ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಕೆಆರ್ ಎಸ್ ಗೆ ಬಂದ ದೆಹಲಿ ಸಂಸದರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ,09: ಅಖಿಲ ಭಾರತ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನಾ ಸಮಿತಿಯ 20ಕ್ಕೂ ಹೆಚ್ಚು ಸಂಸದರು ಮೈಸೂರು ಕೆಆರ್ ಎಸ್‍ ಗೆ ಭೇಟಿ ನೀಡಿ ಕೆಲಕಾಲ ಅಲ್ಲಿನ ಬೃಂದಾನದಲ್ಲಿ ಕಳೆದು ಖುಷಿಪಟ್ಟರು.

ದೆಹಲಿಯ ಸಂಸತ್ ಭವನದಿಂದ ಅಖಿಲ ಭಾರತ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನಾ ಸಮಿತಿಗೆ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಆಯ್ಕೆಯಾಗಿರುವ ತಂಡ, ಸ್ಥಳೀಯ ಪ್ರದೇಶದ ಅಭಿವೃದ್ಧಿಗಳ ಪರಿಶೀಲನೆ ಮಾಡಲು ಕರ್ನಾಟಕಕ್ಕೆ ಆಗಮಿಸಿದ್ದು, ಎಲ್ಲೆಡೆ ಪ್ರವಾಸ ಮಾಡಿ ಅಧ್ಯಯನ ನಡೆಸುತ್ತಿದೆ.[ಬನ್ನಿ ಮೈಸೂರಿನ ಚುಂಚನಕಟ್ಟೆ ಜಾನುವಾರು ಜಾತ್ರೆಗೆ...]

Mysuru

ಯೋಜನಾ ಸಮಿತಿ ತಂಡ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇವಾಲಯ ಮತ್ತು ಕೆಆರ್ ಎಸ್ ಬೃಂದಾವನದ ಸಂಗೀತ ಕಾರಂಜಿಗಳನ್ನು ವೀಕ್ಷಿಸಿತು. ಈ ನಿಯೋಗಕ್ಕೆ ಉಪ ವಿಭಾಗಾಧಿಕಾರಿ ಡಾ. ಎಚ್. ಎಲ್ ನಾಗರಾಜು, ತಹಸೀಲ್ದಾರ್ ದಯಾನಂದ್, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಶಂಕರೇಗೌಡ ಅವರು ತಂಡದೊಂದಿಗಿದ್ದರು. ಈ ವ್ಯಾಪ್ತಿಯಲ್ಲಿ ಅಡ್ಡಾಡಿದ ತಂಡವು ಅಧಿಕಾರಿಗಳಿಂದ ಹಲವು ಮಾಹಿತಿ ಪಡೆದುಕೊಂಡಿದೆ.[ಸದ್ಯದಲ್ಲೇ ಮೈಸೂರಿನಲ್ಲಿ ಕಾವೇರಿ ನದಿ ಗ್ಯಾಲರಿ]

ಹುಣಸೂರಿನಲ್ಲಿ ರೈತರಿಗೆ ಭಯಹುಟ್ಟಿಸಿದ ಕಾಡಾನೆಗಳು

ಮೈಸೂರು,ಜನವರಿ,09: ಎಚ್.ಡಿ.ಕೋಟೆ, ನಂಜನಗೂಡು ವ್ಯಾಪ್ತಿಯಲ್ಲಿದ್ದ ಕಾಡಾನೆ ಹಾವಳಿ ಇದೀಗ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಾಂಚಿನ ಪ್ರದೇಶ ವ್ಯಾಪ್ತಿಯಲ್ಲಿ ಕಂಡು ಬರತೊಡಗಿದ್ದು ರೈತರು ಆತಂಕಗೊಂಡಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ನೇಗತ್ತೂರು ಗ್ರಾಮಕ್ಕೆ ಸುಮಾರು ಐದಕ್ಕೂ ಹೆಚ್ಚು ಕಾಡಾನೆಗಳು ಲಗ್ಗೆ ಇಟ್ಟಿದೆ. ಅದರಲ್ಲಿ ಬೋಮಯ್ಯ, ವೀರಭದ್ರಯ್ಯ ಮತ್ತು ಸುರೇಶ್ ಎಂಬ ರೈತರಿಗೆ ಭಾರೀ ನಷ್ಟ ತಂದೊಡ್ಡಿದೆ.[ಚೊಂಬಿನೊಂದಿಗೆ ಪಂಗನಾಮ ಹಾಕಲು ಹೊರಟವರ ಬಂಧನ]

Mysuru

ಮನೆಯ ಕಣದಲ್ಲಿ ಒಕ್ಕಣೆ ಮಾಡಿ ರಾಶಿ ಹಾಕಿದ್ದ ಭತ್ತದ ರಾಶಿ, ಒಕ್ಕಣೆಗೆ ಸಿದ್ದವಾಗಿದ್ದ ರಾಗಿ, ಹುರುಳಿ ಮೆದೆ ಹಾಗೂ ಗ್ರಾಮದ ವೀರಭದ್ರಯ್ಯ ಮತ್ತು ಸುರೇಶ್ ರವರಿಗೆ ಸೇರಿದ್ದ ರಾಗಿ ಬೆಳೆಯನ್ನು ಆನೆಗಳು ತಿಂದು ತುಳಿದು ದಾಂಧಲೆ ನಡೆಸಿ ಲಕ್ಷಾಂತರ ರೂ. ಬೆಲೆಬಾಳುವ ಫಸಲನ್ನು ನಾಶಪಡಿಸಿವೆ. ಬಳಿಕ ಅಲ್ಲಿಂದ ಶೆಟ್ಟಹಳ್ಳಿ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ.[ಕೊಡಗಿನ ಮಂಜೇಶ್ ಮಂದಣ್ಣನಂಥ ಗುರಿಕಾರ ಮತ್ತೊಬ್ಬನಿಲ್ಲ]

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಕಾಡಾನೆಗಳು ಯಾವಾಗ ಗ್ರಾಮದತ್ತ ನುಗ್ಗಿ ದಾಂಧಲೆ ಮಾಡಿ ಬಿಡುತ್ತಾವೋ ಎಂಬ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.

English summary
Above 20 MP's visited at KRS, Mysuru on Friday, January 8th. They are working in All India Institute of Local Area Planning Committee. Elephats destroyed lot of crops in agriculture land of Bomayya, Veerabhadrayya, Suresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X