ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗಿ ಮುದ್ದೆ ತಯಾರಿಗೂ ಬಂತು ಅತ್ಯಾಧುನಿಕ ಯಂತ್ರ

By Sachhidananda Acharya
|
Google Oneindia Kannada News

ಮೈಸೂರು, ಜುಲೈ 11: ಕರ್ನಾಟಕ ಮಣ್ಣಿನ ಸೊಗಡಿನ ರಾಗಿ ಮುದ್ದೆ ತಯಾರಿಗೂ ಯಂತ್ರ ಬಂದಿದೆ. ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ಈ ಅತ್ಯಾಧುನಿಕ ಯಂತ್ರವನ್ನು ತಯಾರಿಸಿದ್ದು ಸೋಮವಾರ ಈ ಯಂತ್ರ ಲೋಕಾರ್ಪಣೆಗೊಂಡಿತು.

ರಾಗಿ ಮುದ್ದೆ ಅಂದ್ರೆ ಸಾಕು ನಮಗೆ ಥಟ್ಟನೆ ನೆನಪಾಗೋದು, ದೇವೇಗೌಡರು. ಹೀಗಾಗಿ ಅವರೇ ಈ ಯಂತ್ರವನ್ನು ಲೊಕಾರ್ಪಣೆಗೊಳಿಸಿದರು. ದೇಶದ ಪ್ರಥಮ ರಾಗಿ ಮುದ್ದೆ ತಯಾರಿಸುವ ಯಂತ್ರ ಇದಾಗಿದೆ.

ಎಚ್.ಡಿ.ದೇವೇಗೌಡ ಭಾರತದ ಪ್ರಧಾನಿಯಾಗಿದ್ದ ವೇಳೆ ಮುದ್ದೆಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಲಭಿಸಿತು. ದೇಶದ ಇತರೆ ರಾಜ್ಯಗಳ ಜನರು ಬೆರಗುಗಣ್ಣಿನಿಂದ ರಾಗಿಮುದ್ದೆಯನ್ನು ನೋಡಲು ಶುರು ಮಾಡಿದರು. ಪಂಚತಾರ ಹೋಟೆಲ್ ಗಳ ಮೆನುವಿನಲ್ಲೂ ಮುದ್ದೆಗೆ ಸ್ಥಾನ ಲಭಿಸಿತು.

ಆದರೆ ಇದರ ಮೇಕಿಂಗ್ ಸುಲಭವಾಗಿರದ ಕಾರಣ ಬಹುತೇಕರು ಮುದ್ದೆ ಮಾಡಲು ಮೂಗು ಮುರಿಯುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕಹಿ ಸತ್ಯ ಅರಿತ ಸಿಎಫ್‌ಟಿಆರ್‌ಐ ವಿಜ್ಞಾನಿಗಳನ್ನು ಮುದ್ದೆ ತಯಾರಿಸುವ ಯಂತ್ರದ ಶೋಧನೆಗೆ ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

ತಯಾರಿಸುವ ವಿಧಾನ ಹೇಗೆ?

ತಯಾರಿಸುವ ವಿಧಾನ ಹೇಗೆ?

ಮುದ್ದೆ ತಯಾರಿಸಲು ಬಳಸುವ ರಾಗಿ ಹಿಟ್ಟು, ನೀರು, ಉಪ್ಪು ಸೇರಿದಂತೆ ಮೂಲ ಕಚ್ಚಾ ಪದಾರ್ಥಗಳನ್ನು ಈ ಯಂತ್ರದಲ್ಲಿ ಹಾಕಿದರೆ ಮುದ್ದೆಯಾಗಿ ಯಂತ್ರದಿಂದ ಹೊರ ಬರುತ್ತದೆ. ಯಾವ ಗಾತ್ರಕ್ಕೆ ಬೇಕು ಎಂಬುದನ್ನೂ ಯಂತ್ರದಲ್ಲಿ ನಿರ್ಧರಿಸುವ ಅವಕಾಶವಿದೆ.

ಎಷ್ಟು ಮುದ್ದೆ ತಯಾರಾಗುತ್ತದೆ…?

ಎಷ್ಟು ಮುದ್ದೆ ತಯಾರಾಗುತ್ತದೆ…?

ಇದರ ಸಾಮರ್ಥ್ಯಕ್ಕನುಗುಣವಾಗಿ ಗಂಟೆಗೆ 250 ಕ್ಕೂ ಹೆಚ್ಚು ಮುದ್ದೆಗಳು ಯಂತ್ರ. ಅದಕ್ಕನುಗುಣವಾದ ಹಿಟ್ಟು, ಉಪ್ಪು , ನೀರು ಬೆರಸಿದರೆ ಸಾಕು. 250 ಮುದ್ದೆ ತಯಾರಿಗೆ 25 ಕೆಜಿ ಹಿಟ್ಟು ಬೇಕಾಗುತ್ತದೆ.

ಮಷಿನ್ ಗೆ ತಗಲುವ ವೆಚ್ಚವೆಷ್ಟು…?

ಮಷಿನ್ ಗೆ ತಗಲುವ ವೆಚ್ಚವೆಷ್ಟು…?

ಮುದ್ದೆ ತಯಾರಿಸುವ ನೂತನ ಮಷಿನ್ ಬೆಲೆ 3.5 ಲಕ್ಷ. ಇದನ್ನು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಏಕಕಾಲದಲ್ಲಿ ಬಳಕೆಗಾಗಿ ಉಪಯೋಗಿಸಬಹುದಾಗಿದ್ದು, ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎಂದು ಸಿಎಫ್‌ಟಿಆರ್‌ಐ ನಿರ್ದೇಶಕ ಪ್ರೊ.ರಾಮರಾಜಶೇಖರ್ ಒನ್ ಇಂಡಿಯಾಗೆ ತಿಳಿಸಿದರು.

 ಮಷಿನ್ ತಯಾರಿಸಿದ ಹಿನ್ನಲೆ

ಮಷಿನ್ ತಯಾರಿಸಿದ ಹಿನ್ನಲೆ

ಚಪಾತಿ ಮೆಷಿನ್ ಹಾಗೂ ಸ್ವಯಂಚಾಲಿತ ದೋಸೆ ಮಷಿನ್ ನನ್ನು ಮಾರುಕಟ್ಟೆಗೆ ಪ್ರಪ್ರಥಮ ಬಾರಿಗೆ ಹೊರ ತಂದಂತಹ ಕೀರ್ತಿ ಇದೇ ಸಿಎಫ್‌ಟಿಆರ್‌ಐ ಗೆ ಸಲ್ಲುತ್ತದೆ. ಇದೇ ಹಿನ್ನಲೆಯಲ್ಲಿ ಹಲವು ದಿನಗಳಿಂದ ರಾಗಿ ಮುದ್ದೆಯ ಮಷಿನ್ ನನ್ನು ತಯಾರಿಸಬೇಕೆಂಬ ಒತ್ತಡ ಬಂದ ಹಿನ್ನೆಲೆ ತನ್ನ ಕಾರ್ಯ ಕ್ಷಮತೆಯನ್ನು ಒಳಗೊಂಡ ಒಂದು ತಂಡ ತಯಾರಿಸಿ, ಸುಮಾರು 1 ವರುಷದ ಅವಧಿಯೊಳಗಾಗಿ ಈ ಮಷಿನ್ ಸಿದ್ಧಪಡಿಸಿ ಯಶಸ್ವಿಯಾಗಿದೆ.

ಮುದ್ದೆ ರುಚಿ ಸವಿದು ಆನಂದಿಸಿದ ಮಣ್ಣಿನ ಮಗ

ಮುದ್ದೆ ರುಚಿ ಸವಿದು ಆನಂದಿಸಿದ ಮಣ್ಣಿನ ಮಗ

ದೇವೇಗೌಡ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಗಿ ಮುದ್ದೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದರು. ಅದರಂತೆ ದೇವೇಗೌಡರ ಸ್ವತಃ ತಮ್ಮ ಕೈಯಿಂದಲೇ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನು ಲೋಕಾಪರ್ಣೆಗೊಳಿಸಿದರು.

ಚಾಲನೆ ನೀಡಿದ ಬಳಿಕ ರಾಗಿ ಮುದ್ದೆಯ ರುಚಿ ನೋಡುವ ಮೂಲಕ ಎಲ್ಲರ ಗಮನ ಸೆಳೆದರು. ಮುದ್ದೆ ತಯಾರಿಸುವ ವಿಧಾನವನ್ನ ಪರಿಶೀಲಿಸಿದರು. ಈ ಯಂತ್ರದಿಂದ ತಯರಾದ ಮುದ್ದೆಯನ್ನ ಒಂದು ತುತ್ತು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

English summary
CFTRI has manufactured a sophisticated machine for Ragi Mudde preparation. This machine was launched on Monday by former PM HD Devegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X