ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಘ್ನಗಳ ನಡುವೆ ನಂಜನಗೂಡಿನ ರಥೋತ್ಸವ ಸಂಪನ್ನ

By Mahesh
|
Google Oneindia Kannada News

ನಂಜನಗೂಡು, ಏ.1: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಐತಿಹಾಸಿಕ ನಂಜನಗೂಡಿನಲ್ಲಿ ಸೋಮವಾರ ಮೀನ ಲಗ್ನದಲ್ಲಿ ಪಂಚರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಅದರೆ, ಆತಂಕ, ವಿಘ್ನಗಳ ನಡುವೆ ಸಾಗಿದ ಭಾರಿ ಗಾತ್ರದ ರಥಗಳನ್ನು ಎಳೆದ ಭಕ್ತರು ಪುನೀತರಾದರು. ಕಳೆದ ವರ್ಷದಂತೆ ಈ ವರ್ಷ ಕೂಡಾ ರಥದ ಚಕ್ರ ಮಾರ್ಗಮಧ್ಯೆ ಸಿಲುಕಿಕೊಂಡು ಆತಂಕ ಮೂಡಿಸಿತ್ತು. ಆದರೆ, ನಂಜುಂದನ ಕೃಪೆಯಿಂದ ಎಲ್ಲವೂ ಸಾಂಗವಾಗಿ ನೆರವೇರಿತು.

ಬೆಳಗ್ಗೆ 6.30 ರಿಂದ 6.40 ಮಧ್ಯೆ ಶುಭ ಲಗ್ನದಲ್ಲಿ ಪ್ರಧಾನ ಅರ್ಚಕ ಜೆ ನಾಗಚಂದ್ರ ದೀಕ್ಷಿತ್ ಅವರು ಪೂಜಾ ವಿಧಿ ವಿಧಾನವನ್ನು ಪೂರೈಸಿದ ನಂತರ ಮೊದಲಿಗೆ ಗಣಪತಿ, ಶ್ರೀಕಂಠೇಶ್ವರ (ಗೌತಮ ರಥ), ಚಂಡಿಕೇಶ್ವರ, ಸುಬ್ರಹ್ಮಣ್ಯ ಹಾಗೂ ಪಾರ್ವತಮ್ಮನ ರಥ ಹೀಗೆ ಪಂಚದೇವರ ರಥಗಳನ್ನು ರಾಜಬೀದಿಗೆ ಭಕ್ತಾದಿಗಳು ಎಳೆದು ತಂದರು. ಭಕ್ತ ಸಮೂಹ ತಾವು ತಂದಿದ್ದ ಕಾಣಿಕೆ, ಹರಕೆಗಳನ್ನು ತೀರಿಸಿಕೊಂಡರು.

ಬೆಂಗಳೂರಿನಂತೆ ಮೈಸೂರಿನಲ್ಲೂ ಮಂಗಳವಾರ ರಾತ್ರಿ ಮಳೆ ಬಿದ್ದ ಕಾರಣ ಬಿಸಿಲ ಬೇಗೆಯಲ್ಲಿ ಬೆಂದಿದ್ದ ಕಪಿಲ ನದಿ ತೀರದನಂಜನಗೂಡು ಬುಧವಾರ ಕೊಂಚ ತಂಪಾಗಿತ್ತು. [ನಂಜನಗೂಡು ಹಲ್ಲುಪುಡಿಗೆ 100!]

Tension prevails during Panchamaha Rathotsava Nanjangud Mysuru

ಬೃಹತ್ ರಥ: ಸುಮಾರು 90 ಅಡಿ ಎತ್ತರ ಹಾಗೂ 120 ಟನ್ ತೂಕದ ಶ್ರೀಕಂಠೇಶ್ವರ ರಥ ಮಂಟಪ ವೃತ್ತದ ಬಳಿ ಬರುವಾಗ ಅದಕ್ಕೆ ಕಟ್ಟಿದ್ದ ಹಗ್ಗ ಕಿತ್ತು ಬಂತು. ಪ್ರತಿ ಬಾರಿಯಂತೆ ಈ ಬಾರಿ ವಿಶೇಷವಾಗಿ ತಮಿಳುನಾಡಿನಿಂದಲೇ ಭಾರೀ ಹಗ್ಗವನ್ನು ತಯಾರಿಸಿ ತಂದು ರಥಕ್ಕೆ ಕಟ್ಟಲಾಗಿತ್ತು. ಆದರೂ ಸುಮಾರು 25 ರಿಂದ 30 ಸಾವಿರ ಜನ ಅದನ್ನು ಹಿಡಿದು ಎಳೆಯುವಾಗ ರಥಕ್ಕೆ ಅಳವಡಿಸಿರುವ ಕೊಂಡಿಯೇ ಕಳಚಿಕೊಂಡಿತು. [ನಂಜನಗೂಡಿನ ಕಲಾವಿದನ ಬದುಕು ಬವಣೆ]

ಸಮಯ ಪ್ರಜ್ಞೆ ಮೆರೆದ ದೇವಾಲಯದ ಆಡಳಿತ ಮಂಡಳಿ ಸದಸ್ಯರು ರೈಲ್ವೆ ಇಲಾಖೆಯ ಕ್ರೇನ್ ತಂದು ಕುಸಿಯುತ್ತಿದ್ದ ರಥವನ್ನು ಸರಿಯಾಗಿ ಕೂರಿಸಿದ್ದರಿಂದ ಭಕ್ತರಲ್ಲಿ ಉಂಟಾದ ಆತಂಕ ನಿವಾರಣೆಯಾಯಿತು. ಸುಮಾರು ಒಂದೂವರೆ ಗಂಟೆಗಳ ರಥೋತ್ಸವಕ್ಕೆ ಅಡ್ಡಿ ಉಂಟಾಗಿತ್ತು.

 Tension prevails during Panchamaha Rathotsava Nanjangud Mysuru

ಕಳೆದ ವರ್ಷ ವಿಜಯ ಬ್ಯಾಂಕ್ ಬಳಿ ಬರುವಷ್ಟರಲ್ಲಿ ರಥದ ಒಂದು ಚಕ್ರ ರಸ್ತೆಯಲ್ಲಿ ಹೂತು ಹೋಗಿತ್ತು. ಆದರೆ, ಪ್ರತಿ ವರ್ಷ ಇದೇ ರೀತಿ ಸಮಸ್ಯೆ ಎದುರಾಗುತ್ತಿದ್ದು, ಭಕ್ತರಲ್ಲಿ ಆತಂಕ ಮೂಡುತ್ತಿದೆ. ಅದರೆ, ಇದು ರಸ್ತೆ ದುರಸ್ತಿ ಕಾರ್ಯದ ಸಮಸ್ಯೆಯೇ ಹೊರತೂ ಬೇರೆ ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅರ್ಚಕ ನಾಗಚಂದ್ರ ದೀಕ್ಷಿತ್ ಹೇಳಿದ್ದಾರೆ. [ನಂಜನಗೂಡು : ಅಸೆಂಬ್ಲಿ ಕ್ಷೇತ್ರ ಪರಿಚಯ]

ಪಟ್ಟಣದಲ್ಲಿ ಅನೇಕ ಸಂಘ-ಸಂಸ್ಥೆಗಳು, ದೇಗುಲದ ವತಿಯಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಕುಟುಂಬ ಸಮೇತ ಆಗಮಿಸಿ 'ಹಕೀಂ ನಂಜುಂಡ' ನ ದರ್ಶನ ಪಡೆದುಕೊಂಡರು. ಪೊಲೀಸ್ ವರಿಷ್ಠಾಧಿಕಾರಿ ಅಭಿನವ್, ಪುರಸಭೆ ಅಧ್ಯಕ್ಷೆ ಮೀನಾಕ್ಷಿ, ದೇವಾಲಯದ ನಿರ್ವಹಣಾಧಿಕಾರಿ ರೂಪಾ ಮುಂತಾದವರು ಉಪಸ್ಥಿತರಿದ್ದರು.

English summary
Tension prevailed around Srikanteshwara temple in Nanjangud, which is also known as Dakshina Kashi, this morning as the 90 ft. tall 120 -tonne Gowthama Ratha, the chariot carrying the idol of Lord Srikanteshwara, the presiding deity, got stuck during the closing stages of the annual Rathotsava held today(Apr.1).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X