ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಧ್ಯಾತ್ಮಿಕ ಚಿಂತನೆಯಿಂದ ಪುನರುತ್ಥಾನ ಸಾಧ್ಯ: ಎಚ್.ಕೆ. ಪಾಟೀಲ್

By ಮೈಸೂರು ಪ್ರತಿನಿಧಿ
|
Google Oneindia Kannada News

ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಭಾರತದ ಪುನರುತ್ಥಾನ ಸಾಧ್ಯ ಎಂದು ಗ್ರಾಮಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಶನಿವಾರ ವೇದಾಂತ ಭಾರತೀ ದಶಮ ಸೌಂದರ್ಯಲಹರೀ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸೌಂದರ್ಯಲಹರೀ ಪಾರಾಯಣದ ಮೂಲಕ ಆಧ್ಯಾತ್ಮದಲ್ಲಿ ಆಸಕ್ತಿ ಹುಟ್ಟಿಸುವ, ಆತ್ಮವಿಶ್ವಾಸ ವೃದ್ಧಿಸುವ, ಮನಸ್ಸುಗಳಿಗೆ ಚೈತನ್ಯ ತುಂಬುವ ಮಹಾಯಜ್ಞವನ್ನು ಶಂಕರಭಾರತೀ ಸ್ವಾಮೀಜಿ ಎಲ್ಲರಿಗೂ ಆಯೋಜಿಸಿರುವುದು ಸಂತಸದ ವಿಷಯ. ಭಾರತದ ಪುನರುತ್ಥಾನಕ್ಕೆ ಆಧ್ಯಾತ್ಮಿಕ ಶಕ್ತಿ, ಚಿಂತನೆ ಆವಶ್ಯವಿದೆ ಎಂದರು.[ನಾವು ಮತ್ತು ಆಧ್ಯಾತ್ಮಿಕತೆ]

ಶಂಕರ ಭಾರತೀ ಶ್ರೀಗಳು ಸತ್ಯ, ಸಹನೆಯಿಂದ ಧ್ಯೇಯ ಸಾಧಿಸಲು ಸಾಧ್ಯ ಎಂದರು. ಸಹಸ್ತಾರು ಮಂದಿ ಭಕ್ತರು, ವಿದ್ಯಾರ್ಥಿಗಳು ಸೌಂದರ್ಯಲಹರಿ ಪಾರಾಯಣ ಮಾಡಿದರು.

ಸಹಸ್ರ ಮಾತೆಯರ ಬಾಯಲ್ಲಿ ಸೌಂದರ್ಯಲಹರಿ

ಸಹಸ್ರ ಮಾತೆಯರ ಬಾಯಲ್ಲಿ ಸೌಂದರ್ಯಲಹರಿ

ಸಹಸ್ರ ಮಾತೆಯರು, ಮಹನೀಯರು, ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಏಕಕಂಠದಲ್ಲಿ ಸೌಂದರ್ಯಲಹರೀ ಹಾಗೂ ದಕ್ಷಿಣಾಮೂರ್ತಿ ಅಷ್ಟಕಗಳ ಸಮರ್ಪಣೆ ಮಾಡಿದರು. ಇನ್ನು ಪಠಣದಲ್ಲಿ ಸುಮಾರು 25 ಸಾವಿರಕ್ಕೂ ಅದರಲ್ಲೂ 10 ಸಾವಿರಕ್ಕೂ ಹೆಚ್ಚು ಪುಟಾಣಿಗಳು ತಮ್ಮ ಕಂಠದಿಂದ ಸೌಂದರ್ಯ ಲಹರಿ ಪಠಿಸಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಸೌಂದರ್ಯ ಲಹರಿಯಿಂದ ಆತಂಕ ದೂರ

ಸೌಂದರ್ಯ ಲಹರಿಯಿಂದ ಆತಂಕ ದೂರ

ಸ್ವಾಮಿ ವಿವೇಕಾನಂದರು ಭೋಗಪ್ರಧಾನ ಜೀವನಕ್ಕೆ ಮಾರುಹೋಗಿ ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನತ್ತಿ ಹೋದರೆ ಮುಂದಿನ ಮೂರು ತಲೆಮಾರಿನಲ್ಲಿ ಜನಾಂಗವೇ ನಾಶವಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರು. ಅವರಲ್ಲಿನ ಆ ಆತಂಕ ಇಂದು ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲರೂ ನಮ್ಮ ತನವನ್ನು ಬಿಟ್ಟು, ನಮ್ಮಲ್ಲಿನ ಸ್ವಂತಿಕೆಯನ್ನು ತೊರೆದು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದು, ಭಾರತದ ಭವ್ಯ ಪರಂಪರೆಯನ್ನು ಮರೆಯುತ್ತಿದ್ದೇವೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಸೌಂದರ್ಯಲಹರೀ ಪಾರಾಯಣ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಆತ್ಮ ವಿಶ್ವಾಸದಿಂದ ವಿಜಯ

ಆತ್ಮ ವಿಶ್ವಾಸದಿಂದ ವಿಜಯ

ಶ್ರದ್ಧೆ, ಸಹನೆ, ಸತ್ಯದ ಪ್ರಯತ್ನಗಳಿಂದ ಮಾತ್ರ ಧ್ಯೇಯ ಸಾಧಿಸಲು ಸಾಧ್ಯ. ಆತ್ಮವಿಶ್ವಾಸವಿದ್ದರೆ ವಿಜಯಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ. ಅಂತಹ ಆತ್ವವಿಶ್ವಾಸ ವೃದ್ಧಿಸುವ ವಾತಾವರಣ ಹಾಗೂ ಅನುಕೂಲಗಳನ್ನು ಸೌಂದರ್ಯ ಲಹರಿ ಮಾಡುತ್ತದೆ ಎಂದು ಶಂಕರಭಾರತೀ ಸ್ವಾಮೀಜಿಗಳು ತಿಳಿಸಿದರು.

ತಾರತಮ್ಯ ದೂರ

ತಾರತಮ್ಯ ದೂರ

ಇಷ್ಟು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸುವ ಮಹಾನ್ ಕಾರ್ಯವನ್ನು ಶಂಕರ ಭಾರತೀ ಸ್ವಾಮೀಜಿ ಮಾಡುತ್ತಿದ್ದು ವರ್ಗ, ಜಾತಿ, ಧರ್ಮದ ತಾರತಮ್ಯವನ್ನು ಅಳಿಸಿ ಹಾಕಲು ಪ್ರಯತ್ನಪಡುತ್ತಿದ್ದಾರೆ ಎಂದು ಸಚಿವ ತಿಳಿಸಿದರು.

ಏಕಭಾವದಿಂದ ಮಾತ್ರ ಐಕ್ಯತೆ

ಏಕಭಾವದಿಂದ ಮಾತ್ರ ಐಕ್ಯತೆ

ನಾವು ತೋರಿಕೆಗೆ ಎಲ್ಲರೂ ಒಂದೇ ಎಂದು ಬಿಂಬಿಸಿಕೊಂಡರೂ ಒಳಗೆ ಧರ್ಮಗ್ರಂಥ ಸೇರಿದಂತೆ ಎಲ್ಲವನ್ನೂ ವಿಂಗಡಿಸುತ್ತೇವೆ. ಎಲ್ಲರೂ ಒಂದೇ ಎಂಬ ಭಾವ ಮೂಡುವವರೆಗೂ ಐಕ್ಯತೆ ಮೂಡಲು ಸಾಧ್ಯವಿಲ್ಲ ಎಂದು ಪಾಟೀಲ್ ಹೇಳಿದರು.

ಗಣ್ಯರ ಭಾಗಿ

ಗಣ್ಯರ ಭಾಗಿ

ಸೌಂದರ್ಯ ಲಹರಿ ಪಠಣ ಕಾರ್ಯಕ್ರಮದಲ್ಲಿ ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಹೆಚ್.ವಿಶ್ವನಾಥ್, ಎಸ್.ಎ.ರಾಮದಾಸ್, ಮಾಜಿ ಮುಡಾ ಅಧ್ಯಕ್ಷ ಮೋಹನ್‍ಕುಮಾರ್, ಕೌಟಿಲ್ಯ ರಘು, ಮುಕ್ತವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸಹಸ್ರಾರು ಜನರು ಪಾಲ್ಗೊಂಡು ಪುನೀತರಾದರು.

ಫೋಟೋ ಕೃಪೆ- ನಂದನ್. ಎ

English summary
“The renaissance of our nation is not possible unless we are spiritual,” said H K Patil, Minister of Panchayath Raj and Rural Development at ‘Dashamah Soundaryalahari Parayanotsava Mahasamarpane’ organised by Vedanthabharathi at KSOU Grounds on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X