ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಮೈಸೂರು ವಿವಿ ಶತಮಾನೋತ್ಸವ

By Vanitha
|
Google Oneindia Kannada News

ಮೈಸೂರು, ಜುಲೈ, 24 : ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯ 100 ನೇ ವರ್ಷದ ಸಂಭ್ರಮಾಚರಣೆಗೆ ಭರದ ಸಿದ್ದತೆಯಲ್ಲಿದೆ. ಉಡುಗೊರೆಯಿಂದ ಹಿಡಿದು ಬರುವ ಅತಿಥಿಗಳಿಗೆ ಯಾವುದೇ ಕುಂದುಕೊರತೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದೆ.

ಶತಮಾನೋತ್ಸವ ಸಮಾರಂಭ ವಿವಿಯ ಬಯಲು ರಂಗ ಮಂದಿರದಲ್ಲಿ ಜುಲೈ 27ರ ಮಧ್ಯಾಹ್ನ 3ಕ್ಕೆ ನಡೆಯಲಿದೆ. ಈ ಸಮಾರಂಭಕ್ಕೆ ಉದ್ಘಾಟರಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಲಿದ್ದು, ಕುಲಾಧಿಪತಿ ಹಾಗೂ ರಾಜ್ಯಪಾಲ ವಾಜುಬಾಯಿ ರೂಢವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ. [ಆಷಾಢ ಶುಕ್ರವಾರ, ಚಾಮುಂಡಿ ಬೆಟ್ಟಕ್ಕೆ ಹೋಗಲು]

The president is the chief guest of the Mysore University centenary celebrations

ಉದ್ಘಾಟಕರಾದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಸಿದ್ದ ಎಚ್ಎಂಟಿ ಸಂಸ್ಥೆಯಿಂದ ತಯಾರಾದ ರಿಸ್ಟ್ ವಾಚ್ ಉಡುಗೊರೆಯಾಗಿ ನೀಡಲು ಸಮಿತಿ ನಿರ್ಧರಿಸಿದ್ದು, ಈ ವಾಚ್ ನಲ್ಲಿ ನಾಲ್ವಡಿ ನರಸಿಂಹರಾಜ್ ಒಡೆಯರ್ ಅವರ ಶ್ರೀಗಂಧದ ಕೆತ್ತನೆ ಮತ್ತು ವಾಚಿನ ಬೆಲ್ಟ್‌ನಲ್ಲಿ ವಿಶ್ವವಿದ್ಯಾನಿಲಯದ logo ಇರುವುದು ಇದರ ವಿಶೇಷತೆಯಾಗಿದೆ. ಜೊತೆಗೆ 16 ಇಂಚು ಉದ್ದದ ಒಡೆಯರ್ ಅವರ ಪುತ್ಥಳಿ ಶ್ರೀಗಂಧದಿಂದ ಮಾಡಿದುದಾಗಿದೆ.[ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳೆಲ್ಲ ಒಂದಾಗಿ ಬನ್ನಿ]

1916ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯದ ಈ ಸಂತಸದ ಕ್ಷನಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನ ಮಂತ್ರಿ ದೇವೇಗೌಡ, ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ವಿ. ಶ್ರೀನಿವಾಸ್ ಪ್ರಸಾದ್ ಮುಂತಾದ ಅತಿಥಿಗಳು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಈಗಾಗಲೇ ಕಾರ್ಯನಿರ್ವಹಿಸಿದ ಹಲವಾರು ಕುಲಪತಿಗಳಿಗೆ ಸನ್ಮಾನ ನೆರವೇರಲಿದ್ದು, ಇತಿಹಾಸ ತಜ್ಞ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ ಷೇಕ್ ಅಲಿ ರಚಿಸಿರುವ 'ಎರಾ ಆಫ್ ಎನ್‌ಲೈಟನ್ಮೆಂಟ್ (ಮೈಸೂರು ವಿವಿಯ ನೂರು ವರ್ಷಗಳ ಇತಿಹಾಸ) ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಲಿದ್ದಾರೆ.

English summary
President Pranab Mukherjee launches the centenary celebrations of the University of Mysore on July 27.This celebration at the Open Air Theatre at Manasagangotri at 3 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X