ವೃದ್ಧನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಸೋಮಶೇಖರ್

Posted By:
Subscribe to Oneindia Kannada

ಮೈಸೂರು ,ಜುಲೈ 31: ರಸ್ತೆ ಬದಿ ಅಸ್ವಸ್ಥಗೊಂಡು ಕುಸಿದಿದ್ದ ವ್ಯಕ್ತಿಯೊಬ್ಬರನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಕೆ.ಆರ್.ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಗತ್ಯವಿಲ್ಲದಿದ್ದರೇ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ!

ನಗರದ ಅಗ್ರಹಾರ ಸಮೀಪದ ಪಾತಾಳ ಆಂಜನೇಯ ದೇವಾಲಯದ ಬಳಿ ಸ್ಥಳೀಯರು ಎನ್ನಲಾದ ದ್ವಾರಕನಾಥ್ ಎಂಬವರು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಈ ವೇಳೆ ಕರಗ ಮಹೋತ್ಸವದಲ್ಲಿ ಭಾಗವಹಿಸಿ ತೆರಳುತ್ತಿದ್ದ ಶಾಸಕ ಎಂ.ಕೆ.ಸೋಮಶೇಖರ್ ಅವರು ಅಸ್ವಸ್ಥ ವೃದ್ಧರನ್ನು ಗಮನಿಸಿದ್ದರು.

Shifts sick-man to hospital, MLA Somashekhar plays good Samaritan

ಕೂಡಲೇ ವೃದ್ಧರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ತಕ್ಷಣ ಆಸ್ಪತೆಯ ಸಿಬ್ಬಂದಿಗೆ ಕರೆ ಮಾಡಿ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ತಿಳಿಸಿದ್ದಾರೆ. ಈ ಮೂಲಕ ತಾವು ಕೂಡ ಸಮಾಜ ಕಾರ್ಯದಲ್ಲಿ ತೊಡಗಿ ಇತರರಿಗೆ ಮಾದರಿಯಾಗಿದ್ದಾರೆ.

Mysuru Jail :4 Prisoners Shifted From Bengaluru Parappa Jail | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Krishnaraja MLA M K Somashekar has shifted a seriously ill old man to KR Hospital. And this way Somashekhar plays good Samaritan.
Please Wait while comments are loading...