಲರಾದರೆ ಪ್ರತಿ ಅರ್ಜಿಗೆ ದಿನಕ್ಕೆ 20 ರು.ಗಳಂತೆ ದಂಡ ವಿಧಿಸಲಾಗುವುದು. ಈ ಮೊತ್ತವನ್ನೂ 500 ರು. ವರೆಗೂ ಹೆಚ್ಚಿಸಲು ಅವಕಾಶವಿದೆ. ದಂಡದ ಮೊತ್ತವನ್ನು ಉದ್ಯೋಗಿಯ ಸಂಬಳದಲ್ಲಿ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. [150 ಉಪನ್ಯಾಸಕರ ನೇಮಕ]

ಸಕಾಲ ಸೇವೆಯಿಂದ ವಿಶ್ವವಿದ್ಯಾಯದ ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಸಂಸ್ಕೃತಿ ಸುಧಾರಿಸುತ್ತದೆ. ಕಚೇರಿಯಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. [ಮೈಸೂರು ವಿವಿಗೆ ಜಪಾನ್ ವಿವಿ ಜೋಡಿ]

ವಿವಿ ಕುಲಸಚಿವ ಪ್ರೊ. ಸಿ. ಬಸವರಾಜು, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ. ಶ್ರೀಜಯ ದೇವರಾಜ ಅರಸು, ಹಣಕಾಸು ಅಧಿಕಾರಿ ಪೊ.ಬಿ.ಮಹದೇವಪ್ಪ, ಪಿಎಂಇಬಿ ನಿರ್ದೇಶಕ ಪೊ›.ಎಸ್‌.ರವಿ ಹಾಗೂ ಸಕಾಲ ನೋಡೆಲ್‌ ಅಧಿಕಾರಿ ಭಟ್‌ ಸತೀಶ್‌ ಶಂಕರ್‌ ಹಾಜರಿದ್ದರು.

English summary
Sakala services of state government has been launched in University of Mysuru. Prof. K.S. Rangappa, Vice- Chancellor of University inaugurated Sakala service office at Crawford Hall building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X