ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಕೋರ್ಟ್ ಸ್ಫೋಟದ ರೂವಾರಿ ಸಾಫ್ಟ್ ವೇರ್ ಉದ್ಯೋಗಿ!

ಮೈಸೂರು ಸೇರಿ 5 ಕೋರ್ಟ್ ಸ್ಫೋಟಕ್ಕೆ ಕಾರಣವಾದ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಹೇಳಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು/ಮೈಸೂರು, ಮೇ 26: ಮೈಸೂರು ಸೇರಿ 5 ಕೋರ್ಟ್ ಸ್ಫೋಟಕ್ಕೆ ಕಾರಣವಾದ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮುಖ್ಯ ರೂವಾರಿ ಸಾಫ್ಟ್ ವೇರ್ ಉದ್ಯೋಗಿ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಹೇಳಿದ್ದಾರೆ.

ಮೈಸೂರಿನ ನ್ಯಾಯಾಲಯದ ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ಚಾರ್ಜ್ ಶೀಟ್ ನಲ್ಲಿ ವಿವರಣೆ ನೀಡಲಾಗಿದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಅಲ್ ಉಮ್ಮಾ ಅಥವಾ ಬೇಸ್‌ ಮೂಮೆಂಟ್ ಸಂಘಟನೆಯ ಸದಸ್ಯರೇ ಈ ಎಲ್ಲಾ ಸ್ಫೋಟ ಪ್ರಕರಣದ ರೂವಾರಿಗಳು ಎಂದು ಚಾರ್ಜ್ ಶೀಟ್ ನಲ್ಲಿ ಹೆಸರಿಸಲಾಗಿದೆ.[ಮೈಸೂರು ಕೋರ್ಟ್ ಸ್ಫೋಟ ಪ್ರಕರಣ, ಅಲ್ ಉಮ್ಮಾ ವಿರುದ್ಧ ಚಾರ್ಜ್ ಶೀಟ್!]

ಉಗ್ರರ ಜಾಡು : ಮೈಸೂರು ಕೋರ್ಟ್ ಸ್ಫೋಟ ಪ್ರಕರಣವನ್ನು ಕೈಗೆತ್ತಿಕೊಂಡ ಎನ್ಐಎ ತಂಡ,ಮೊದಲಿಗೆ ಮಧುರೈನಲ್ಲಿ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿತು. ಕಳೆದ ವರ್ಷ ನವೆಂಬರ್ ನಲ್ಲಿ ಮೇಲೂರಿನಲ್ಲಿ ಇನ್ನಿಬ್ಬರನ್ನು ಬಂಧಿಸಲಾಯಿತು. ಎಲ್ಲರೂ ಬೇಸ್ ಮೂವ್ಮೆಂಟ್ ನ ಸದಸ್ಯರಾಗಿದ್ದು, ಎಲ್ಲಾ ಐದು ಕೋರ್ಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಕೈವಾಡ ಇರುವುದು ದೃಢಪಟ್ಟಿದೆ.[ಮೈಸೂರು: ಕೋರ್ಟಿನ ಬಳಿ 'ಕುಕ್ಕರ್ ಬಾಂಬ್' ಇಟ್ಟವರು ಯಾರು?]

ಐದು ಕಡೆಗಳಲ್ಲಿ ಸ್ಫೋಟ

ಐದು ಕಡೆಗಳಲ್ಲಿ ಸ್ಫೋಟ

* ಆಂಧ್ರಪ್ರದೇಶದ ಚಿತ್ತೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡದ ವಾಹನ ನಿಲುಗಡೆ ಪ್ರದೇಶದಲ್ಲಿ 04/04/2016ರಲ್ಲಿ ಸ್ಫೋಟ.
* ಕೇರಳದ ಕೊಲ್ಲಂನ ಸಿಜೆಎಂ ಕೋರ್ಟ್ ಕಾಂಪ್ಲೆಕ್ಸ್ ನ ಕಾರು ಪಾರ್ಕಿಂಗ್ ಸ್ಥಳದಲ್ಲಿ 15/06/2016ರಲ್ಲಿ ಸ್ಪೋಟ.
* ಕರ್ನಾಟಕದ ಮೈಸೂರಿನಲ್ಲಿ 01/08/2016ರಲ್ಲಿ ಸ್ಫೋಟ(ಘಟನಾ ಸ್ಥಳದ ಚಿತ್ರ)
* ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 12/09/2016ರಲ್ಲಿ
* ಕೇರಳದ ಮಲಪ್ಪುರಂನ ನ್ಯಾಯಾಲಯದ ಶೌಚಾಲಯದ ಬಳಿ 1/11/2016ರಲ್ಲಿ ಸ್ಪೋಟ

ಆರೋಪಿಗಳ ವಿವರ

ಆರೋಪಿಗಳ ವಿವರ

*ಅಬ್ಬಾಸ್ ಅಲಿ: ಮಧುರೈ ನಿವಾಸಿ 27 ವರ್ಷ ವಯಸ್ಸು, ದರೂಲ್ ಇಲಮ್ ಹೆಸರಿನ ಲೈಬ್ರರಿ ನಡೆಸುತ್ತಿದ್ದ, 8ನೇ ತರಗತಿ ತನಕ ವಿದ್ಯಾಭ್ಯಾಸ.
* ಸುಲೈಮಾನ್, ಚೆನ್ನೈ ನಿವಾಸಿ, 23 ವರ್ಷ ವಯಸ್ಸು, ಸಾಫ್ಟ್ ವೇರ್ ಸಂಸ್ಥೆಯ ಉದ್ಯೋಗಿ, ಈ ಗ್ಯಾಂಗಿನ ಲೀಡರ್.
* ಸಮ್ಸುಮ್ ಕರೀಂ ರಾಜಾ, ಮಧುರೈ ನಿವಾಸಿ, ಬಿಕಾಂ ಪದವೀಧರ, ಚಿಕನ್ ಸ್ಟಾಲ್ ನಡೆಸುತ್ತಿದ್ದ.
* ಷಂಶುದ್ದೀನ್ ಹಾಗೂ ಮೊಹಮ್ಮದ್ ಅಯೂಬ್, ಇಬ್ಬರೂ ಮಧುರೈ ನಿವಾಸಿಗಳು, ಇಬ್ಬರಿಗೂ 25ರ ಹರೆಯ

ಮಲಯಾಳಂ ಪತ್ರಿಕೆ ಸುಳಿವು

ಮಲಯಾಳಂ ಪತ್ರಿಕೆ ಸುಳಿವು

ಸ್ಫೋಟಗೊಂಡ ಜಾಗದಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು ಮಲಯಾಳಂ ದಿನಪತ್ರಿಕೆಯ ಚೂರುಗಳನ್ನು ವಶಕ್ಕೆ ಪಡೆದಿದ್ದರು.ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುವ ಈ ಸಂಘಟನೆಯ ಸದಸ್ಯರು ಬೇಸ್‌ ಮೂಮೆಂಟ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡು, ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಶಂಕೆ ಬಲಗೊಂಡ ಬಳಿಕ ತನಿಖೆಯನ್ನು ಎನ್ಐಎ ತಂಡ ತೀವ್ರಗೊಳಿಸಿತ್ತು.

ಕುಕ್ಕರ್ ಬಾಂಬ್?

ಕುಕ್ಕರ್ ಬಾಂಬ್?

ಕೋರ್ಟ್ ಆವರಣದಲ್ಲಿ 3 ಬ್ಯಾಟರಿ ಸೆಲ್ ಗಳು ಪತ್ತೆಯಾಗಿತ್ತು.ಘಟನಾ ಸ್ಥಳದಲ್ಲಿ ಒಂದು ಸಿಮ್ ಕಾರ್ಡ್ ಹಾಗೂ ಗನ್ ಪೌಡರ್ ಸಿಕ್ಕಿತ್ತು. ಅಮೋನಿಯಂ ನೈಟ್ರೇಟ್ ಬಳಸಿರುವ ಬಗ್ಗೆ ಶಂಕೆ ವ್ಯಕ್ತವಾದರೂ ಖಚಿತವಾಗಿರಲಿಲ್ಲ.ಅಲ್ಲದೆ, ಮೈಸೂರಿನಂತೆ ಉಳಿದ ಪ್ರದೇಶಗಳಲ್ಲೂ ಕೋರ್ಟ್ ಆವರಣದಿಂದ ಹೊರಗಡೆ ಶೌಚಾಲಯ ಅಥವಾ ವಾಹನ ನಿಲುಗಡೆ ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಿದ್ದು ಇದು ಅಲ್ ಉಮ್ಮಾ ಸಂಘಟನೆ ಕೃತ್ಯ ಎಂಬ ಸಾಬೀತುಪಡಿಸಲು ಸಾಧ್ಯವಾಯಿತು.

English summary
Chargesheet details of Mysuru court complex blast case as follows: The NIA had initially arrested three persons from Madurai on suspicion of them being involved in at least five court complex blast cases. Two more were arrested by the agency in Meloor in November last year. All accused are suspected to be part of Base Movement outfit. With the arrests, the NIA had claimed to have cracked five court blast cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X