ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.25ರಂದು ಮೈಸೂರಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 24 : ಮೈಸೂರು ಜನತೆ ಒತ್ತಾಸೆ ಹಾಗೂ ಬಹುದಿನಗಳ ಬೇಡಿಕೆಯಾಗಿದ್ದ ಪಾಸ್ ಪೋರ್ಟ್ ಸೇವಾ ಕೇಂದ್ರ ಜನವರಿ 25ರಂದು ಉದ್ಘಾಟನೆಗೊಳ್ಳಲಿದೆ

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.[ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

ಮೇಟಗಳ್ಳಿಯ ಪೊಲೀಸ್ ಠಾಣೆ ಬಳಿ ಇರುವ ಅಂಚೆ ಕಚೇರಿಯ ಅರ್ಧ ಭಾಗದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರವು ಕಾರ್ಯರಂಭಗೊಳ್ಳಲಿದೆ ಎಂದು ಹೇಳಿದರು. [ಪಾಸ್ ಪೋರ್ಟ್ ಗಾಗಿ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ವ್ಯವಸ್ಥೆ]

Union Minister Ananth kumar to inaugurate Passport Seva Kendra in Mysuru on January 25

ಮೊದಲ ಹಂತದಲ್ಲಿ ವಲಯ ಕೇಂದ್ರದ ಅಧಿಕಾರಿಗಳೇ ನಿರ್ವಹಿಸಲಿದ್ದು ಸ್ಥಳೀಯ ಅಧಿಕಾರಿಗಳಿಗೆ ತರಬೇತಿ ನೀಡುವರು. ಮೊದಲ 2 ವಾರಗಳಿಗೆ ಪ್ರಯೋಗಾತ್ಮಕವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗುವ ಕಚೇರಿ ನಂತರ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದು ಎಂದು ತಿಳಿಸಿದರು.

ಜಿಲ್ಲೆಯ ಜನರು ವಿದೇಶಕ್ಕೆ ತೆರಳಬೇಕಿದ್ದರೆ ಪಾಸ್ ಪೋರ್ಟ್ ಪಡೆಯಲು ಬೆಂಗಳೂರಿಗೆ ಅಲೆಯಬೇಕಾಗಿತ್ತು. ಈ ಸಮಸ್ಯೆಯ ಗಂಭೀರತೆ ಕುರಿತು ಸಂಸತ್‍ ನಲ್ಲಿ ಪ್ರಸ್ತಾಪಿಸಿದ್ದೆ. ಹಾಗೂ ಸಚಿವ ಅನಂತ ಕುಮಾರ್ ಮೇಲೆ ಒತ್ತಡ ತರಲಾಗಿತ್ತು.

ಅನಂತ ಕುಮಾರ್ ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ ಅವರೊಂದಿಗೆ ಪತ್ರದ ಮುಖಾಂತರ ಸಮಾಲೋಚಿಸಿ ಪಾಸ್ ಪೋರ್ಟ್ ಕಚೇರಿಗೆ ಒತ್ತಾಯಿಸಿದ್ದರು ಎಂದರು.

English summary
A long-standing demand of the people of Mysuru and surrounding districts is at last being met. A Passport Seva Kendra is being set up at the post office in Metagalli, Union Minister Ananth kumar will be inaugurate on January 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X