ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಶಿಕಲಾ ನಟರಾಜನ್ ಸಿಎಂ ಆಗಬಾರದು : ಮೈಸೂರಿನಲ್ಲಿ ಪ್ರತಿಭಟನೆ

By Ananthanag
|
Google Oneindia Kannada News

ಮೈಸೂರು, ಫೆಬ್ರವರಿ 10 : ತಮಿಳುನಾಡಿನಲ್ಲಿ ರಾಜಕೀಯ ಅರಾಜಕತೆ ಉಂಟಾದ ಹಿನ್ನಲೆಯಲ್ಲಿ ಅದನ್ನು ಖಂಡಿಸಿ ಹಾಗೂ ಶಶಿಕಲಾ ನಟರಾಜನ್ ಸಿಎಂ ಆಗಬಾರದೆಂದು ಒತ್ತಾಯಿಸಿ ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ ಅಂಚೆ ಚಳುವಳಿ ಮೂಲಕ ಪ್ರತಿಭಟನೆ ನಡೆಸಿದೆ.

ಮೈಸೂರಿನ ಚಾಮುಂಡಿಪುರಂ ಸರ್ಕಲ್ ನಲ್ಲಿರುವ ಪೊಲೀಸ್ ಆಫೀಸ್ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬೇಕು ಎಂದು ಒತ್ತಾಯಿಸಿದರು. ಅಂಚೆ ಕಾರ್ಡ್ ನ್ನು ಪೋಸ್ಟ್ ಬಾಕ್ಸ್ ಗೆ ಹಾಕಿ, ಶಶಿಕಲಾ ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.[ತಮಿಳುನಾಡು 'ರೆಸಾರ್ಟ್ ರಾಜಕಾರಣ'ದ ವರದಿ ಕೇಳಿದ ಹೈಕೋರ್ಟ್..]

Sasikala should not become Tamilnadu Chief Minister protest in mysuru

ವೇತನ ನೀಡದ ಹಿನ್ನೆಲೆ : ಪೌರಕಾರ್ಮಿಕರಿಂದ ಪ್ರತಿಭಟನೆ

ಮೈಸೂರು: ವೇತನ ನೀಡದ ಹಿನ್ನೆಲೆಯಲ್ಲಿ ಮೈಸೂರಿನ ಚಲುವಾಂಬ ಆಸ್ಪತ್ರೆಯ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರು ಮಾತನಾಡಿ ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಲಾಗುತ್ತಿಲ್ಲ. ಕೇವಲ ರು.4,500 ಗಳನ್ನಷ್ಟೇ ನೀಡಲಾಗಿದೆ. ಚೆಲುವಾಂಬ ಆಸ್ಪತ್ರೆ ಶುಚಿಗೊಳಿಸಲು ರಾಮಚಂದ್ರ ಎಂಬವರು ಗುತ್ತಿಗೆಗೆ ಲಕ್ಷಾಂತರ ರೂ. ಹಣ ಪಡೆದಿದ್ದರೂ ಪೌರಕಾರ್ಮಿಕರಿಗೆ ವೇತನ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.[ಕನಿಷ್ಠ ಕೂಲಿ ನೀಡದ ಮಾಲೀಕರಿಗೆ ಒದಗಿ ಬಂತು ಸಂಕಷ್ಟ]

Sasikala should not become Tamilnadu Chief Minister protest in mysuru

ಆಸ್ಪತ್ರೆಯನ್ನೂ ಶುಚಿಗೊಳಿಸದೇ ಪೌರಕಾರಮಿಕರು ಪ್ರತಿಭಟನೆ ನಡೆಸುತ್ತಿದ್ದು, ಹೆರಿಗೆಗೆ ಗರ್ಬಿಣಿಯರು, ಬಾಣಂತಿಯರಿಗೆ ಕಸಿವಿಸಿಯುಂಟಾಗಿದೆ. ನೂರಾರು ಹೆರಿಗೆ ಆಗುವ ಆಸ್ಪತ್ರೆಯಲ್ಲಿ ಈಗ ಅಶುಚಿತ್ವ ಕಾಡಿದೆ. ತೊಂಬತ್ತು ಮಂದಿ ಪೌರಕಾರ್ಮಿಕರು ಪ್ರತಿದಿನ ಆಸ್ಪತ್ರೆಯನ್ನು ಶುಚಿಗೊಳಿಸುತ್ತಿದ್ದರು. ಶುಕ್ರವಾರ ಶುಚಿಗೊಳಿಸದೇ ಪ್ರತಿಭಟನೆಗಿಳಿದಿರುವುದು ರೋಗಿಗಳಲ್ಲಿ ಆತಂಕ ಮೂಡಿಸಿದೆ.

English summary
Mysore Prajnavantha Nagarikara Vedike organized protest against All India Anna Dravida Munetra Kazhagam (AIDMK) leader Sasikala on Feb. 10th. Protestors urged that Sasikala should not become Tamilnadu Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X