ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಬ್ಬನ ಪ್ರಾಣ ಉಳಿಸಿ ತನ್ನ ಪ್ರಾಣ ಕಳೆದುಕೊಂಡ..

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಶ್ರೀರಂಗಪಟ್ಟಣ, ಆಗಸ್ಟ್ 19: ದಿನಗೂಲಿ ನೌಕರನೊಬ್ಬ ವಿದ್ಯುತ್ ಅವಘಡದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದ ಲೈನ್ ಮ್ಯಾನ್ ನನ್ನು ಉಳಿಸಿ, ತನ್ನ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಸಬ್ಬನಕುಪ್ಪೆ ಗ್ರಾಮದಲ್ಲಿ ನಡೆದಿದೆ.[ಈ ಹಳ್ಳಿಯಲ್ಲಿ ಸತ್ತರೆ ಮಣ್ಣು ಮಾಡುವವರೂ ಗತಿಯಿಲ್ಲ!]

ಗ್ರಾಮದ ನಿವಾಸಿ ಕರಿಯಪ್ಪ ಎಂಬುವರ ಪುತ್ರ ಗೋಪಾಲ್ (40) ಪ್ರಾಣ ಕಳೆದುಕೊಂಡ ದುರ್ದೈವಿ. ಈತ ಜಮೀನಿನಲ್ಲಿ ಕೆಲಸವಿಲ್ಲದ ಸಮಯದಲ್ಲಿ ವಿದ್ಯುತ್ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Saved other lives, lost his

ಈ ನಡುವೆ ಮಲ್ಲೇಗೌಡನ ಕೊಪ್ಪಲು ರಸ್ತೆಯ ಹಾಲು ಉತ್ಪಾದಕರ ಸಂಘದ ಮುಂಭಾಗದಲ್ಲಿದ್ದ ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿತ್ತು. ಅದನ್ನು ದುರಸ್ತಿಪಡಿಸಲು ಲೈನ್ ಮ್ಯಾನ್ ಮಂಜು ಎಂಬಾತ ವಿದ್ಯುತ್ ಕಂಬ ಏರಿದ್ದ. ಆ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಪ್ರಾಣ ಸಂಕಟದಲ್ಲಿ ಒದ್ದಾಡುತ್ತಿದ್ದರು.[ಮೋಂಬತ್ತಿ ಉರುಳಿಬಿದ್ದು ಹೊತ್ತಿ ಉರಿದ ಮದ್ಯವ್ಯಸನಿ]

ಆಗ ಅದೇ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದ ಗೋಪಾಲ್, ತಕ್ಷಣ ಕಂಬ ಏರಿ ಮರದ ತುಂಡಿನಿಂದ ಲೈನ್ ಮ್ಯಾನ್ ಮಂಜು ಅವರನ್ನು ಕೆಳಕ್ಕೆ ತಳ್ಳಿ ರಕ್ಷಿಸಿದ್ದಾರೆ. ಆದರೆ ಲೈನ್ ಮ್ಯಾನ್ ಪ್ರಾಣ ಉಳಿಸಿದ ಗೋಪಾಲ್ ಗೆ ಕಂಬದಿಂದ ಇಳಿಯುವಾಗ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

English summary
A person who saved lineman, lost his lives in Mysuru district Sriranagapattana taluk sabbanakuppe village. While repairing a transformer lineman met with electric shock. Villager saved his lives, but he died by electric shock.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X